Andolana originals

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ

ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು 

ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ ಮತ್ತೆರಡು ಹೊಸ ಕ್ಷೇತ್ರ ರಚನೆ 

ಮೈಸೂರು: ದೇಶಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯ ಮುಗಿದ ಬಳಿಕ ಲೋಕ ಸಭೆ, ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್ ವಿಂಗಡಣೆಯ ಗುಮ್ಮ ಕಾಡಲು ಶುರು ವಾಗಿದೆ.

ಶೇ.೩೩ ಮಹಿಳಾ ಮೀಸಲಾತಿ ಜಾರಿಯಾದರೆ ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ನಾಲ್ಕರಿಂದ ಐದು ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಕಾರಣದಿಂದ ಯಾವ ಕ್ಷೇತ್ರ ಕಳೆದು ಹೋಗುತ್ತದೆ ಎನ್ನುವ ಗುಮ್ಮ ಈಗ ಪುರುಷ ಜನಪ್ರತಿನಿಽಗಳನ್ನು ಕಾಡಲು ಶುರುವಾಗಿದೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಸ್ಪಽಸಲು ಬಯಸಿರುವ ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಪಕ್ಷ ಸಂಘಟನೆ ಮಾಡಿದರೂ ವೈಯಕ್ತಿಕ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ಸ್ವಲ್ಪ ಹಿಂದೇಟು ಹಾಕುವುದಕ್ಕೆ ಕಾರಣವಾಗಿದೆ.

ಬೆಂಗಳೂರಿನ ನಂತರ ರಾಜಕೀಯವಾಗಿ ಅತಿಹೆಚ್ಚು ಗಮನ ಸೆಳೆಯುವ ಹಾಗೂ ಬದಲಾವಣೆಗೆ ದಿಕ್ಸೂಚಿಯಾಗುವ ಜಿಲ್ಲೆಗಳಲ್ಲಿ ಮೈಸೂರು ಕೂಡ ಒಂದಾಗಿದೆ. ಡಿ.ದೇವರಾಜ ಅರಸು, ಸಿದ್ದರಾಮಯ್ಯ ಅವರಂತಹ ಮುಖ್ಯ ಮಂತ್ರಿ ಗಳನ್ನು ಕಂಡಿರುವ ಜಿಲ್ಲೆಯಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆದು ಇತಿಹಾಸದ ಪುಟ ಸೇರಿವೆ. ಈಗ ಜಿಲ್ಲೆಯು ಚಾಮರಾಜ, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ, ವರುಣ, ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾ ಪಟ್ಟಣ, ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ಗಳನ್ನು ಹೊಂದಿದೆ. ಇದರಲ್ಲಿ ಚಾಮುಂ ಡೇಶ್ವರಿ, ನರಸಿಂಹರಾಜ, ಚಾಮರಾಜ ಕ್ಷೇತ್ರ ದೊಡ್ಡ ಕ್ಷೇತ್ರಗಳಾಗಿದ್ದರೆ, ಎಚ್.ಡಿ.ಕೋಟೆ, ಕೆ. ಆರ್. ನಗರ ಕ್ಷೇತ್ರಗಳು ತಮ್ಮ ಪ್ರದೇಶವನ್ನು ವಿಸ್ತರಿಸಿಕೊಂಡಿರುವ ಪರಿಣಾಮವಾಗಿ ಎಚ್.ಡಿ.ಕೋಟೆ ಮತ್ತು ಸರಗೂರು, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳನ್ನು ರಚಿಸಲಾಗಿದೆ.

೨೦೦೮ರಲ್ಲಿ ವರುಣ ಕ್ಷೇತ್ರ ಉದಯ: ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಯಾದ ಸಂದರ್ಭದಲ್ಲಿ ಹೊಸದಾಗಿ ವರುಣ ಕ್ಷೇತ್ರ ಉದಯವಾಯಿತು. ಪರಿಶಿಷ್ಟ ಜಾತಿಗೆ ಮೀಸ ಲಾಗಿದ್ದ ಎಚ್.ಡಿ.ಕೋಟೆ ಪರಿಶಿಷ್ಟ ಪಂಗಡಕ್ಕೆ ದಕ್ಕಿತು. ಸಾಮಾನ್ಯ ಕ್ಷೇತ್ರವಾಗಿದ್ದ ನಂಜನಗೂಡು ಪ.ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಇದರಿಂದಾಗಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದ ಸಿದ್ದರಾಮಯ್ಯ ಹೊಸದಾಗಿ ರಚನೆ ಯಾದ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವಂತಹ ಅವಕಾಶ ಒದಗಿ ಬಂದಿದೆ.

ನಂಜನಗೂಡಿನ ಎಂ.ಮಹದೇವ್ ಕ್ಷೇತ್ರ ಕಳೆದುಕೊಂಡು ಚಾ.ನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅವರಿಗೆ ಅವಕಾಶ ಕೈತಪ್ಪಿತು. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಎಸ್.ಚಿಕ್ಕಮಾದು, ಕೋಟೆ ಕ್ಷೇತ್ರದತ್ತ ಮುಖ ಮಾಡಿ ಗೆಲುವು ಸಾಧಿಸಿದ್ದರು. ಇದೀಗ ೨೦೨೯ರ ಲೋಕಸಭಾ ಚುನಾವಣೆಗೂ ಮುನ್ನ ವಿಧಾನಸಭೆ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವುದರ ಜತೆಗೆ, ಶೇ.೩೩ ಮಹಿಳಾ ಮೀಸಲಾತಿ ಜಾರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಹೀಗಾಗಿ, ೨೦೨೮ರ ಹೊತ್ತಿಗೆ ಮೈಸೂರು ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳ ಜತೆಗೆ ಹೊಸದಾಗಿ ಎರಡು ಅಥವಾ ಮೂರು ಕ್ಷೇತ್ರಗಳು ರಚನೆಯಾಗುವ ಜತೆಗೆ, ಮಹಿಳಾ ಮೀಸಲಾತಿಯಡಿ ಕನಿಷ್ಠ ಐದು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಅಲ್ಪಸಂಖ್ಯಾತರ ವಾರ್ಡ್ ಗಳನ್ನು ಅನಾಮತ್ತಾಗಿ ಬೇರೆ ಕಡೆ ಹಾಕಿದರೆ ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ಮತ ದಾರರು ಸಮಭಾಗವಾಗಿರುವಂತೆ ಮಾಡುವ ಮುಂದಾಲೋಚನೆ ಕೂಡ ಇದೆ.

ಮೂರು ಕ್ಷೇತ್ರಗಳು ರಚನೆ ಸಂಭವ:  ಜಿಲ್ಲೆಯಲ್ಲೇ ದೊಡ್ಡದಾಗಿರುವ ಚಾಮುಂಡೇಶ್ವರಿ, ನರಸಿಂಹರಾಜ, ಚಾಮರಾಜ ಕ್ಷೇತ್ರಗಳ ಕೆಲವು ಪ್ರದೇಶಗಳನ್ನು ಪ್ರತ್ಯೇಕಿಸಿ ಹೊಸದಾಗಿ ಒಂದು ಕ್ಷೇತ್ರ, ಹುಣಸೂರು, ಕೆ.ಆರ್.ನಗರ, ಪಿರಿಯಾ ಟ್ಟಣ ಕ್ಷೇತ್ರಗಳ ಕೆಲವು ಪ್ರದೇಶಗಳನ್ನು ಬೇರ್ಪಡಿಸಿ ಒಂದು ಕ್ಷೇತ್ರ, ಎಚ್.ಡಿ.ಕೋಟೆ, ನಂಜನಗೂಡು, ವರುಣ ಕ್ಷೇತ್ರಗಳ ಕೆಲ ಭಾಗಗಳನ್ನು ಬೇರ್ಪಡಿಸಿ ಹೊಸದಾಗಿ ಮೂರನೇ ಕ್ಷೇತ್ರ ರಚನೆ ಮಾಡುವ ಬಗ್ಗೆ ಒಳಗೊಳಗೆ ಪ್ಲಾನ್ ನಡೆಯುತ್ತಿದೆ. ಜನಗಣತಿ ಸಮೀಕ್ಷೆ ಕಾರ್ಯ ಮುಗಿದ ಮೇಲೆ ಒಂದಿಷ್ಟು ರಾಜಕೀಯವಾಗಿ ಅನುಕೂಲವಾಗುವಂತೆ ಮಾಡಲು ಹೊಸ ಕ್ಷೇತ್ರಗಳನ್ನು ರಚನೆ ಮಾಡಲಾಗುತ್ತದೆ. ಈ ವೇಳೆ ನರಸಿಂಹರಾಜ ಕ್ಷೇತ್ರದ ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವ ಕೆಲವು ಪ್ರದೇಶಗಳನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ, ಹೊಸದಾಗಿ ರಚನೆಯಾಗುವ ಕ್ಷೇತ್ರಕ್ಕೆ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಆಕಾಂಕ್ಷಿಗಳ ದಂಡು: ಮಹಿಳಾ ಕ್ಷೇತ್ರ ರಚನೆಯಾದರೆ ಆಕಾಂಕ್ಷಿಗಳಿಗೇನೂ ಕಡಿಮೆಯಿಲ್ಲ. ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡರ ಪತ್ನಿ ವರ್ಷಗೌಡ, ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಪತಿಯ ಅನುಪಸ್ಥಿತಿಯಲ್ಲಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದರೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕೂಡ ಎಸ್‌ಸಿ ಮೀಸಲು ಕ್ಷೇತ್ರವಾದರೆ ಕಣಕ್ಕಿಳಿಯುವುದು ನಿಶ್ಚಿತ ಎನ್ನಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ನಡೆಯುವ ಕ್ಷೇತ್ರ ಪುನರ್ ವಿಂಗಡಣೆ ಯಾರ ಪಾಲಿಗೆ ಅನುಕೂಲ ವಾಗುತ್ತ ದೆಯೋ, ಮತ್ತ್ಯಾರಿಗೆ ಮುಳುವಾಗು ತ್ತದೆಯೋ ಕಾದು ನೋಡಬೇಕಿದೆ.

ಮಹಿಳೆಯರಿಗೆ ೪-೫ ಕ್ಷೇತ್ರಗಳು ಮೀಸಲು:  ಮಹಿಳಾ ಮೀಸಲಾತಿ ಜಾರಿಯಾದರೆ ನಾಲ್ಕ ರಿಂದ ಐದು ಸ್ಥಾನಗಳು ಮಹಿಳೆಯರಿಗೆ ಲಭ್ಯವಾಗುವ ಸಾಧ್ಯತೆಗಳು ಇವೆ. ಪಿರಿಯಾ ಪಟ್ಟಣ, ಕೃಷ್ಣರಾಜ, ನಂಜನಗೂಡು ಕ್ಷೇತ್ರಗಳು ಮಹಿಳಾ ಮೀಸಲು ಕ್ಷೇತ್ರವಾಗಿ ಪರಿವರ್ತನೆ ಯಾಗುವ ಮಾತುಗಳು ಹರಿದಾಡುತ್ತಿವೆ. ಹೀಗಾಗಿ, ಮುಂದಿನ ಚುನಾವಣೆ ಯಲ್ಲಿ ಕಣಕ್ಕಿಳಿಯಲು ಬಯಸಿರುವ ಆಕಾಂಕ್ಷಿಗಳು ಕ್ಷೇತ್ರ ಪುನರ್‌ವಿಂಗ ಡಣೆಯ ವಿಚಾರ ವನ್ನು ನೋಡಿಕೊಂಡು ಮುಂದಡಿ ಇಡಲು ಯೋಚಿಸುತ್ತಿದ್ದಾರೆ. ಚುನಾವಣೆ ಯಲ್ಲಿ ಸ್ಪರ್ಧಿಸುವುದಕ್ಕಾಗಿ ಕ್ಷೇತ್ರವನ್ನು ಹದ ಮಾಡಿ ಕೊಂಡು, ಕೊನೆಗೆ ಕ್ಷೇತ್ರ ಬದಲಾವಣೆ ಯಾದರೆ ಹಾಕಿದ ಬಂಡವಾಳ ವ್ಯರ್ಥವಾಗ ಬಹುದು ಎಂಬ ಕಾರಣಕ್ಕಾಗಿ ಸೀಮಿತ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗಿಯಾಗುವ ಹಂತಕ್ಕೆ ತಲುಪಿದ್ದಾರೆ ಎಂದು ಹೇಳಲಾಗಿದೆ.

 

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

10 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

10 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

17 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

17 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

17 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

17 hours ago