48,500 ವರ್ಷ ಕಳೆದರೂ ಸಾಂಕ್ರಾಮಿಕವಾಗಿ ಉಳಿದಿರುವ ವೈರಸ್‌ಗಳು

ಕಾರ್ತಿಕ್ ಕೃಷ್ಣ

ಹಾಲಿವುಡ್ ಸಿನೆಮಾಗಳಲ್ಲಿ ಶವಸ್ವರೂಪಿ ಮಾನವರು ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಿದಂತೆ ಚಿತ್ರ ವಿಚಿತ್ರವಾಗಿ ಅಡ್ಡಾಡಿ ಆರೋಗ್ಯವಂತ ಮಾನವರನ್ನು ಅಟ್ಟಾಡಿಸಿ ಅವ ರಿಗೂ ಸೋಂಕು ಹತ್ತಿಸುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ‘ಝಾಂಬಿ’ಎಂದು ಕರೆಯಲ್ಪಡುವ ಈ ಶವಮಾನವರ ದೇಹದ ನಿಯಂತ್ರಣವು ಅವರ ದೇಹದೊಳಗೆ ಅಡಗಿ ರುವ ವೈರಸ್ ಅಥವಾ ಇನ್ಯಾವುದೋ ಪ್ಯಾರಾಸೈಟ್‌ಗಳ ಸುಪರ್ದಿಯಲ್ಲಿರುತ್ತವೆ. ಸದ್ಯಕ್ಕೆ ಝಾಂಬಿ ಮಾನವರು ಸಿನಿಮಾ ಅಥವಾ ಕಾದಂಬರಿಗಳಲ್ಲಷ್ಟೇ ಕಂಡು ಬಂದರೂ, ಅಗಾಧವಾದ ಕೀಟ ಪ್ರಪಂಚದಲ್ಲಿ Zombie fication ಎಂಬುದೊಂದು ಸಾಮಾನ್ಯವಾಗಿ ಕಂಡುಬರುವ ಪ್ರಕ್ರಿಯೆ.

ಕೀಟಗಳ ದೇಹ ಸೇರಿದ ಕೂಡಲೇ, ಮೋಡಿಗಾರರಂತೆ ಅವುಗಳ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳುವ ಪ್ಯಾರಾಸೈಟ್‌ಗಳು, ಕೀಟಗಳನ್ನು ದೇಹದೊಳಗೊಳಗಿಂದಲೇ ಮಾರ್ಪಡಿಸುತ್ತವೆ. ಇವುಗಳು ಯಾಕೆ ಹೀಗೆ ಮಾಡುತ್ತವೆ ಗೊತ್ತಾ? ಕಾಲೊರೊಡೊ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞರಾದ ಜೆನಿಸ್ ಮೂರ್ ಪ್ರಕಾರ, ಆಶ್ರಯದಾತ ಕೀಟಗಳನ್ನು ಹೀಗೆ ಬದಲಾಯಿಸುವುದರಿಂದ ಪರಾವಲಂಬಿಗಳಿಗೆ ಒಳ್ಳೆಯ ವಾಸಸ್ಥಾನ, ಪೌಷ್ಟಿಕಾಂಶಗಳು ದೊರೆಯುತ್ತವೆಯಂತೆ. ಹಾಗೆಯೇ ನೈಸರ್ಗಿಕ ಆಯ್ಕೆ ಪ್ರಕ್ರಿಯೆಯಲ್ಲೂ ಅವುಗಳಿಗೆ ಸಹಾಯವಾಗಲಿದೆಯಂತೆ.

‘ಹೈಮೆನೋಪಿಮೆಸಿಸ್ ಆರ್ಗೈರಾಫಾಗಾ’ ಎಂದು ಕರೆಯಲ್ಪಡುವ ಕೋಸ್ಟರೀಕಾದ ಕಣಜವೊಂದು ಜೇಡವನ್ನು ಝಾಂಬಿಗಳನ್ನಾಗಿ ಪರಿವರ್ತನೆ ಮಾಡುವುದಂತೂ ನಿಜಕ್ಕೂ ಸೋಜಿಗ. ಹೆಣ್ಣು ಕಣಜಗಳು ಪ್ಲೆಸಿಯೊಮೆಟಾ ಆರ್ಗೈರಾ ಎಂಬ ನತದೃಷ್ಟ ಜೇಡದ ಕಿಬ್ಬೊಟ್ಟೆಯ ಭಾಗದಲ್ಲಿ ಮೊಟ್ಟೆಗಳನ್ನಿಡುತ್ತವೆ. ಕೆಲ ವಾರಗಳ ಕಾಲ ಯಾವುದೇ ತೊಂದರೆ ಇಲ್ಲದೆ ಬದುಕುವ ಆ ಜೇಡ, ಒಂದು ದಿನ ಇದ್ದಕ್ಕಿದ್ದಂತೆ ಚಿತ್ರ ವಿಚಿತ್ರವಾದ ಬಲೆಗಳನ್ನು ಹೆಣೆಯಲು ಶುರು ಮಾಡುತ್ತವೆ. ಇದರ ಹಿಂದಿರುವ ಅಂದರೆ, ಲಾರ್ವ ಹಂತಕ್ಕೆ ಬೆಳೆದಿರುವ ಮೊಟ್ಟೆಗಳು ಜೇಡದ ಹೊಟ್ಟೆಯೊಳಗೆ ಅದ್ಯಾವುದೋ ರಾಸಾಯನಿಕವನ್ನು ಚುಚ್ಚುತ್ತವೆ. ಆ ರಾಸಾಯನಿಕ ಜೇಡದ ದೇಹದಲ್ಲಿ ಬದಲಾವಣೆ ತಂದು, ಹೊಸ ರೀತಿಯ ಬಲೆಯ ಉತ್ಪತ್ತಿಗೆ ಕಾರಣವಾಗುತ್ತದೆ. ಆದರೆ ಈ ಹೊಸ ಬಲೆ ಜೇಡಕ್ಕಾಗಿ ನಿರ್ಮಿಸಲ್ಪಟ್ಟದ್ದು ಅಲ್ಲ! ಬದಲಿಗೆ ಲಾರ್ವಾಗಳು ಜೇಡವನ್ನು ಕೊಂದು ತಿಂದ ನಂತರ, ಅವುಗಳು ನಿರ್ಮಿಸುವ ಕೋಕೂನ್‌ಗಳನ್ನು ಪೋಷಿಸಲು ಬೇಕಾಗಿರುವ ವ್ಯವಸ್ಥೆ.

ಹೆಣ್ಣು ರತ್ನ ಕಣಜಗಳು ಸಂತಾನೋತ್ಪತ್ತಿಗೆ ತಯಾರಾದಾಗ, ತನ್ನ ಮರಿಗಳನ್ನು ಬೆಳೆಸುವುದಕ್ಕಾಗಿ ಜೀವಂತ ‘ನರ್ಸರಿ’ಯ ಹುಡುಕಾಟದಲ್ಲಿ ತೊಡಗುತ್ತದೆ. ಅದೇನು ಗೊತ್ತಾ? ಜಿರಳೆಗಳು! ಕಣಜವು ಮೊದಲಿಗೆ ವಿಷವನ್ನು ಚುಚ್ಚಿ, ನತದೃಷ್ಟ ಜಿರಳೆಯ ಮುಂಭಾಗದ ಕಾಲುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಮತ್ತೊಮ್ಮೆ ಅದರ ತಲೆಗೆ ವಿಷವನ್ನು ಚುಚ್ಚಿ, ತನ್ನ ಸ್ವಂತ ಇಚ್ಛೆಯಿಂದ ಚಲಿಸುವ ಸಾಮರ್ಥ್ಯವನ್ನು ಕಸಿದುಕೊಂಡು, ಜಿರಳೆಯನ್ನು ಆಂಟೆನಾದಿಂದ ಹಿಡಿದು ಬಿಲಕ್ಕೆ ಎಳೆದೊಯ್ದು, ಕಣಜವು ಬಲಿಪಶುವಿನ ಮೇಲೆ ತನ್ನ ಮೊಟ್ಟೆಯನ್ನು ಇಡುತ್ತದೆ. ಕಣಜದ ಲಾರ್ವಾವು ಜಿರಳೆಯನ್ನು ಹಲವಾರು ದಿನಗಳವರೆಗೆ ಸೇವಿಸಿ, ಅದರ ಹೊಟ್ಟೆಯಲ್ಲಿ ಬೆಳೆದು, ಸುಮಾರು ಒಂದು ತಿಂಗಳ ನಂತರ ವಯಸ್ಕನಾಗಿ ಹೊರಬರುತ್ತದೆ.

ಹಸುಗಳಂತಹ ಸಸ್ತನಿಗಳ ಯಕೃತ್ತುಗಳಲ್ಲಿ ಲ್ಯಾನ್ಸೆಟ್ ಲಿವರ್ ಫ್ಲೂಕ್ಸ್ ಎಂಬ ಫ್ಲಾಟ್ ವರ್ಮ್ ಕಂಡುಬರುತ್ತವೆ. ಇವುಗಳ ಮೊಟ್ಟೆಗಳು ಆತಿಥೇಯರ ಮಲದಲ್ಲಿ ಹೊರಹಾಕಲ್ಪಡುತ್ತವೆ. ಅವುಗಳನ್ನು ಬಸವನಹುಳುಗಳು ತಿನ್ನುತ್ತವೆ. ಬಸವನಹುಳುವೊಳಗೆ ಮೊಟ್ಟೆಗಳು ಒಡೆದು, ಮರಿಗಳು ಹೊರಬಂದ ನಂತರ, ಬಸವನಹುಳು ಪರಾವಲಂಬಿಗಳ ಸುತ್ತಲೂ ರಕ್ಷಣಾತ್ಮಕ ಚೀಲಗಳನ್ನು ಸೃಷ್ಟಿಸುತ್ತದೆ ಮತ್ತು ಅವುಗಳನ್ನು ಲೋಳೆಯ ಚೆಂಡುಗಳ ರೂಪದಲ್ಲಿ ಹೊರಹಾಕುತ್ತವೆ. ಲಿವರ್ ಫ್ಲೂಕ್ಸ್ ಗಳಿರುವ ಲೋಳೆ ಚೆಂಡುಗಳನ್ನು ಸೇವಿಸುವ ಇರುವೆಗಳು ‘ಝಾಂಬಿ’ಗಳಾಗಿ ಮಾರ್ಪಾಡುತ್ತವೆ. ಫ್ಲೂಕ್ಸ್‌ಗಳು ಇರುವೆಯ ಮೆದುಳನ್ನು ಪ್ರವೇಶಿಸಿದಾಗ, ಹುಲ್ಲಿನ ತುದಿಯಲ್ಲಿ ಓಡಾಡುವ ಇರುವೆಗಳು ಅಲ್ಲಿಯೇ ಚಲನರಹಿತವಾಗಿ ಕುಳಿತುಬಿಡುತ್ತವೆ! ಅಂತಹ ಹುಲ್ಲನ್ನು ಹಸುಗಳು ಮೇಯುವ ಸಾಧ್ಯತೆಯಿರುವುದರಿಂದ, ಲಿವರ್ ಫ್ಲೂಕ್ಸ್ ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ.

‘ಯುಹಾಪ್ಲೋರ್ಚಿಸ್ ಕ್ಯಾಲಿಫೋರ್ನಿಯೆನ್ಸಿಸ್’ ಎಂಬ ಪರಾವಲಂಬಿ ತನ್ನ ಜೀವನವನ್ನು ಶುರು ಮಾಡುವುದು ಸಾಗರದಲ್ಲಿ ವಾಸಿಸುವ ಕೊಂಬಿನ ಬಸವನಹುಳದಿಂದ. ಅದರೊಳಗೆ ಲಾರ್ವಾಗಳನ್ನು ಉತ್ಪಾದಿಸುತ್ತಾ ತಮ್ಮ ಮುಂದಿನ ಹೋಸ್ಟ್, ಕಿಲ್ಲಿಫಿಶನ್ನು ಅರಸುತ್ತದೆ. ಆ ಮೀನು ಸಿಕ್ಕಿದ ನಂತರ, ಪರಾವಲಂಬಿ ಅದರ ಕಿವಿರುಗಳಿಗೆ ಅಂಟಿಕೊಂಡು, ಕಾಲಕ್ರಮೇಣ ಮೆದುಳನ್ನು ಸೇರುತ್ತದೆ. ಆದರೆ ಇದು ಅದರ ಅಂತಿಮ ನಿಲುಗಡೆ ಅಲ್ಲ. ತನ್ನ ಸಂತಾನೋತ್ಪತ್ತಿ ಮಾಡಲು ಫ್ಲೂಕ್ಸ್ ನೀರಿನ ಹಕ್ಕಿಯ ಕರುಳಿನೊಳಗೆ ಹೋಗಬೇಕು! ಆದ್ದರಿಂದ ಕಿಲ್ಲಿಫಿಶ್‌ನ ಮೆದುಳಿನೊಳಗೆ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಫ್ಲೂಕ್ಸ್, ಮೀನುಗಳನ್ನು ಮಿನುಗುವಂತೆ ಮತ್ತು ಎತ್ತರಕ್ಕೆ ಜಿಗಿಯುವಂತೆ ಪ್ರೇರೇಪಿಸುತ್ತದೆ. ಇಂತಹ ಚಲನೆಗಳಿಂದ ಪಕ್ಷಿಗಳು ಆಕರ್ಷಿತಗೊಂಡು ಮೀನಿನ ಸಮೇತ ಫ್ಲೂಕ್ಸ್ ಅನ್ನು ತಿನ್ನುತ್ತದೆ. ನಂತರ ಹಕ್ಕಿಯ ಕರುಳಿನಲ್ಲಿ ಫ್ಲೂಕ್ಸ್ ತನ್ನ ವಂಶವನ್ನು ಬೆಳೆಸುತ್ತವೆ!

ಅಚ್ಚರಿ ಏನೆಂದರೆ 48,500 ವರ್ಷಗಳಷ್ಟು ಸಮಯ ಕಳೆದರೂ ಈ ವೈರಸ್‌ಗಳು ಇನ್ನೂ ಕೂಡ ಸಾಂಕ್ರಾಮಿಕವಾಗಿ ಉಳಿದಿವೆ! ಅವು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೋ ಗೊತ್ತಿಲ್ಲ. ಇಲ್ಲಿಯ ತನಕ ಬರೀ ಕೀಟ ಪ್ರಪಂಚವನ್ನು ಆಕ್ರಮಿಸಿಕೊಂಡಿದ್ದ ‘ಝಾಂಬಿ,’ ಮುಂದೆ ಪ್ರಾಣಿ ಪ್ರಪಂಚಕ್ಕೆ ಮಾರಕವಾಗುವುದೇ ಇನ್ನೂ ತಿಳಿದಿಲ್ಲ.

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

17 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

21 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

21 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

21 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

21 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

21 hours ago