ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು ವಶಪಡಿಸಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಟ್ರೂತ್ ಪೋಸ್ಟ್ ಮಾಡಿರುವ ಅವರು, “ಇರಾನ್ ಧ್ವಜ ವಿರುವ ಸುಮಾರು 900 ಅಡಿ ಉದ್ದದ ಹಡಗು ಟೂಸ್ಕಾ ನಮ್ಮ ನೌಕಾ ದಿಗ್ಬಂಧನವನ್ನು ದಾಟಲು ಪ್ರಯತ್ನಿಸಿತು. ಹಲವು ಬಾರಿ ಎಚ್ಚರಿಕೆ ನೀಡಿದರೂ ಇರಾನ್ ಸಿಬ್ಬಂದಿ ನಮ್ಮ ಮಾತು ಕೇಳಲಿಲ್ಲ. ಹೀಗಾಗಿ ನಮ್ಮ ನೌಕಾಪಡೆಯು ಕ್ಷಿಪಣಿ ಧ್ವಂಸಕ ನೌಕೆ ಯುಎಸ್‌ಎಸ್ ಸ್ಪ್ರೂಯನ್ಸ್ ಇರಾನ್ ಹಡಗಿನ ಮೇಲೆ ದಾಳಿ ನಡೆಸುವ ಮೂಲಕ ತಡೆಯೊಡ್ಡಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ
ಇರಾನ್ ಸಶಸ್ತ್ರ ಪಡೆಗಳು ಈ ಕ್ರಿಯೆಯನ್ನು “ಸಶಸ್ತ್ರ ಕಡಲ್ಗಳ್ಳತನ” ಎಂದು ತೀವ್ರವಾಗಿ ಖಂಡಿಸಿವೆ. ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಈ ಘಟನೆಯನ್ನು “ಅಮೆರಿಕದ ದೌರ್ಜನ್ಯ” ಎಂದು ವಿವರಿಸಿದೆ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…