ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ ಸಂಪೂರ್ಣವಾಗಿ ಭಸ್ಮವಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ತಾಲ್ಲೂಕಿನ ಶೆಟ್ಟಳ್ಳಿ ಸಮೀಪದ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಶಾಂತ ಎಂಬ ರೈತನಿಗೆ ಸೇರಿದ ಜೋಳದ ಮೆದೆ ಏಕಾಏಕಿ ಧಗೆದಗೆನೆ ಹೊತ್ತಿ ಉರಿಯತೊಡಗಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿ ಮೆದೆ ಸಂಪೂರ್ಣ ಸುಟ್ಟು ಕರಕಲಾಯಿತು.
ಘಟನೆಯನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ನೀರು ಹಾಗೂ ಲಭ್ಯವಿದ್ದ ಇತರೆ ಸಾಧನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ, ಆಗಲೇ ಹೆಚ್ಚಿನ ಭಾಗ ಸುಟ್ಟು ನಷ್ಟ ಉಂಟಾಯಿತು. ಬೆಂಕಿ ಕಾಣಿಸಿಕೊಂಡ ಕಾರಣ ತಿಳಿದುಬಂದಿಲ್ಲ. ಘಟನೆಯಿಂದ ಶಾಂತ ಅವರಿಗೆ ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ನಷ್ಟದಲ್ಲಿ ರೈತ: ಬೇಸಿಗೆ ಕಾಲ ಆರಂಭಕ್ಕೂ ಮುನ್ನ ಹಸುಗಳಿಗೆ ಸಂಗ್ರಹಣೆ ಮಾಡಿದ್ದ ಮೇವಿನ ಮೆದೆ ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ರೈತ ಶಾಂತ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮವಹಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬೆಂಗಳೂರು: ನವೆಂಬರ್ 15ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ಪಿಂಕ್ ಲೈನ್ ಮೆಟ್ರೋದ 7.5 ಕಿಲೋಮೀಟರ್ ಎತ್ತರಿಸಿದ ಮಾರ್ಗವನ್ನು…
ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ…
ಬೆಂಗಳೂರು: ಎಲ್ಪಿಜಿ ಗ್ರಾಹಕರೇ ಗಮನಿಸಿ. ನವೆಂಬರ್ 1ರಿಂದ ಗ್ಯಾಸ್ ವಿತರಣೆಯ ನಿಯಮಗಳು ಮತ್ತಷ್ಟು ಬಿಗಿಯಾಗಲಿವೆ ಎಂದು ವರದಿಯಾಗಿದೆ. ಆಧಾರ್ ಆಧಾರಿತ…
ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು…
ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…
ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…