ಯಳಂದೂರು : ತಾಲ್ಲೂಕಿನ ಹೊನ್ನೂರು ಗ್ರಾಮದ ಉಪ್ಪಾರ ಬಡಾವಣೆಯ ನಿವಾಸಿಗಳು ರಸ್ತೆ ಹಾಗೂ ಚರಂಡಿ ಮಾಡಿಸುವಂತೆ ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು.ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ,ತಾಲ್ಲೂಕು ಪಂಚಾಯತಿ ಅಧಿಕಾರಿ,ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.ಗ್ರಾಮದ ರವಿಕುಮಾರ್ ಮಾತನಾಡಿ ಉಪ್ಪಾರ ಸಮುದಾಯದ ಬಡಾವಣೆಯಲ್ಲಿ ಸುಮಾರು 40 ವರ್ಷ ಗಳಿಂದ ರಸ್ತೆ, ಚರಂಡಿ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ,ಯಾವುದೇ ಜನಪ್ರತಿನಿದಿನಗಳು,ಅಧಿಕಾರಿಗಳು ಹಿತ್ತಾ ಗಮನ ಹರಿಸುತ್ತಿಲ್ಲ,ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರುಕೂಡ ತಲೆಕೆಡಿಸಿ ಕೊಳ್ಳುತ್ತಿಲ್ಲ ನಮಗೆ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದರು.ಗ್ರಾಮದ ಮಹಿಳೆ ದುಂಡಮ್ಮ ಮಾತನಾಡಿ ನಮ್ಮ ಉಪ್ಪಾರ ಸಮುದಾಯ ಬಡಾವಣೆಯ ರಸ್ತೆ ಸುಮಾರು ವರ್ಷ ಗಳಿಂದ ಹಾಳಾಗಿದ್ದು ನಮ್ಮ ಮಕ್ಕಳು ಹಾಗೂ ವಯಸ್ಸಾದವರನ್ನ ಕರೆದುಕೊಂಡು ಹೋಗಲು ತುಂಬಾ ಕಷ್ಟ ವಾಗಿದೆ.ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಲು, ಆಂಬುಲೆನ್ಸ್ ಬರಲು ರಸ್ತೆಯಲ್ಲಿ ಆಗುವುದಿಲ್ಲ. ಆಗಾಗಿ ನಮಗೆ ತಕ್ಷಣ ರಸ್ತೆ ಮಾಡಿಸಿ ಸಾರ್ವಜನಿಕವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಪಿ.ಡಿ.ಓ.ನಿರಂಜನ್ ಮಾತನಾಡಿ ಈ ರಸ್ತೆಗೆ ಸ್ಥಳೀಯ ಶಾಸಕರ ಅನುದಾನದಲ್ಲಿ 20 ಲಕ್ಷ ಹಣ ಬಿಡುಗಡೆ ಆಗಿದೆ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು,ತುರ್ತಾಗಿ ನಿಮಗೆ ರಸ್ತೆ ಮಾಡ ಬೇಕಾದರೆ ನಮ್ಮ ಗ್ರಾಮ ಪಂಚಾಯತಿ ವತಿಯಿಂದ ನರೇಗಾ ಕಾಮಗಾರಿಯಲ್ಲಿ 15 ದಿನಗಳೋಳಗೆ ಕೆಲಸ ಮಾಡುತ್ತೆವೆ ಎಂದರು.ಪಿ ಡಿ ಓ ಮಾತಿಗೆ ಒಪ್ಪದ ಪ್ರತಿಭಟನೆಕರಾರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬರುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ನಮಗೆ ತಕ್ಷಣ ರಸ್ತೆ ಪ್ರಾರಂಭವಾಗಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರತ್ನಮ್ಮ,ಮಾರಮ್ಮ,ಮಹಾದೇವಮ್ಮ,ಲಕ್ಷ್ಮೀಮ್ಮ,ನೀಲಮ್ಮ,ರಾಜಮ್ಮ,ನಾಗರಾಜು,ಮಾದೇಶ್,ಕರಗಯ್ಯ,ಕಾಮಶೆಟ್ಟಿ,ನಾಗಶೆಟ್ಟಿ,ಜಗ್ಗು,ಮಹಾದೇವಶೆಟ್ಟಿ,ಸಿದ್ದಶೆಟ್ಟಿ,ನಿಂಗಶೆಟ್ಟಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…
ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…
ಸುಪ್ರೀಂ ಕೋರ್ಟ್ ಬಾಗಿಲು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತೆರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆದರೆ ದೇಶದ ಉತ್ತರದ…
ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ ಸಾರ್... ಎಲ್ಲ…
ಕೃಷ್ಣ ಸಿದ್ದಾಪುರ ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ ನಾಳೆ ೧೦ ಗಂಟೆಯವರೆಗೆ…