ಜಿಲ್ಲೆಗಳು

ವೃದ್ಧೆಗೆ ವಂಚಿಸಿ ಚಿನ್ನಾಭರಣ ಕಳವು

ಕುಶಾಲನಗರ :  ಅಪರಿಚಿತ ವ್ಯಕ್ತಿಯೋರ್ವ ವೃದ್ಧೆಯನ್ನು ವಶೀಕರಣ ಮಾಡಿ ವೃದ್ಧೆಯ ಚಿನ್ನಾಭರಣ ಅಪಹರಿಸಿದ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ನಡೆದಿದೆ. ಜನತಾ ಕಾಲನಿ 1ನೇ ಕ್ರಾಸ್ ನಿವಾಸಿಯಾದ ಅಬಕಾರಿ
ಇಲಾಖೆಯ ನಿವೃತ್ತ ನೌಕರ ಐತಪ್ಪನವರವ ಪತ್ನಿ ದೇವಮ್ಮನವರ ಚಿನ್ನಾಭರಣ ಕಳವು‌‌ ಮಾಡಲಾಗಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ, ದೇವಮ್ಮ‌ನವರನ್ನು ವಶೀಕರಿಸಿ ಚಿನ್ನಾಭರಣ ಕಳವು‌ ಮಾಡಲಾಗಿದೆ. ಮನೆ ಸಮೀಪದ ಗೌರಿ ಗಣೇಶ
ದೇವಾಲಯಕ್ಕೆ ಕಾಣಿಕೆ ನೀಡುವ ನೆಪದಲ್ಲಿ ಮನೆಯಂಗಳಕ್ಕೆ ಬಂದ ಅಪರಿಚಿತ ವ್ಯಕ್ತಿ, ಗಂಧದ ಕಡ್ಡಿ, ಬಿಸ್ಕತ್ ಪ್ಯಾಕ್, ಫೈವ್ ಸ್ಟಾರ್ ತುಂಬಿದ್ದ ಪ್ಲಾಸ್ಟಿಕ್ ಕವ ರ್ ಅನ್ನು ವೃದ್ಧೆಗೆ ನೀಡಿದ್ದಾನೆ. 100 ರೂಗಳ ಐದು ನೋಟು ಕೈಗೆ ನೀಡಿ ದೇವಾಲಯಕ್ಕೆ ಕಾಣಿಕೆ ಅರ್ಪಿಸಿ ಎಂದ ಬಳಿಕ, 100 ರೂ ನ ಒಂದು ನೋಟನ್ನು ಮಹಿಳೆಯ ಕೈಗೆ ಸುತ್ತುತ್ತಿದ್ದಂತೆ ಮಹಿಳೆ ಬಳೆ ಬಿಚ್ಚಿ ಕೊಟ್ಟಿದ್ದಾರೆ.
ಇವರ ಜೊತೆಯಲ್ಲಿ ಪತಿ ಐತಪ್ಪ ಕೂಡ ಇದ್ದರು ಒಂದು ಹಂತದಲ್ಲಿ ಬಳೆ ಬಿಚ್ಚಿಕೊಟ್ಟ ಬಳಿಕ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಪತಿ ಐತಪ್ಪ ಅವರಿಗೆ‌ ಮೋಸದ ವಾಸನೆ‌ ಬಂದಿದೆ. ನಂತರ ಸರವನ್ನು ಕೊಡಬೇಡ ಎನ್ನುತ್ತಿದ್ದಂತೆ ಅಪರಿಚಿತ ಸ್ಥಳದಿಂದ
ಕಾಲ್ಕಿತ್ತಿದ್ದು, ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬಳೆಯೊಂದಿಗೆ ಅಪರಿಚಿತ ಮಾಯವಾಗಿದ್ದಾನೆ. ಬೈಕ್ಅನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಬಂದಿದ್ದ ಅಪರಿಚಿತನೊಂದಿಗೆ ಮತ್ತೊಬ್ಬ ಇದ್ದ ಎನ್ನಲಾಗಿದ್ದು,
ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ, ಖದೀಮರ ಬೆನ್ನಟ್ಟಿದ್ದಾರೆ.
ಪಟ್ಟಣದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲಿದ್ದು, ಪೊಲೀಸರು ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

andolanait

Recent Posts

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

12 seconds ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

2 mins ago

ಕೆರೆ ನೀರಿಗಾಗಿ ಎರಡು ಗ್ರಾಮಸ್ಥರ ತಿಕ್ಕಾಟ!

ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ  ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…

9 mins ago

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…

14 mins ago

ಜಂಬೂಸವಾರಿಯಲ್ಲಿ ಈ ಬಾರಿ ತಾರಾ ಮೆರುಗು

ಕೆ.ಬಿ.ರಮೇಶನಾಯಕ ರವಿಚಂದ್ರನ್, ಶಿವರಾಜ್‌ಕುಮಾರ್, ಯಶ್, ರಿಷಭ್ ಶೆಟ್ಟಿ, ರಚಿತಾ ರಾಮ್, ಸಪ್ತಮಿ ಗೌಡ ಸೇರಿ ೩೦ ಕಲಾವಿದರು ಭಾಗಿ ಮೈಸೂರು:…

20 mins ago