ಜಿಲ್ಲೆಗಳು

ಅಯೋಧ್ಯಾ ಎಂಬ ಪದವೇ ಸೋಲಿಲ್ಲದ್ದು ಎಂಬ ಅರ್ಥ: ಅನಂತ್‌ಕುಮಾರ್‌ ಹೆಗಡೆ!

ಬೆಂಗಳೂರು: “ಬೀಜ ಮಂತ್ರವಾಗಿದ್ದ ರಾಮ ನಾಮವು ತಾರಕ ಮಂತ್ರವಾಗಿ ಇದೀಗ “ಜೈ ಶ್ರೀರಾಮ್” ಎಂಬ ಶೌರ್ಯ ಮಂತ್ರವಾಗಿ ರಾಮಭಕ್ತರಲ್ಲಿ ಹೊಸ ಉಮೇದನ್ನು ಮೂಡಿಸಿದೆ” ಎಂದು ಉತ್ತರ ಕನ್ನಡದ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆ ಅಭಿಪ್ರಾಯಪಟ್ಟರು.
ಜನಪ್ರಿಯ ಲೇಖಕ  ಮೈಸೂರಿನ ಎಸ್ ಉಮೇಶ್ ರಚಿಸಿರುವ “ಅಯೋಧ್ಯಾ” ಕೃತಿಯ ಮೊದಲ ಪ್ರತಿಯನ್ನು ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಅವರಿಂದ ಸ್ವೀಕರಿಸಿ ಮಾತನಾಡಿ ಅವರು,”ಅಯೋಧ್ಯ ಎನ್ನುವ ಪದವೇ ಸೋಲು ಇರಲಾರದು ಎಂದು ಅರ್ಥ ಎಂದರು.
ಹೀಗಾಗಿ ಆಕ್ರಮಣ ನಡೆದರೂ ಕೂಡ ಅಯೋಧ್ಯೆ ಪದೇಪದೇ ಪುನರುಜ್ಜಿವನಗೊಂಡಿದೆ. ಇದೀಗ ವೈಭವದ ರಾಮ ರಾಜ್ಯ ನಿರ್ಮಾಣವಾಗಿದೆ. ರಾಮ ಎನ್ನುವ ಪದ ಈ ದೇಶದ ಅಸ್ಮಿತೆ, ಸ್ವಾಭಿಮಾನದ ಪ್ರತೀಕ ಎಂದರು.
ರಾಮನಾಮ ಇಲ್ಲಿಯ ಜನರ ಉಸಿರು. ಹೀಗಾಗಿ ಎಷ್ಟೇ ದೌರ್ಜನ್ಯ ನಡೆದರೂ ಈ ದೇಶದ ನೆಲದ ಸಂಸ್ಕೃತಿಯಿಂದ ರಾಮ ನಾಮವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಲೇಖಕ ಉಮೇಶ್ ಮಾತನಾಡಿ “ಕಳೆದ ಎರಡು ವರ್ಷಗಳ ನಿರಂತರ ಅಧ್ಯಯನದ ಫಲಶ್ರುತಿ ನನ್ನ ಈ ಕೃತಿ. ಈ ಪುಸ್ತಕ ರಚನೆಯಲ್ಲಿ ನನಗೆ ಹಲವರ ಸಹಾಯ ದೊರೆತಿದೆ.
ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ಆಶೀರ್ವಾದದಿಂದ ಪ್ರಾರಂಭಗೊಂಡ ಈ ಸಾರಸ್ವತ ಯಜ್ಞ ಹಲವರ ಸಹಾಯದಿಂದಾಗಿ ಸಾಕಾರಗೊಂಡಿರುವಂಥದ್ದು.
ರಾಮ ಜನ್ಮ ಭೂಮಿ ಟ್ರಸ್ಟ್ ನ ಗೋಪಾಲ್ ಜಿ, ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಚಂಪತ್ ರಾಯ್, ಉಚ್ಚ ನ್ಯಾಯಾಲಯದ ವಕೀಲ ಮೋಹನ್ ಪರಾಶರನ್ ಅವರ ಯೋಗದಾನ ಈ ಕೃತಿಯಲ್ಲಿದೆ.
ರಾಮ ಜನ್ಮ ಭೂಮಿಯ ಹೋರಾಟದ ಸಂಪೂರ್ಣ ಕಥನವನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ ಕನ್ನಡದ ಜನತೆಗೆ ಅಯೋಧ್ಯೆಯ ಹೋರಾಟ ತಲುಪಲಿ ಎಂಬ ಸದಾಶಿವದೊಂದಿಗೆ ಬರೆದಂತಹ ಕೃತಿ ಇದು.
ಓದುಗರು ಇದನ್ನ ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು” ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಧಾತ್ರಿ ಪ್ರಕಾಶನದ ಪ್ರಕಾಶಕಿ ಬೃಂದಾ ಉಮೇಶ್ “ಈ ಕೃತಿ ಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ” ಎಂದು ತಿಳಿಸಿದರು.
andolanait

Recent Posts

ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್‌ಗಳನ್ನು ವಶಕ್ಕೆ…

1 hour ago

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

2 hours ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

2 hours ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

3 hours ago

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…

3 hours ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…

3 hours ago