ಮನರಂಜನೆ

ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್ಸ್!

ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರ

ಮಿನ್ನಲ್ ಮುರಳಿ’ ಮತ್ತು ‘2018 – ಎವ್ರಿಒನ್​​ ಈಸ್ ಎ ಹೀರೋ’ ಚಿತ್ರಗಳ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಮಲೆಯಾಳಂ ನಟ ಟೊವಿನೋ ಥಾಮಸ್.‌ ಸದಾ ವಿಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುವ ಜನಪ್ರಿಯ ನಟನೀಗ “ಎಆರ್​​ಎಂ​​” (Ajayante Randam Moshanam /ಅಜಯಂತೇ ರಂದಮ್ ಮೋಷನಂ) ಎಂಬ ಫ್ಯಾಂಟಸಿ ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.

ಜಿತಿನ್ ಲಾಲ್ ನಿರ್ದೇಶನದ ಚೊಚ್ಚಲ ಚಿತ್ರ. ಸಿನಿಮಾ ಸಂಪೂರ್ಣವಾಗಿ 3ಡಿಯಲ್ಲಿ ತಯಾರಾಗಿದೆ. ಮಲಯಾಳಂ ಇತಿಹಾಸದಲ್ಲೇ ತಾಂತ್ರಿಕ ವಿಷಯದಲ್ಲಿ ಶ್ರೀಮಂತ ಚಿತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಬಿಡುಗಡೆಯಾಗಿ
ಟ್ರೇಲರ್ ಚಿತ್ರದ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಹಿಂಸಾಚಾರ ಮತ್ತು ನಾಯಕನ ಪ್ರವೇಶವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಎಆರ್​​ಎಂ ಭರ್ಜರಿ ಆ್ಯಕ್ಷನ್​ ಸೀನ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಎಂಬ ಸುಳಿವನ್ನು ಈ ಟ್ರೇಲರ್​​ ಕೊಟ್ಟಿದೆ.

ಟೊವಿನೋ ಥಾಮಸ್​​​ ಮೂರು ವಿಭಿನ್ನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ಹೋರಾಟವಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

1 hour ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

5 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

5 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

5 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

6 hours ago