ಓದುಗರ ಪತ್ರ

ಓದುಗರ ಪತ್ರ | ಸಚಿವರ ಹೇಳಿಕೆ ಖಂಡನೀಯ

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ದಾಂದಲೆ ಹಾಗೂ ಡಿವೈಎಸ್‌ಪಿ ಕಾರಿನ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಇದು ಪೊಲೀಸ್ ಇಲಾಖೆಯ ನಿರ್ಲಕ್ಷ ದಿಂದಲೇ ಆಗಿರುವ ಘಟನೆ. ‘ಪೊಲೀಸರಿಗೆ ಸಾಮಾನ್ಯ ಜ್ಞಾನ ಇಲ್ಲ’ ಎಂದು ಹೇಳಿಕೆ ನೀಡಿರುವುದು ಖಂಡನೀಯ.ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ದಾಂದಲೆ ಹಾಗೂ ಡಿವೈಎಸ್‌ಪಿ ಕಾರಿನ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಇದು ಪೊಲೀಸ್ ಇಲಾಖೆಯ ನಿರ್ಲಕ್ಷ ದಿಂದಲೇ ಆಗಿರುವ ಘಟನೆ. ‘ಪೊಲೀಸರಿಗೆ ಸಾಮಾನ್ಯ ಜ್ಞಾನ ಇಲ್ಲ’ ಎಂದು ಹೇಳಿಕೆ ನೀಡಿರುವುದು ಖಂಡನೀಯ.

ಗಲಭೆಗಳು ಸೃಷ್ಟಿಯಾಗಲು ದೊಡ್ಡ ದೊಡ್ಡ ಕಾರಣಗಳೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಗಲಾಟೆಗಳೂ ದೊಡ್ಡ ಪ್ರಮಾಣದಲ್ಲಿ ಕಿಡಿಹೊತ್ತಿಸ ಬಹುದು. ಅಂತಹದರಲ್ಲಿ ಉದಯಗಿರಿಯಲ್ಲಿ ಸಂಭವಿಸಿದ ಗಲಭೆ ವೇಳೆ ಉದ್ರಿಕ್ತರನ್ನು ಪೊಲೀಸರು ನಿಯಂತ್ರಿಸಿ ಗಲಭೆಯನ್ನು ಕೆಲವೇ ಗಂಟೆಯಲ್ಲಿ ತಣ್ಣಗಾಗಿಸಿದ್ದಾರೆ.

ಉದಯಗಿರಿ ಸೂಕ್ಷ ಪ್ರದೇಶವಾಗಿದ್ದು, ಇಲ್ಲಿ ಗಲಭೆಗಳಿಗೆ ದೊಡ್ಡ ಕಾರಣಗಳೇ ಬೇಕಿಲ್ಲ ಎಂಬುದು ವಾಸ್ತವ. ಇಂತಹ ಸ್ಥಳದಲ್ಲಿ ಸಿಬ್ಬಂದಿ ಕಾನೂನಾತ್ಮಕವಾಗಿ ಹಾಗೂ ಭಾವನಾತ್ಮಕವಾಗಿ ಎಲ್ಲರಿಗೂ ಸ್ಪಂದಿಸುತ್ತಾ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಭವಿಸಬೇಕಾದ ಅದೆಷ್ಟೋ ಗಲಾಟೆಗಳನ್ನು ನಿಯಂತ್ರಿಸಿದ್ದಾರೆ. ಹಲವು ಪ್ರಕರಣಗಳನ್ನು ಸೂಕ್ಷ ವಾಗಿ ಅವಲೋಕಿಸಿ ಸಂಧಾನ ಮಾಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾ ಬಂದಿದ್ದಾರೆ. ಅಚಾನಕ್ಕಾಗಿ ಒಮ್ಮೆ ಗಲಭೆಯಾದ ಮಾತ್ರಕ್ಕೆ ‘ಪೊಲೀಸರಿಗೆ ಕಾಮನ್ ಸೆನ್ಸ್ ಇಲ್ಲ’ ಎಂದು ಹೇಳುವುದು ಎಷ್ಟು ಸರಿ? ಕೆಲ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಎಲ್ಲರನ್ನೂ ದೂರುವುದು ಸರಿಯಲ್ಲ. ಉದಯಗಿರಿಯಲ್ಲಿ ಎಲ್ಲ ಸಮುದಾಯದವರೊಂದಿಗೆ ಸೌಜನ್ಯದಿಂದಿರುವ ಹಲವು ಕುಟುಂಬಗಳೂ ಇವೆ. ಇಂತಹ ಸೂಕ್ಷ ತೆಯನ್ನು ಅರಿತು ಕೆಲಸ ಮಾಡುವ ಪೊಲೀಸರಿಗೆ ಸಚಿವರೊಬ್ಬರು ಕಾಮನ್ ಸೆನ್ಸ್ (ಸಾಮಾನ್ಯ ಜ್ಞಾನ) ಇಲ್ಲ ಎಂದಿರುವುದು ಎಷ್ಟು ಸರಿ? -ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

5 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

8 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

8 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

12 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

17 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

17 hours ago