೨೦೧೮ರಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಸಂಭವಿಸುತ್ತಿದೆ. ಕಳೆದ ೫ ವರ್ಷಗಳ ಅವಧಿುಂಲ್ಲಿ ರಣಭೀಕರ ಮಳೆಗೆ ಸುವಾರು ೫೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಸಂಖ್ಯೆಯ ಜಾನುವಾರುಗಳು ಬಲಿಯಾಗಿವೆ. ಕೃಷಿ ಭೂಮಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ೨೦೧೮ರ ಸಂತ್ರಸ್ತರಿಗೆ ಪೂರ್ಣ ಪ್ರವಾಣದಲ್ಲಿ ಸೂರು ಕಲ್ಪಿಸಲು ಇನ್ನೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ನಡುವೆ ಈ ಬಾರಿ ಮಳೆ ಮತ್ತೆ ಅವಾಂತರ ಸೃಷ್ಟಿಸಿದೆ. ಈ ವರ್ಷದ ಮಳೆಗೆ ಇಲ್ಲಿವರೆಗೆ ಮಳೆಗೆ ಒಬ್ಬರು ಮೃತಪಟ್ಟಿದ್ದರೆ, ೩೦ಕ್ಕೂ ಅಧಿಕ ಜಾನುವಾರು ಮೃತಪಟ್ಟಿದೆ.
ಈ ವರ್ಷವೂ ಕಾವೇರಿ ನದಿ ಪ್ರವಾಹ ಸೃಷ್ಟಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿರುವುದಲ್ಲದೆ, ನದಿ ಪಾತ್ರದ ಗದ್ದೆಗಳು ಮುಳುಗಡೆಯಾಗಿದೆ. ನಾಪೋಕ್ಲು, ಚೆರಿುಂಪರಂಬು, ಕಲ್ಲುಮೊಟ್ಟೆ ಮತ್ತಿತರ ಭಾಗಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು, ಗುಹ್ಯ, ಕೊಟ್ಟಮುಡಿ, ಎಮ್ಮೆವಾಡು ಮತ್ತಿತರ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಹಾರಂಗಿ ಜಲಾಶುಂಕ್ಕೆ ಅಧಿಕ ಪ್ರವಾಣದ ನೀರು ಹರಿದುಬರುತ್ತಿರುವುದರಿಂದ ಸುವಾರು ೨೦,೦೦೦ ಕ್ಯೂಸೆಕ್ಸ್‌ನಷ್ಟು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಪರಿಣಾಮ ಕುಶಾಲನಗರ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳು ಜಲಾವೃತವಾಗಿವೆ. ಕುಶಾಲನಗರ ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ವಿವಿಧೆಡೆ ಮರಗಳು ಧರೆಶಾಹಿಾಂಗಿದ್ದು, ವಿದ್ಯುತ್ ಇಲಾಖೆಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಹಲವೆಡೆ ಸೇತುವೆ, ರಸ್ತೆಗಳಿಗೆ ಹಾನಿಯುಂಟಾಗಿದೆ.
ಜಿಲ್ಲೆಯ ತೋರ, ೨ನೇ ಮೊಣ್ಣಂಗೇರಿ, ಗುಹ್ಯ, ಕಲ್ಲುಗುಂಡಿ ಮತ್ತಿತರ ಭಾಗಗಳ ನಿವಾಸಿಗಳು ಜೀವಭುಂದಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಅತಿಯಾದ ಮಳೆಯಿಂದ ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಕಾಫಿ ಬೆಳೆಗಾರರು ಪ್ರತಿದಿನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಹೀಗೆ ಮಳೆಯಿಂದ ಈ ಬಾರಿುೂಂ ಕೊಡಗು ನಲುಗಿ ಹೋಗಿದೆ. ಆದರೆ,, ರಾಜ್ಯ ಸರ್ಕಾರ ಪರಿಹಾರ ಕೈಗೊಳ್ಳಲು ಬಿಡುಗಡೆಗೊಳಿಸಿದ ಒಟ್ಟು ೨೦೦ ಕೋಟಿ ಅನುದಾನದಲ್ಲಿ ಕೊಡಗು ಜಿಲ್ಲೆಯನ್ನು ಕೈಬಿಟ್ಟಿದೆ. ಇದು ಜಿಲ್ಲೆುಂ ಜನರ ಅಸವಾಧಾನಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ವಿರುದ್ಧವೂ ಜನ ರೊಚ್ಚಿಗೆದ್ದಿದ್ದಾರೆ. ಧಾರಾಕಾರ ಮಳೆ ನಡುವೆ ಸರ್ಕಾರ ಪರಿಹಾರ ಅನುದಾನ ನೀಡದಿರುವುದು ಸ್ಥಳೀಯರ ತಾಳ್ಮೆಯನ್ನು ಕೆಣಕಿದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಶೈಲಿಯಲ್ಲಿ ಜನರು ಅಸವಾಧಾನ ಹೊರಹಾಕಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕಾದ್ವಯರು, ಕೊಡಗು ಜಿಲ್ಲಾಡಳಿತದ ಪರಿಹಾರ ನಿಧಿಯಲ್ಲಿ ಬಳಿ ೩೫ ಕೋಟಿ ರೂ. ಹಣವಿದ್ದು, ತುರ್ತು ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಕೊಡಗು ಜಿಲ್ಲೆಗೆ ಅನ್ಯಾಯ ಆಗಿಲ್ಲ ಎಂದು ಸಮರ್ಥನೆ ವಾಡಿಕೊಂಡಿದ್ದಾರೆ. ವಿರೋಧ ಪಕ್ಷ ರಾಜಕೀಯವಾಗಿ ಪ್ರತಿಕ್ರಿಯೆ ನೀಡುವುದರಲ್ಲಿ ತಲ್ಲೀನರಾಗಿದೆ.
ಕಾವೇರಿ ತವರು ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಕೊಡಗು ಜಿಲ್ಲೆಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಘೋಷಣೆ ವಾಡಿರುವುದು ತುರ್ತು ಪರಿಹಾರ ಕಾರ್ಯದ ಅನುದಾನವಾದರೂ ಸಾಕಷ್ಟು ನಷ್ಟ ಅನುಭವಿಸಿರುವ ಕೊಡಗು ಜಿಲ್ಲೆಗೆ ಒಂದಷ್ಟು ಅನುದಾನ ಮೀಸಲಿಡಬೇಕಿತ್ತು. ಇನ್ನೂ ಜಿಲ್ಲೆಯಲ್ಲಿ ಪ್ರವಾಹ ಮುಂದುವರೆದಿರುವುದರಿಂದ ಇನ್ನಾದರೂ ಅನುದಾನ ಮೀಸಲಿಡಬೇಕಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ತಮಿಳುನಾಡಿಗೆ ನೀರು ಒದಗಿಸುವ ಕಾವೇರಿಯ ಉಗಮಸ್ಥಾನ ಕೊಡಗಿನ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜಕೀಯವಾಗಿ ಬಿಜೆಪಿ ಭದ್ರಕೋಟೆಯೊಂದೇ ಕೊಡಗು ಗುರುತಿಸಿಕೊಂಡಿದೆ. ಕಳೆದ ೨೦-೨೫ ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕೊಡಗು ಜಿಲ್ಲೆಯಿಂದ ಗೆಲ್ಲಿಸಿಕೊಡಲಾಗಿದೆ.
ಇಬ್ಬರು ಹಿರಿಯ ಶಾಸಕರಿದ್ದರೂ ಸಚಿವ ಸ್ಥಾನ ಹಂಚಿಕೆಯಲ್ಲಿ ಕೊಡಗನ್ನು ಕಡೆಗಣನೆ ವಾಡಲಾಗಿತ್ತು. ಇದೀಗ ಪರಿಹಾರ ವಿತರಣೆಯಲ್ಲಿ ಕೊಡಗಿಗೆ ಅನ್ಯಾಯಮಾಡದೆ ಸೂಕ್ತ ಅನುದಾನವನ್ನು ಮೀಸಲಿಡಬೇಕಿದೆ. ಜೊತೆಗೆ ಕೇಂದ್ರ ಸರ್ಕಾರದಿಂದಲೂ ಸೂಕ್ತ ಅನುದಾನ ಒದಗಿಸುವ ಪ್ರಯತ್ನ ಮಾಡಬೇಕಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾನಿ ಸಂಭವಿಸುತ್ತಿರುವುದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ೨೦೧೯-೨೦ ರಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕಿದೆ. ಕಾಫಿ ಬೆಳೆ ಬೆಳೆಯುವಲ್ಲಿ ರಾಜ್ಯದಲ್ಲಿ ಗಮನ ಸೆಳೆದಿರುವ ಕೊಡಗಿನ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಘೋಷಿಸುವ ಮೂಲಕ ಉತ್ತೇಜನ ನೀಡಬೇಕಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…