ಎಡಿಟೋರಿಯಲ್

ಉಮರ್ ಸೆರೆವಾಸದ ಸಾವಿರ ದಿನ ಮತ್ತು ಜಮೀನು ಜಿಹಾದಿನ ಲೊಳಲೊಟ್ಟೆ

 ಹುತೇಕ ವಾಟ್ಸ್ಯಾಪ್ ಯೂನಿವರ್ಸಿಟಿ ಫ್ಯಾಕ್ಟರಿಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳು ಆಕ್ರಮಣಕಾರಿ ಹಿಂದುತ್ವದ ಆಕ್ರೋಶವನ್ನು ಉತ್ಪಾದಿಸಿ ಮುಖ್ಯಧಾರೆಯ ಟಿವಿ ಸುದ್ದಿ ವಾಹಿನಿಗಳಿಗೆ ಉಣಬಡಿಸುತ್ತವೆಸುದ್ದಿವಾಹಿನಿಗಳು ಉತ್ಪಾದಿಸಿ ಬಡಿಸಿದ ಆಕ್ರೋಶವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳು ಮತ್ತೊಮ್ಮೆ ಉಂಡು ಘರ್ಜಿಸುತ್ತವೆಈ ಎರಡೂ ಮಾಧ್ಯಮಗಳ ನಡುವೆ ನಿರಂತರ ನಡೆಯುತ್ತಿರುವ ಆಕ್ರೋಶದ ಭರ್ಜರಿ ವಿನಿಮಯವಿದುಆಕ್ರಮಣಕಾರಿ ಹಿಂದುತ್ವದ ಪ್ರಯೋಗಶಾಲೆಯಲ್ಲಿ ತಯಾರಿಸಿದ ವಿಷಪಾಕಆಳುವ ಪಕ್ಷದ ವಿಷಯಸೂಚಿಗೆ ನಾಲಗೆಗಳು ನೂರು ಸಾವಿರ ಆಗುವಸಾವಿರಗಳು ಲಕ್ಷಗಳಾಗುವಲಕ್ಷಗಳು ದಶಲಕ್ಷಗಳಾಗುವ ವಿನಿಮಯದ ಆಟವಿದುಈ ಅಪಾಯಕಾರಿ ಆಟದಿಂದ ದೂರ ಉಳಿವ ಮುಖ್ಯಧಾರೆಯ ಸುದ್ದಿ ವಾಹಿನಿಗಳನ್ನು ಬೆರಳಲ್ಲಿ ಎಣಿಸಬಹುದೇನೋ.

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತು ಅಲ್ಲಿನ ಶಿಕ್ಷಕವಿದ್ಯಾರ್ಥಿ ಸಮೂಹಕ್ಕೆ ದೇಶದ್ರೋಹಿ ಪಟ್ಟ ಕಟ್ಟಿದ್ದು ಇಂತಹುದೇ ಒಂದು ನಿರ್ಮಿತಿಉಮರ್ ಖಾಲಿದ್ ದೇಶದ್ರೋಹಿ ಲವ್ ಜಿಹಾದ್ಜಮೀನು ಜಿಹಾದ್ ಎಂಬ ಮಿಥ್ಯೆಗಳು ಕೂಡ ಇದೇ ಸಾಲಿಗೆ ಸೇರಿದಂಥವುಆಳುವವರ ಮಡಿಲಲ್ಲಿ ಆಡುವ ಜನವಿರೋಧಿ ಮೀಡಿಯಾ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಅಪಪ್ರಚಾರದ ಹೆದ್ದೆರೆಗಳನ್ನು ಎಬ್ಬಿಸುವ ಬಿಜೆಪಿಯ ಐ.ಟಿ.ಸೆಲ್ ಪಾತ್ರ ಈ ನಿರ್ಮಿತಿಯಲ್ಲಿ ಬಹು ದೊಡ್ಡದು.

ಸಾಮಾಜಿಕರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಅವರನ್ನು ತಿಹಾರ್ ಜೈಲಿಗೆ ಕಳಿಸಿ ಸಾವಿರಕ್ಕೂ ಹೆಚ್ಚು ದಿನಗಳು ಉರುಳಿವೆಕಪೋಲ ಕಲ್ಪಿತ ಆಪಾದನೆಗಳನ್ನು ಹೊರಿಸಿವಿಚಾರಣೆಯೇ ಇಲ್ಲದೆ ಸಾವಿರ ದಿನಗಳ ಕಾಲ ವ್ಯಕ್ತಿಯೊಬ್ಬನನ್ನು ಜೈಲಿನಲ್ಲಿ ಕೊಳೆಯಿಸುವ ಈ ಕ್ರೌರ್ಯ ಎಣೆಯಿಲ್ಲದ್ದು.

ಉಮರ್ ಖಾಲಿದ್ ಅವರನ್ನು ಬಂಧಿಸಿದ್ದು 2020ರ ಸೆಪ್ಟೆಂಬರ್ 13ರಂದು. 1967ರ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯಿದೆಯನ್ನು (ಯುಎಪಿಎಅವರಿಗೆ ಅನ್ವಯಿಸಲಾಗಿತ್ತುಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಜರುಗಿದ್ದ ಕೋಮುಗಲಭೆಗಳ ಸಂಚನ್ನು ಹೂಡಿದರೆಂಬುದು ಈತನ ಮೇಲೆ ಹೊರಿಸಲಾದ ಆಪಾದನೆಮೂರು ವರ್ಷಗಳು ಉರುಳಿದ ನಂತರವೂ ಈತ ವಿಚಾರಣಾಧೀನ ಬಂಧಿಈತನ ಜಾಮೀನು ಅರ್ಜಿಯನ್ನು ಸತತವಾಗಿ ತಿರಸ್ಕರಿಸುತ್ತ ಬರಲಾಗಿದೆ.

ದೆಹಲಿ ವಿಧಾನಸಭೆ ಚುನಾವಣೆಯ ಹೊತ್ತುಸಿಎಎ ವಿರೋಧಿಗಳನ್ನು ಉದ್ದೇಶಿಸಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ ಹಾಕಿದ್ದ ಘೋಷಣೆ– ದೇಶ್ ಕೇ ಗದ್ದಾರೋಂ ಕೋಗೋಲೀ ಮಾರೋ ಸಾಲೋಂಕೋಗೋಲೀ ಮಾರೋ ಸಾಲೋಂಕೋ ಎಂಬ ಮೂರು ಪದಗಳನ್ನು ಸಭಿಕರಿಂದಲೂ ಕೂಗಿಸಿದ್ದರು ಕೇಂದ್ರ ಸಚಿವರು.

ಇಂತಹ ಪ್ರಚೋದನಕಾರಿ ಭಾಷಣ ಮಾಡಿದ ಸಚಿವ ಠಾಕೂರ್ ಅವರಿಗೆ ಮೋದಿ ಸಚಿವ ಸಂಪುಟದಲ್ಲಿ ರಾಜ್ಯ ಸಚಿವ ಪದವಿಯಿಂದ ಕ್ಯಾಬಿನೆಟ್ ದರ್ಜೆಗೆ ಬಡ್ತಿ ದೊರೆಯಿತುದೆಹಲಿ ಕೋಮು ಗಲಭೆಗಳನ್ನು ಪ್ರಚೋದಿಸಿದ ಮತ್ತೊಬ್ಬ ಬಿಜೆಪಿಗ ಕಪಿಲ್ ಮಿಶ್ರ ಅವರ ಕೂದಲೂ ಕೊಂಕಿಲ್ಲಆದರೆ ಅಮಾಯಕ ಉಮರ್ ಖಾಲಿದ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ್ದುಸಿ..ಮತ್ತು ಎನ್.ಆರ್.ಸಿಕಾಯಿದೆಗಳನ್ನು ವಿರೋಧಿಸಿದ್ದು ಉಮರ್ ಖಾಲಿದ್ ‘ಮಹಾಪರಾಧ’.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮನೋಹರ ಪರ್ವತ ಪಟ್ಟಣ ಪುರೋಲಾಹಿಮದ ಹೊದಿಕೆ ಹೊದ್ದ ಪರ್ವತಗಳುದಟ್ಟ ದೇವದಾರು ಮತ್ತು ಶಂಕುಧಾರಿ ವೃಕ್ಷಗಳ ಅಡವಿಗಳ ಪ್ರಾಕೃತಿಕ ವಾತಾವರಣಅಲ್ಲದೆ ಜನ ಪ್ರಿಯ ಪ್ರವಾಸಿ ತಾಣಹಿಂದಿ ಮತ್ತು ಗಢವಾಲೀ ಇಲ್ಲಿ ಆಡುವ ಭಾಷೆಗಳು.

ದೇವಭೂಮಿಯನ್ನು ಉಳಿಸಿಜಿಹಾದಿಗಳನ್ನು ಓಡಿಸಿ’ ಎಂಬ ಘೋಷಣೆಯ ರಣಕೇಕೆ ಇತ್ತೀಚಿನ ದಿನಗಳಲ್ಲಿ ಪುರೋಲಾದಿಂದ ಹೊರಟು ರಾಜ್ಯಾದ್ಯಂತ ಅನುರಣಿಸತೊಡಗಿದೆ. ‘ಮುಸಲ್ಮಾನ ಮುಕ್ತ ಉತ್ತರಾಖಂಡ’ದ ತಹತಹವನ್ನು ಬಡಿದು ಎಬ್ಬಿಸಲಾಗುತ್ತಿದೆ.

ಪುರೋಲಾದ ಈ ದ್ವೇಷಮಯ ವಿದ್ಯಮಾನದಲ್ಲಿ ನಿರ್ದಿಷ್ಟ ವಿನ್ಯಾಸವನ್ನು ಗುರುತಿಸಲಾಗಿದೆಉತ್ತರಾಖಂಡದ ಉದ್ದಗಲಕ್ಕೆ ಹೆಣೆಯಲಾಗುತ್ತಿರುವ ಕೋಮುವಾದಿ ವಿನ್ಯಾಸವಿದು. 2021ರ ಡಿಸೆಂಬರ್ ತಿಂಗಳಲ್ಲಿ ಹರಿದ್ವಾರದಲ್ಲಿ ಜರುಗಿದ ಧರ್ಮ ಸಂಸತ್ತಿನಲ್ಲಿ ಜನಾಂಗೀಯ ಹತ್ಯೆಯ ಕರೆ ನೀಡಲಾಗಿತ್ತುಅಂದಿನಿಂದಲೂ ದೇವಭೂಮಿಯ ಸ್ಥಾಪನೆ ಮತ್ತು ಮುಸಲ್ಮಾನರ ಉಚ್ಚಾಟನೆಯ ಕೂಗುಗಳು ಕೇಳಿ ಬರುತ್ತಲೇ ಇವೆ.

ಕಳೆದ ಮೇ 26ರಂದು ಪುರೋಲಾದಲ್ಲಿ ಹಿಂದೂ ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳು ಇಬ್ಬರು ಹುಡುಗರೊಂದಿಗೆ ಇದ್ದದ್ದನ್ನು ಹಿಂದೂ ಗುಂಪೊಂದು ಕಂಡು ರೊಚ್ಚಿಗೆದ್ದಿತ್ತುಇಬ್ಬರು ಹುಡುಗರ ಪೈಕಿ ಒಬ್ಬನು ಮುಸಲ್ಮಾನನಾಗಿದ್ದುದೇ ಈ ಆಕ್ರೋಶಕ್ಕೆ ಕಾರಣಲವ್ ಜಿಹಾದ್ ಬಣ್ಣ ಬಳಿಯಲಾಯಿತುಹುಡುಗಿಯನ್ನು ಅಪಹರಿಸಲಾಗಿದೆ ಎಂದು ವದಂತಿ ಹಬ್ಬಿಸಲಾಯಿತುಆದರೆ ಹುಡುಗಿ ತನ್ನ ಮನೆಯಲ್ಲಿದ್ದಾಳೆಹುಡುಗರು ಪೊಲೀಸ್ ವಶದಲ್ಲಿದ್ದಾರೆ.

ಇಡೀ ಪ್ರಕರಣಕ್ಕೆ ಕೋಮುವಾದಿ ತಿರುವು ನೀಡಿ ಪುರೋಲಾದ ಮುಸಲ್ಮಾನರನ್ನು ಬೆದರಿಸಲಾಗಿದೆಮುಸಲ್ಮಾನರ ಅಂಗಡಿಗಳುಮನೆಗಳನ್ನು ಖಾಲಿ ಮಾಡಿಸಿ ಊರು ಬಿಡಿಸಲಾಗುತ್ತಿದೆಜಿಲ್ಲಾಡಳಿತ ಮೂಕಪ್ರೇಕ್ಷಕನಾಗಿದೆಮೇ 28ರಂದು ಹಿಂದೂ ರಕ್ಷಾ ಅಭಿಯಾನವು ಪುರೋಲಾದಲ್ಲಿ ಪ್ರದರ್ಶನವೊಂದನ್ನು ನಡೆಸಿತು. ‘ಮುಸಲ್ಮಾನಮುಕ್ತ ಉತ್ತರಾಖಂಡ’ದ ಘೋಷಣೆಗಳನ್ನು ಕೂಗಲಾಯಿತುಪ್ರತಿಭಟನಾಕಾರರು ಮುಸಲ್ಮಾನರ ಅಂಗಡಿಗಳ ನಾಮಫಲಕಗಳನ್ನು ಒಡೆದು ಹಾಕಿದರುಹಲವು ಅಂಗಡಿಗಳ ಮೇಲೆ ಹಿಟ್ಲರನ ಕಾಲದ ಜರ್ಮನಿಯಲ್ಲಿ ಯಹೂದಿಗಳ ಮನೆಗಳು ಮತ್ತು ಅಂಗಡಿಗಳ ಮೇಲೆ ಬರೆದಂತೆಯೇ ಕಪ್ಪು ಬಣ್ಣದ ಕ್ರಾಸ್ (x) ಬರೆಯಲಾಯಿತು.

ಲವ್ ಜಿಹಾದ್’ ಜೊತೆ ಜೊತೆಗೆ ಹಿಂದೂಗಳ ಜಮೀನನ್ನು ಕಬಳಿಸುವ ‘ಜಮೀನು ಜಿಹಾದ್’ನಲ್ಲೂ ಮುಸಲ್ಮಾನರು ತೊಡಗಿದ್ದಾರೆ ಎಂಬ ಮತ್ತೊಂದು ಗುಮ್ಮನನ್ನು ಬಡಿದೆಬ್ಬಿಸಲಾಗಿದೆಉತ್ತರಾಖಂಡದ ಬಿಜೆಪಿ ಸರ್ಕಾರವೇ ಈ ಅಪಪ್ರಚಾರದ ಮುಂಚೂಣಿಯಲ್ಲಿದೆ. ‘ದಿ ವೈರ್’ ಅಂತರ್ಜಾಲ ಸುದ್ದಿತಾಣ ಮಾಹಿತಿ ಹಕ್ಕಿನ ಮೇರೆಗೆ ಇತ್ತೀಚೆಗೆ ಉತ್ತರಾಖಂಡ ಸರ್ಕಾರಕ್ಕೆ ಕೇಳಿ ಪಡೆದ ಮಾಹಿತಿ ಈ ಜಿಹಾದ್‌ಗಳ ಮಿಥ್ಯೆಯ ಟೊಳ್ಳನ್ನು ಬಯಲಿಗೆಳೆದಿದೆ.

ಪ್ರಶ್ನೆ– ‘ಜಮೀನು ಜಿಹಾದ್’ ಪದಪುಂಜವನ್ನು ಉತ್ತರಾಖಂಡ ಸರ್ಕಾರ ಹೇಗೆ ವ್ಯಾಖ್ಯಾನಿಸುತ್ತದೆ?

ಉತ್ತರಮಾಹಿತಿ ಲಭ್ಯವಿಲ್ಲ.

ಪ್ರಶ್ನೆಕಳೆದ ಐದು ವರ್ಷಗಳಲ್ಲಿ ‘ಜಮೀನು ಜಿಹಾದ್’ನ ಎಷ್ಟು ಪ್ರಕರಣಗಳು ಉತ್ತರಾಖಂಡದಲ್ಲಿ ವರದಿಯಾಗಿವೆ?

ಉತ್ತರಮಾಹಿತಿ ಲಭ್ಯವಿಲ್ಲ.

ಪ್ರಶ್ನೆಮಾರಾಟಗಾರರು ಮತ್ತು ಖರೀದಿದಾರರ ಧರ್ಮಗಳನ್ನು ಆಧರಿಸಿ ಜಮೀನು ಮಾರಾಟಖರೀದಿಯ ಮಾಹಿತಿಯನ್ನು ಉತ್ತರಾಖಂಡ ಸರ್ಕಾರ ಹೊಂದಿದೆಯೇ?

ಉತ್ತರ– ಇಲ್ಲ.

ಪ್ರಶ್ನೆಜಮೀನು ಜಿಹಾದ್ ಪ್ರಕರಣಗಳ ಜಿಲ್ಲಾವಾರು ಮತ್ತು ವರ್ಷವಾರು ಅಂಕಿ ಅಂಶಗಳು– ಮಾಹಿತಿಯನ್ನು ದಯವಿಟ್ಟು ಒದಗಿಸಿ.

ಉತ್ತರ– ಮಾಹಿತಿ ಲಭ್ಯವಿಲ್ಲ.

ಪ್ರಶ್ನೆ– ಜಮೀನು ಜಿಹಾದ್ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮೇಲೆ ಯಾವ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ?

ಉತ್ತರ– ಮಾಹಿತಿ ಲಭ್ಯವಿಲ್ಲ.

ಉತ್ತರಾಖಂಡದಲ್ಲಿ ಹಳೆಯ ಪಿಂಚಣಿ ಯೋಜನೆ ಮತ್ತು ಉದ್ಯೋಗಾವಕಾಶಗಳಿಗಾಗಿ ಹಾಹಾಕಾರ ಏಳುತ್ತಿದೆಈ ಹಾಹಾಕಾರವನ್ನು ಅಡಗಿಸಿ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲೆಂದೇ ‘ಲವ್ ಜಿಹಾದ್’ ಮತ್ತು ‘ಜಮೀನು ಜಿಹಾದ್’ ಕೂಗುಗಳನ್ನು ತಾರಕಕ್ಕೆ ಏರಿಸಲಾಗುತ್ತಿದೆ ಎಂಬ ಗುಮಾನಿಯಿದೆ.

ಉತ್ತರಾಖಂಡದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ನಡೆದಿದೆಪುರೋಲಾ ಕೋಮುವಾದಿ ಪ್ರಕರಣವನ್ನು ಆಧರಿಸಿ ಕೋಮುವಾದಿ ಸಂಘಟನೆಗಳು ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿವೆ.

 

ದ್ವೇಷ ಭಾಷಣಗಳಲ್ಲಿ ತೊಡಗಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಉತ್ತರಾಖಂಡದೆಹಲಿ ಹಾಗೂ ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ಕೋರ್ಟು 2022ರ ಡಿಸೆಂಬರ್ ತಿಂಗಳಿನಲ್ಲೇ ನಿರ್ದೇಶನ ನೀಡಿತ್ತುಆದರೆ ಪುರೋಲಾದಲ್ಲಿ ಕಳೆದ ಎರಡು ವಾರಗಳಿಂದ ಅನಾವರಣಗೊಳ್ಳುತ್ತಿರುವ ಕಳವಳಕಾರಿ ವಿದ್ಯಮಾನವು ಉತ್ತರಾಖಂಡ ರಾಜ್ಯ ಸರ್ಕಾರ ಮತ್ತು ಪೊಲೀಸರು ಈ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ ಎಂಬ ಅಂಶವನ್ನು ಸಾರಿ ಹೇಳಿದೆದ್ವೇಷವನ್ನು ಬಿತ್ತಿ ಬೆಳೆ ತೆಗೆದು ಅದರ ವ್ಯಾಪಾರ ಮಾಡುವುದು ಆತ್ಮಘಾತಕ ಮತ್ತು ಸಮಾಜಘಾತಕ.

andolanait

Recent Posts

ಐತಿಹಾಸಿಕ ಸಂಸತ್ ಅಧಿವೇಶನಕ್ಕೆ ದಿನಗಣನೆ!

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ನಿರ್ಧಾರ  ಏಪ್ರಿಲ್ ೧೬ರಿಂದ ೧೮ರವರೆಗೆ ಮೂರು ದಿನಗಳ ಕಾಲ ಸಂಸತ್ತಿನ…

2 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್, ಬಿಜೆಪಿ ಪಾಳೆಯದಲ್ಲಿ ಮಿಶ್ರಭಾವನೆ ಹುಟ್ಟು ಹಾಕಿದ ಉಪಚುನಾವಣೆ

ಅಭ್ಯರ್ಥಿಗಳ ಗೆಲುವಿಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು…

9 mins ago

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…

3 hours ago

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು  ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…

3 hours ago

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ…

3 hours ago

ಸರಸ್ವತಿಪುರಂ ಕಲ್ಯಾಣಿಗೆ ಪುನಶ್ಚೇತನ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್…

3 hours ago