ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 22 ಶನಿವಾರ 2022

ಟ್ಯುಟೋರಿಯಲ್ ವ್ಯವಸ್ಥೆಯನ್ನು ಕಾನೂನು ಚೌಕಟ್ಟಿನೊಳಕ್ಕೆ ತರಬೇಕು

ಮಂಡ್ಯ ಜಿಲ್ಲೆಯ ಮಳವಳ್ಳಿ ಯಲ್ಲಿ ಇತ್ತೀಚಿಗೆ ಕೋಚಿಂಗ್ ಕೇಂದ್ರದ ಒಬ್ಬ ವ್ಯಕ್ತಿ ಹತ್ತು ವರ್ಷದ ಹೆಣ್ಣು ಮಗುವಿನ ಅತ್ಯಾಚಾರ ಮತ್ತು ಕೊಲೆ ಮಾಡಿದ ಘಟನೆ ಕರ್ನಾಟಕವನ್ನು ಧಿಗ್ಭ್ರಮೆಗೊಳಿಸಿದೆ. ಜನಪರ ಸಂಘಟನೆಗಳು ತಕ್ಷಣ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶವನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರವು ಸಂತ್ರಸ್ತ ಕುಟುಂಬಕ್ಕೆ ಹಣದ ಪರಿಹಾರ ಘೋಷಿಸಿದೆ.

ಈ ಘಟನೆಯನ್ನು ಪೋಸ್ಕೊ ಪ್ರಕರಣದ ಹಿನ್ನಲೆಯಲ್ಲಿ ನೋಡಬೇಕಾಗುತ್ತದೆ. ಇಲ್ಲಿಯ ಸಂತ್ರಸ್ತರು ಸಾಮಾನ್ಯ ಪ್ರಜೆಗಳ ಹೆಣ್ಣು ಮಕ್ಕಳಾಗಿದ್ದಾರೆ. ಇವರ ಆರ್ಥಿಕ ಸಾಮಾಜಿಕ ಪರಿಸ್ಥಿತಿಯನ್ನು ವಿಮರ್ಶಿಸಿ, ಗಮನಿಸುವುದಾದರೆ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯ ಕೊರತೆಗಳೆ ಮೂಲ ಕಾರಣವಾಗಿವೆ. ಸರ್ಕಾರಿ ಶಾಲೆಗಳ ಹೀನಾಯ ಪರಿಸ್ಥಿತಿಯಿಂದಾಗಿ ಖಾಸಗೀ ಕೋಚಿಂಗ್ ಬೆಳೆದಿವೆ. ಇಡೀ ಕರ್ನಾಟಕದಲ್ಲಿ ಬಹುಪಾಲು ಕೋಚಿಂಗ್ ಸಂಸ್ಥೆಗಳು ನೊಂದಣಿ ಆಗಿಲ್ಲ. ಕರ್ನಾಟಕ ಶಿಕ್ಷಣ ಕಾನೂನು ೧೯೮೩ರ ಅನುಬಂಧ ೩೫ರ ಮತ್ತು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ ಕಾನೂನು ೨೦೦೧ರ ಪ್ರಕಾರ ಸ್ಥಳೀಯ ಬ್ಲಾಕ್ ಎಜುಕೇಷನ್ ಅಧಿಕಾರಿಗಳು ಈ ಕೋಚಿಂಗ್ ಕೇಂದ್ರಗಳನ್ನು ನೊಂದಣಿ ಮಾಡಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಳವಳ್ಳಿಯ ಘಟನೆ ಇಡೀ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ, ಒಂದು ಕೋಟಿಯಷ್ಟು ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಇವರಲ್ಲಿ ಸರ್ಕಾರಿ ಶಾಲೆಗಳಲ್ಲೇ ೫೪ ಲಕ್ಷ ಮಕ್ಕಳು ಓದುತ್ತಿದ್ದಾರೆ. ೨೦ಲ ಕ್ಷ ಮಕ್ಕಳು ಕೋಚಿಂಗ್ ಕೇಂದ್ರಗಳಿಗೆ ಹೋಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರತಿಯೊಂದು ಕೋಚಿಂಗ್ ಕೇಂದ್ರಕ್ಕೆ ೫೦೦ ಜನ ಮಕ್ಕಳು ಹೋದರು ಎಂದು ಅಂದಾಜಿಸಿದರೂ ಇಂದು ೪,೦೦೦ ಖಾಸಗೀ ಕೋಚಿಂಗ್ ಕೇಂದ್ರಗಳಿವೆ. ಜತೆಗೆ ನೂರಾರು ಆನ್‌ಲೈನ್ ಕೋಚಿಂಗ್ ಕೇಂದ್ರಗಳಿವೆ.
ಈ ಶೈಕ್ಷಣಿಕ ದಂಧೆಯನ್ನು ಕಾನೂನಿನ ಚೌಕಟ್ಟಿನ ಒಳಗೆ ತರುವ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಇಂತಹ ಭಯಂಕರ ಮಾರಣಾಂತಿಕ ಘಟನೆಗಳನ್ನು ತಪ್ಪಿಸಬಹುದು.

ಜತೆಗೆ, ಚಿತ್ರದುರ್ಗದ ಮುರುಘಾ ಮಠದ ಪ್ರಕರಣದ ಹಿನ್ನೆಲೆಯಲ್ಲಿ, ಕರ್ನಾಟಕದ ಮಠ ಮಾನ್ಯಗಳ ವಸತಿ ಶಾಲೆಗಳನ್ನು ಸಹ ಅರೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ವರೆಗೆ ಸರ್ಕಾರದಿಂದ ಈ ವಿಷಯದಲ್ಲಿ ಆಗಿರುವ ಕಾನೂನು ಜಾರಿಯ ಲೋಪವನ್ನು ಸರಿಪಡಿಸಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.

ರತಿರಾವ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಮೈಸೂರು. -ಸಬಿಹಾ ಭೂಮಿ ಗೌಡ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಮೈಸೂರು, -ಡಾ. ವಿ. ಲಕ್ಷ್ಮೀ ನಾರಾಯಣ, ಅಖಿಲ ಭಾರತ ಪ್ರಜಾ ವೇದಿಕೆ, ಮೈಸೂರು.

andolanait

Recent Posts

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

3 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

3 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

3 hours ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

3 hours ago

ಕೆರೆ ನೀರಿಗಾಗಿ ಎರಡು ಗ್ರಾಮಸ್ಥರ ತಿಕ್ಕಾಟ!

ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ  ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…

3 hours ago

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…

3 hours ago