ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 21 ಬುಧವಾರ

 ಧ್ವನಿವರ್ಧಕದಲ್ಲಿ ಅಪಸ್ವರ!

ಮೈಸೂರಿನ ಹೃದಯಭಾಗದಲ್ಲಿರುವ ಪುರಾತನ ಕಟ್ಟಡಗಳಲ್ಲೊಂದಾದ ಜಗನ್ಮೋಹನ ಅರಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪುನರಾರಂಭಗೊಂಡಿರುವುದು ಸಂತಸದ ವಿಷಯ. ಸಮಸ್ಯೆ ಏನೆಂದರೆ ಇಲ್ಲಿನ ಧ್ವನಿವರ್ಧಕಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಎಕೋ (ಪ್ರತಿಧ್ವನಿ) ಬರುತ್ತದೆ. ಕಲಾವಿದರು ತಮ್ಮ ಶಕ್ತಿ ಮೀರಿ ಉತ್ತಮ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿಯೇ ಪ್ರಸ್ತುತಪಡಿಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬಂತಾಗಿದೆ. ಮೊನ್ನೆ ನಡೆದ ‘ಇಳೆಯರಾಜ’ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಲಾರಸಿಕರು ಒಂದು ಹಾಡು ಕೇಳಿ ಧ್ವನಿವರ್ಧಕದ ಅವ್ಯವಸ್ಥೆಯಿಂದಾಗಿ ಮರು ಹಾಡಿಗೆ ಕಾಯದೇ ಹೊರನಡೆದರು. ಇನ್ನೇನು ನಾಡಹಬ್ಬ ದಸರಾ ಸಮೀಪಿಸುತ್ತಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಅಷ್ಟರೊಳಗೆ ಈ ಸಭಾಂಗಣದ ಉಸ್ತುವಾರಿ

ವಹಿಸಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಪ್ತ ಸಹಾಯಕ ಎಂ.ಲಕ್ಷ್ಮೀನಾರಾಯಣ್ ಅವರು ಧ್ವನಿವರ್ಧಕವನ್ನು ಒಮ್ಮೆ ಪರಿಶೀಲಿಸಿ, ಸಮಸ್ಯೆಯನ್ನು ಪರಿಹರಿಸಲಿ. ಇದರ ಜೊತೆಗೆ ಇಲ್ಲಿನ ಶೌಚಾಲಯದ ವ್ಯವಸ್ಥೆ ಕೂಡ ಹದಗೆಟ್ಟಿದೆ. ಅದನ್ನು ತೆಗೆಸಿ ಆದಷ್ಟು ಬೇಗ ಹೊಸ ಶೌಚಾಲಯದ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಬೇಕು.

-ರೇಣುಕಾ ಪ್ರಸಾದ್, ಮ್ಯಂಡೋಲಿನ್ ಕಲಾವಿದ, ಕೆ.ಆರ್.ಮೊಹಲ್ಲ, ಮೈಸೂರು.


ಶಾಸಕರ ಶಿಷ್ಯರು ಸೌಜನ್ಯದಿಂದ ವರ್ತಿಸಲಿ!

ನಗರದ ವಿದ್ಯಾರಣ್ಯಪುರಂನ ಉದ್ಯಾನವನದಲ್ಲಿ ಶಾಸಕ ಎಸ್.ಎ. ರಾಮದಾಸ್ರವರ ಸಾರಥ್ಯದಲ್ಲಿ ಮೋದಿ ಯುಗ ಉತ್ಸವ್ – ೨೦೨೨ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದು ಸರಿಯಷ್ಟೆ. ಆದರೆ ಶಾಸಕರ ಕೆಲವು ಶಿಷ್ಯಂದಿರು ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ನಡೆದುಕೊಂಡರೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚು ಶೋಭೆ ತಂದಂತಾಗುತ್ತದೆ. ಯಾರಾದರೂ ವೃದ್ಧರು ಶಾಸಕರನ್ನು ಭೇಟಿಯಾಗಲು ಬಂದರೆ ಅವರನ್ನು ಏಕವಚನದಲ್ಲಿ ಸಂಬೋಧಿಸಿ, ರೌಡಿಗಳಂತೆ ವರ್ತಿಸಿ ಅವರನ್ನು ತಳ್ಳುತ್ತಿದ್ದಾರೆ. ಇವರು ವಿದ್ಯಾವಂತರೋ ಅಥವಾ ಅವಿದ್ಯಾವಂತರೋ ಎಂದು ಅನುಮಾನ ಬರುತ್ತದೆ. ಶಾಸಕರು ಇವೆಲ್ಲಾ ದೃಶ್ಯಾವಳಿಗಳನ್ನು ಒಮ್ಮೆ ಸಿಸಿ ಕ್ಯಾಮೆರಾದಲ್ಲಿ ನೋಡಿ ಅಂತಹ ಶಿಷ್ಯರಿಗೆ ತಿಳಿವಳಿಕೆ ಹೇಳಬೇಕು. ಇನ್ನು ಮುಂದಾದರೂ ಇಂತಹ ಕಹಿ ಘಟನೆ ಪುನರಾವರ್ತನೆಯಾಗದಿರಲಿ.

-ಆತ್ಮಾರಾಂ, ಹಿರಿಯ ನಾಗರಿಕ, ವಿದ್ಯಾರಣ್ಯಪುರಂ, ಮೈಸೂರು.


ಹೊಸ ಕಾಲೇಜಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಿ

ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿದ್ದ ಮಹಾರಾಣಿ ಕಾಲೇಜನ್ನು ಪಡುವಾರಹಳ್ಳಿಗೆ ೨೦೧೮ರಲ್ಲಿ ಸ್ಥಳಾಂತರಿಸಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಉದ್ಘಾಟಿಸಿದ್ದರು. ಐದು ವರ್ಷಗಳಿಂದ ಹೆಣ್ಣು ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜು ನಿರ್ಮಾಣ ಮಾಡಿದ ಸರ್ಕಾರ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಿಲ್ಲ. ಪ್ರಸ್ತುತ ಹುಣಸೂರು ರಸ್ತೆಯಲ್ಲಿರುವ ಈ ಕಾಲೇಜಿಗೆ ಸ್ಥಳೀಯ ಬಸ್ ಸಂಚಾರ ಇಲ್ಲ. ಬಿಸಿಲು ಮಳೆ ಏನೇ ಇದ್ದರೂ ಕಾಲೇಜಿಗೆ ಹೋಗಲೇಬೇಕು. ಮೈಸೂರಿನಿಂದ ಬರುವ ಸ್ಥಳೀಯ ಬಸ್ಸುಗಳು ಗದ್ದಿಗೆ ಮಾರ್ಗ ಬಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಬಳಿ ನಿಲ್ಲುತ್ತವೆ. ಅಲ್ಲಿಂದ ವಿದ್ಯಾರ್ಥಿನಿಯರು ಓಪನ್ ಏರ್ ಥಿಯೇಟರ್ ಮೂಲಕ ಸುಮಾರು ಎರಡರಿಂದ ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಹಾಗೇ ವಿದ್ಯಾರ್ಥಿನಿಲಯದಿಂದಲೂ ನಡೆದುಕೊಂಡೇ ಕಾಲೇಜಿಗೆ ಬರಬೇಕು. ಇದರಿಂದ ಕಾಲೇಜು ಸೇರುವ ಮೊದಲೇ ವಿದ್ಯಾರ್ಥಿನಿಯರು ಸುಸ್ತಾಗುತ್ತಾರೆ, ಅಲ್ಲದೆ ಕೆಲವು ತರಗತಿಗಳು ತಪ್ಪಿಹೋಗುವ ಸಂದರ್ಭಗಳೂ ಹೆಚ್ಚು. ಬಡವರ ಮಕ್ಕಳು ಮತ್ತು ರೈತರ ಮಕ್ಕಳೇ ಹೆಚ್ಚು ಓದುವ ಈ ಕಾಲೇಜಿಗೆ ಆಟೋದಲ್ಲಿ ಹೋಗುವ ಸಾಮರ್ಥ್ಯವಿರುವವರ ಸಂಖ್ಯೆಇಲ್ಲವೆಂದೇ ಹೇಳಬಹುದು. ಹಾಗಾಗಿ ಸರ್ಕಾರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ನನ್ನ ಮನವಿ ಎಂದರೆ- ದಯಮಾಡಿ ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿನಿಯರ ಓದಿಗೆ ಅನುಕೂಲ ಮಾಡಿಕೊಡಿ.

  – ಸೋಮಶೇಖರ ಯು.ಟಿ. ಉದ್ಬೂರು, ಮೈಸೂರು ತಾಲ್ಲೂಕು.

andolana

Share
Published by
andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

33 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

38 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

47 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago