ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 23 ಶುಕ್ರವಾರ 2022

ಶಿಕ್ಷಕನಿಂದಲೇ ವಿದ್ಯಾರ್ಥಿ ಹತ್ಯೆ ಖಂಡನೀಯ

ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹೆದ್ಲಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯೆ ಕಲಿಸಬೇಕಿದ್ದ ಗುರುವೇ ತನ್ನ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಅತಿಥಿ ಶಿಕ್ಷಕನೋರ್ವ ಅದೇ ಶಾಲೆಯ ಸಹೋದ್ಯೋಗಿ ಶಿಕ್ಷಕಿಯ ಮೇಲಿರುವ ವೈಯಕ್ತಿಕ ವೈಷಮ್ಯದಿಂದ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಕಬ್ಬಿಣದ ಸಲಾಕೆಯಿಂದ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಆ ಬಾಲಕನನ್ನು ಒಂದನೇ ಮಹಡಿಯಿಂದ ಕೆಳಗೆಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಖಂಡನೀಯವಾಗಿದೆ. ಮಕ್ಕಳನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ರಕ್ಕಸರಾದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹೇಗೆ? ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮವಹಿಸಿ ಶಿಕ್ಷಣ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು.

-ದಿವ್ಯಶ್ರೀ ದಾಸ್, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.


ನೇತ್ರರಾಜು ಒಂದು ಬೆರಗು

ಇತ್ತೀಚೆಗೆ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್‌ರವರು ಹೊರ ತಂದಿರುವ ನೇತ್ರರಾಜು ಸ್ಮರಣಾರ್ಥ ೨೦೨೩ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವನ್ಯಜೀವಿ ತಜ್ಞ ಸೇನಾನಿ ಅವರು, ನೇತ್ರರಾಜು ಅವರಿಲ್ಲದ ಕಲಾಮಂದಿರವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಝೆನ್ ವರ್ಣಿಸಲಾಗದಂತೆಯೇ ನೇತ್ರ ಅವರ ಕ್ಯಾರೆಕ್ಟರ್ ಹಿಡಿದಿಡುವುದು ಕಷ್ಟ. ಹಾಗೂ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ನೇತ್ರ ಅವರನ್ನು ಒಂದು ಬೆರಗು, ಅವರಿಗೆ ಭೂತ ಹಾಗೂ ಭವಿಷ್ಯದ ಚಿಂತನೆ ಇಲ್ಲ. ಆತ ನಿಜವಾದ ದಿಗಂಬರ ಜೈನ ಎಂದು ಹೇಳಿದ್ದಾರೆ. ಮತ್ತೊಬ್ಬ ವನ್ಯಜೀವಿ ತಜ್ಞ ಕೃಪಾಕರ ಅವರು, ಬದುಕಿರುವ ತನಕ ತಾನು ತೆಗೆದ ಚಿತ್ರಗಳನ್ನು ಉತ್ತಮ ಚಿತ್ರ ಎಂದು ಹೇಳದೆ ಇನ್ನೂ ಉತ್ತಮ ಚಿತ್ರ ತೆಗೆಯಲು ಸದಾ ಹಂಬಲಿಸುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿಕೊಂಡರು. ಇಂತಹ ಅದ್ಬುತ ಛಾಯಾಗ್ರಾಹಕ ನೇತ್ರಾರಾಜು ಅವರು ಸಾಹಿತ್ಯದ ಕಾರ್ಯಕ್ರಮಗಳು, ಚಳವಳಿಗಳು, ರಂಗಭೂಮಿಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುತ್ತಿರಲಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇಂದು ಅವರನ್ನು ಕಳೆದುಕೊಂಡು ಛಾಯಾಗ್ರಹಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಚಿತ್ರಗಳು ಮಾತನಾಡುವಂತೆ ಸೆರೆಹಿಡಿಯುತ್ತಿದ್ದ ನೇತ್ರರಾಜು ಅವರ ಚಿತ್ರಗಳು ಮತ್ತೆ ಬರುವುದಿಲ್ಲ ಎಂಬುದೇ ಬೇಸರದ ವಿಚಾರವಾಗಿದೆ.

-ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು


ನೆಹರು ಭಾವಚಿತ್ರ ಅನಾವರಣಗೊಳಿಸಲಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅದಿವೇಶನದ ಮೊದಲ ದಿನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಕಾರ್ಯಕ್ರಮವನ್ನು ನಡೆಸಿದ್ದು, ಈ ವೇಳೆ ಪ್ರತಿಪಕ್ಷದವರ ಗೈರು ಕಾಣುತಿತ್ತು. ಅಲ್ಲದೇ ಭಾವಚಿತ್ರ ಅನಾವರಣ ಕಾರ್ಯಕ್ರಮದ ವೇಳೆ ದೇಶ ಕಂಡ ಮೊದಲ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಜವಾಹರಲಾಲ್ ನೆಹರು ಭಾವಚಿತ್ರವನ್ನು ಕಡೆಗಣಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ದೇಶದ ಮೊದಲ ಪ್ರಧಾನಿಯನ್ನು ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ದೇಶದ ಮೊದಲ ಪ್ರಧಾನಿ ಹುದ್ದೆಗೆ ಪಕ್ಷಾತೀತವಾಗಿ ಗೌರವ ಸೂಚಿಸುವುದು ಎಲ್ಲ ಪಕ್ಷಗಳು ಹಾಗೂ ಸಾರ್ವಜನಿಕರ ಕರ್ತವ್ಯ. ಆದರೆ ಇಲ್ಲಿ ಸರ್ಕಾರವೇ ಮೊದಲ ಪ್ರಧಾನಿಯ ಭಾವಚಿತ್ರ ಅನಾವರಣಗೊಳಿಸದೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತಿದೆ. ಆದ್ದರಿಂದ ಇನ್ನಾದರೂ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಒಳಜಗಳವನ್ನು ಬದಿಗಿಟ್ಟು, ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತರುವ ಪ್ರಯತ್ನಕ್ಕೆ ಮುಂದಾಗದೆ ಎಲ್ಲ ಹೋರಾಟಗಾರರಿಗೂ ಗೌರವ ನೀಡುವ ಜೊತೆಗೆ ಈ ದೇಶದ ಮೊದಲ ಪ್ರಧಾನಿ ನೆಹರು ಅವರ ಭಾವಚಿತ್ರವನ್ನೂ ಅನಾವರಣಗೊಳಿಸಬೇಕಿದೆ.

-ಸಾಗರ್ ದ್ರಾವಿಡ್, ಹಿರಿಯೂರು

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

2 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

14 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

15 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

17 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

17 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

21 hours ago