ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 28 ಗುರುವಾರ 2022

ಓದುಗರಪತ್ರ

ವರ್ಷ ಪೂರೈಸಿದ್ದೇ ಸಾಧನೆ!

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಜುಲೈ ೨೮ಕ್ಕೆ ಒಂದು ವರ್ಷ ಅವಧಿ ಪೂರೈಸಿದ್ದಾರೆ. ಈ ಸಂಬಂಧ ದೊಡ್ಡ ಸಾಧನಾ ಸಮಾವೇಶ ಮಾಡದೇ ಇರುವುದೇ ದೊಡ್ಡ ಅಚ್ಚರಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ಅವರ ನೆರಳಿನಲ್ಲೇ ಆರಂಭದಲ್ಲಿ ಅಧಿಕಾರ ನಡೆಸಿದ ಬಸವರಾಜ ಬೊಮ್ಮಾಯಿ ಅವರು ಹಿಜಾಬ್ ಮತ್ತು ಸಮವಸ್ತ್ರಗಳ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳದೇ ರಾಜ್ಯದಲ್ಲಿ ಅಶಾಂತಿಗೆ ಪರೋಕ್ಷವಾಗಿ ಕಾರಣರಾದರು. ಸಮವಸ್ತ್ರದ ನಂತರ ಪಠ್ಯಪರಿಷ್ಕರಣೆ ವಿಷಯದಲ್ಲೂ ಎಡವಿದರು. ಟ್ಯೂಟೋರಿಯಲ್ ಟೀಚರ್ ಒಬ್ಬರನ್ನು ಪಠ್ಯಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಶೈಕ್ಷಣಿಕ ದಿವಾಳಿತನವನ್ನು ಪ್ರದರ್ಶಿಸಿದರು. ಇಷ್ಟೆಲ್ಲ ಆಡಳಿತಾತ್ಮಕ ವೈಫಲ್ಯಗಳ ನಡುವೆ ಭಿನ್ನಮತೀಯರ ಕಾಟವಿಲ್ಲದೇ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂಬುದೊಂದೇ ಸಮಾಧಾನ. ಮುಖ್ಯಮಂತ್ರಿಗಳ ಸ್ಥಾನ ಭದ್ರವಾಗಿದ್ದರೆ, ರಾಜ್ಯದ ಆಡಳಿತವೂ ಹಿಡಿತದಲ್ಲಿ ಇರುತ್ತದೆ. ಸುರಕ್ಷಿತವಾಗಿ ಒಂದು ವರ್ಷ ಪೂರೈಸಿದ್ದೇ ಅವರ ಸಾಧನೆ ಎಂದರೆ ಅದು ಖಂಡಿತ ಕುಹಕದ ಮಾತಲ್ಲ!

-ನಂದಕುಮಾರ್, ಸರಸ್ವತಿಪುರಂ, ಮೈಸೂರು.

——–

ಪೂರ್ಣಮಾಹಿತಿ ನೀಡಿ ಅರ್ಜಿ ಆಹ್ವಾನಿಸಿ

ಸಾರ್ವಜನಿಕ ಶಿಕ್ಷಣ ಇಲಾಖೆಯು ೨೦೨೨-೨೩ ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ತಾಲ್ಲೂಕುವಾರು ಖಾಲಿ ಇರುವ ಒಟ್ಟು ಹುದ್ದೆಗಳ ಪಟ್ಟಿ ಮಾತ್ರ ನೀಡಲಾಗಿದೆ.

ಅರ್ಜಿಗಳು ಎಲ್ಲಿ ದೊರೆಯುತ್ತವೆ? ಎಲ್ಲಿ ಸಲ್ಲಿಸಬೇಕು? ಎಷ್ಟು ಹುದ್ದೆಗಳು ಖಾಲಿಯಿವೆ? ಎಂಬ ಮಾಹಿತಿ ಇಲ್ಲದೇ ತೊಂದರೆಯಾಗಿದೆ. ಅಭ್ಯರ್ಥಿಗಳು ಮೊದಲು ತಮಗೆ ಸಮೀಪದಲ್ಲಿರುವ ಸರ್ಕಾರಿ ಶಾಲೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿ, ಅನಂತರ ಆ ಶಾಲೆಗಳಲ್ಲಿ ಸಂಬಂಧಪಟ್ಟ ಹುದ್ದೆಗಳು ಖಾಲಿ ಇದೆಯೋ ಇಲ್ಲವೋ ಎಂಬುದನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕಾಗಿದೆ. ಮೈಸೂರು ಜಿಲ್ಲೆಯೊಂದರಲ್ಲೇ ಒಂಭತ್ತು ಬ್ಲಾಕ್ ಗಳಿದ್ದು, ಪ್ರತಿ ಬ್ಲಾಕ್ ನಲ್ಲಿಯೂ ಅನೇಕ ಕ್ಲಸ್ಟರ್‌ಗಳಿದ್ದು, ಆ ಒಂದೊಂದು ಕ್ಲರ್ಸ್ಟನಲ್ಲಿಯೂ ಅನೇಕ ಶಾಲೆಗಳಿವೆ. ಆ ಶಾಲೆಗಳಲ್ಲಿಯೂ ಸರ್ಕಾರಿ, ಅನುದಾನಿತ, ಅನುದಾನರಹಿತ ಹೀಗೆ ವಿವಿಧ ಪ್ರಕಾರಗಳಿದ್ದು, ಅಭ್ಯರ್ಥಿಯೊಬ್ಬ ಈ ಮಾಹಿತಿಯ ಬೆನ್ನತ್ತಿ ಹೋದರೆ ಇರುವ ಅತ್ಯಲ್ಪ ಸಮಯದಲ್ಲಿ ಖಂಡಿತಾ ಅರ್ಜಿ ಸಲ್ಲಿಸಲು ಸಾಧ್ಯವಾಗದು. ನಿಖರ ಮಾಹಿತಿ ಒದಗಿಸಿ ಆ ನಂತರ ಅರ್ಜಿ ಆಹ್ವಾನಿಸಿದರೆ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅನುಕೂಲ.

-ಮಂಜುಮಣಿ ಏಕಲವ್ಯನಗರ, ಮೈಸೂರು.

——-

ಕಸ್ತೂರಿರಂಗನ್ ವರದಿ ಅನುಷ್ಠಾನ ಬೇಡ !

ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ರಾಜ್ಯದ ಕರಾವಳಿ, ಮಲೆನಾಡು ಭಾಗದ ರೈತರು ಮತ್ತು ಜನಪ್ರತಿನಿಧಿಗಳಿಂದ ತೀವ್ರವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಸ್ತು ಸ್ಥಿತಿ ಅಧ್ಯಯನಕ್ಕಾಗಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದು ಸ್ವಾಗತಾರ್ಹ. ಉಪಗ್ರಹ ಚಿತ್ರದ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯ ಪ್ರದೇಶಗಳನ್ನು ಗುರುತಿಸಿರುವುದರಿಂದ ಅಡಕೆ, ತೆಂಗು, ಕಾಫಿ, ರಬ್ಬರ್ ತೋಟಗಳು ಹಸಿರಾಗಿ ಕಂಡು ಬಂದಿದೆ. ಈ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದರೆ ಪಶ್ಚಿಮ ಘಟ್ಟ ವ್ಯಾಪ್ತಿಯ ಮಲೆನಾಡಿನ ರೈತ ಕುಟುಂಬಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ರಚಿಸಿದ ಈ ಸಮಿತಿಯು ಉದ್ದೇಶಿತ ಪರಿಸರ ಸೂಕ್ಷ್ಮ ವಲಯ ಪ್ರದೇಶಗಳಿಗೆ ಭೇಟಿಕೊಟ್ಟು ಭೌತಿಕ ಸರ್ವೆ ನಡೆಸಿ ಎಲ್ಲರಿಗೂ ನ್ಯಾಯ ಒದಗಿಸಬೇಕಿದೆ.

-ಅಂಕುರ್ ಕಲಿಟ, ಮಹಾರಾಜ ಕಾಲೇಜು, ಮೈಸೂರು.

——-

ಬಟ್ಟೆ, ಪೇಪರ್ ಬ್ಯಾಗ್ ದರ ನಿಯಂತ್ರಿಸಿ

ಏಕ ಬಳಕೆ ಪ್ಲಾಸ್ಟಿಕ್ ನಿಷೇಧದಿಂದ ಪರಿಸರ ಸ್ನೇಹಿಯಾದ ಬಟ್ಟೆ ಪೇಪರ್ ಬ್ಯಾಗ್‌ಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಇವುಗಳ ಬೆಲೆಯಲ್ಲಿ ಮೂರರಿಂದ ನಾಲ್ಕು ಪಟ್ಟು ಏರಿಕೆ ಕಂಡು ಬಂದಿದೆ. ಪಾಲಿಕೆ ವಿಧಿಸುವ ದಂಡದ ಹೆದರಿಕೆಯಿಂದ ಪ್ಲಾಸ್ಟಿಕ್ ಕೈಚೀಲಕ್ಕೆ ಪರ್ಯಾಯವಾಗಿ ವ್ಯಾಪಾರಸ್ಥರು ದುಬಾರಿ ಬೆಲೆಗೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗಳನ್ನು ಖರೀದಿ ಮಾಡುತ್ತಿದ್ದು, ಇದರ ಹೆಚ್ಚುವರಿ ದರವನ್ನು ಗ್ರಾಹಕರ ಮೇಲೆ ಹೇರುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೂ ಹಣ ನೀಡಬೇಕಿರುವುದರಿಂದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಸರ್ಕಾರವು ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗಳ ದರ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

-ಕರೀನಾ ಪ್ರಿಯದರ್ಶಿನಿ, ಮಹಾರಾಜ ಕಾಲೇಜು, ಮೈಸೂರು

 

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

2 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

3 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

4 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

5 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

10 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

10 hours ago