ಜಿಲ್ಲೆಗಳು

ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನವನ್ನು ನಿಷೇಧಿಸುವಂತೆ ಮನವಿ

ಮೈಸೂರು: ಹುತಾತ್ಮ ಟಿಪ್ಪು ಸುಲ್ತಾನರ ವ್ಯಕ್ತಿತ್ವದ ಬಗ್ಗೆ ಕಾಲ್ಪನಿಕವಾಗಿ ಊಹಿಸಿ ದ್ವೇಷಭರಿತವಾದ ಪುಸ್ತಕ ಮತ್ತು ನಾಟಕ ಮುಟ್ಟುಗೋಲು ಹಾಕಿಕೊಂಡು ಪ್ರದರ್ಶನವನ್ನು ತಡೆಹಿಡಿಬೇಕು ಎಂದು ಫೆಡರೇಷನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಜೇಷನ್ಸ್ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಮನವಿ ಸಲ್ಲಿಸಿದೆ.

ನಗರದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್ಗನೈಜೇಷನ್ಸ್ ಮತ್ತು ಪ್ರಗತಿಪರರ ಸಂಘಟನೆಯ ಮುಖಂಡರು ಸಭೆ ನಡೆಸಿ ನಾಟಕದ ಪ್ರದರ್ಶನವನ್ನು ನಿಷೇಧಿಸುವಂತೆ ಮನವಿ ಮಾಡಿದರು.

ಪಕ್ಷಾತೀತವಾಗಿ ಧರ್ಮಾತೀತವಾಗಿ ಎಲ್ಲಾ ಜಾತಿ – ಮತಗಳ ಜನರನ್ನು ಈ ಸಾಂಸ್ಕ ತಿಕ ವೇದಿಕೆಯಿಂದ ಸೌಹಾರ್ದತೆ, ಜಾತ್ಯತೀತತೆ ಮತ್ತು ಮಾನವೀಂತೆಂನ್ನು ಬೆಳೆಸುವ ಉzಶದಿಂದ ರಂಗಾಂಣವನ್ನು ಸ್ಥಾಪಿಸಿ ಇಲ್ಲಿಂದ ಜನರಿಗೆ ಈ ಎಲ್ಲಾ ಉzಶಗಳು ತಲುಪುವಂತೆ ಮಾಡಬೇಕಾದ ವೇದಿಕೆಂಗಿದೆ. ಆದರೆ ಈಗಿನ ನಿರ್ದೇಶಕರು ಜನರನ್ನು ಜಾತಿಂ ಆಧಾರದ ಮೇಲೆ ವಿಭಜಿಸಲು ಪರಸ್ಪರ ಸಮುದಾಂಗಳ ನಡುವೆ ದ್ವೇಷ – ವೈಮನಸ್ಸು ಮತ್ತು ತಮ್ಮ ಸ್ವಾರ್ಥ ತತ್ವ ಸಿದ್ಧಾಂತಗಳನ್ನು ಹೇರಲು ಈ ವೇದಿಕೆ ಬಳಸುತ್ತಿರುವುದು ಖಂಡನೀಂ.

ಅನೇಕ ವಿವಾದಗಳಲ್ಲೇ ಇರುವ ಈ ನಿರ್ದೇಶಕರು ಈಗ ತಮ್ಮದೇ ಆದ ಲೇಖನವೆಂದು ಹೇಳಿ ‘ಟಿಪ್ತ್ಯ್ಪುವಿನ ನಿಜ ಕನಸುಗಳು‘ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಾಟಕವಿದ್ದು ಆ ನಾಟಕವನ್ನು ನ.೨೦ ರಿಂದ ರಂಗಾಂಣದಲ್ಲೇ ಪ್ರದರ್ಶಿಸುತ್ತಿದ್ದು, ಜಾತ್ಯತೀತ ಮನೋಭಾವವುಳ್ಳ ಸ್ವಾತಂತ್ರ್ಯ ಹೋರಾಟಗಾರ, ಚರಿತ್ರೆಂಲ್ಲಿ ಉಲ್ಲೇಖಿತವಾದ ವ್ಯಕ್ತಿ ಟಿಪ್ತ್ಯ್ಪು ಸುಲ್ತಾನ ಅವರ ಬಗ್ಗೆ ಮತಾಂಧ, ಧರ್ಮ ಪರಿವರ್ತನೆ ಮಾಡಿದ ಎಂಬ ಸುಳ್ಳನ್ನು ಹೇಳಲಾಗಿದೆ.

ಚರಿತ್ರೆಂಲ್ಲಿ ಮಠಮಾನ್ಯ ಮತ್ತು ದೇವಾಲಂಗಳನ್ನು ಜೀರ್ಣೋದ್ಧಾರ ಮಾಡಿದರು ಎಂದಿದ್ದರೆ ಅದರ ವಿರುದ್ಧವಾಗಿ ದೇವಾಲಂಗಳನ್ನು ಹೊಡೆದು ಮಸೀದಿ ಕಟ್ಟಿದ ಎಂಬ ಹಸಿ ಸುಳ್ಳುಗಳನ್ನು ಬರೆದಿದ್ದಾರೆ. ಚರಿತ್ರೆಂಲ್ಲಿ ಂದ್ಧ ರಂಗದಲ್ಲಿ ಮಡಿದದ್ದು ಅದು ವಿರೋಧಿಗಳ ಬಂದೂಕಿನಿಂದ ಎಂದಿದ್ದರೆ ಇವರು ಒಕ್ಕಲಿಗ ಸಮುದಾಂದವರು ಹೊಡೆದರೆಂದು ಅವರ ಹೆಸರುಗಳನ್ನು ಗೌಡ ಎಂದು ನಾಮವಿರುವುದು ಪ್ರಸ್ತಾಪಿಸಿ ಜನರ ಮಧ್ಯೆ ಘರ್ಷಣೆ, ಗಲಭೆ ಮತ್ತು ಅಶಾಂತಿ ಉಂಟಾಗಬೇಕೆನ್ನುವ ಎಲ್ಲಾ ತರದ ಪ್ರಂತ್ನ ಈ ಪುಸ್ತಕದ್ದಾಗಿದೆ. ಹೀಗಾಗಿ ಈ ಪುಸ್ತಕ ಮತ್ತು ನಾಟಕವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು, ನಾಟಕವನ್ನು ತಡೆಹಿಡಿಂಬೇಕು ಎಂದು ಫೆಡರೇಷನ್‌ನ ಪದಾಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದರು.

ಮೌಲನ್ ಆಶ್ರದ್, ಮಾಜಿ ಮಹಾಪೌರ ಅಯೂಬ್ ಖಾನ್, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ದಲಿತ ವೆಲ್ತ್‌ಫೇರ್ ಟ್ರಸ್ಟ್‌ನ ಶಾಂತರಾಜು, ಆರ್ಗನೈಜೇಷನ್‌ನ ಎಂ.ಎಫ್.ಕಲೀಮ್, ಖವಾಜ ಅಜ್ಹೀಮ್, ಅಜೀಜ್ ಉಲ್ಲಾ, ಮಕ್ಸೂದ್ ಮುಂತಾದವರು ಹಾಜರಿದ್ದರು.

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

8 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

9 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

24 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago