ಚಾಮರಾಜನಗರ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನೂತನ ವಿಧೇಯಕವನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಪಣ್ಯದಹುಂಡಿ ಬಳಿ ರೈತರು ಸೋಮವಾರ ರಸ್ತೆತಡೆ ಚಳವಳಿ ನಡೆಸಿದರು.
ನಗರ-ನಂಜನಗೂಡು ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರ ಪಾಲಿಗೆ ನೂತನ ವಿದ್ಯುತ್ ವಿಧೇಯಕ ಮರಣಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ವಿದ್ಯುತ್ ಖಾಸಗೀಕರಣವನ್ನು ಖಂಡಿಸಿದರು.
ಭಾಗ್ಯಜ್ಯೋತಿ, ಕುಠೀರಜ್ಯೋತಿ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ದೊರಕದಂತೆ ಮಾಡುವ ಷಡ್ಯಂತ್ರವನ್ನು ಈ ವಿಧೇಯಕದ ಮೂಲಕ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿಯಾಗಿಲ್ಲ.
ಇದರಿಂದ ಕಬ್ಬು ಬೆಳೆಗಾರರು ತೀವ್ರಸಂಕಷ್ಟದಲ್ಲಿದ್ದು ಪ್ರತಿ ಟನ್‌ಗೆ ಕನಿಷ್ಠ ೫ಸಾವಿರ ರೂ. ನಿಗಧಿ ಮಾಡಬೇಕೆಂದು
ಆಗ್ರಹಿಸಿದರು.
ಜಿಲ್ಲೆಯಲ್ಲಿ ಸತತಮಳೆ ಹಾಗೂ ಪ್ರವಾಹದಿಂದ ಇತ್ತೀಚೆಗೆ ನೂರಾರು ಕೋಟಿ ರೂ. ಬೆಲೆಬಾಳುವ ಬೆಳೆ ನಷ್ಟ ಸಂಭವಿಸಿದ್ದು ಆಗಿರುವ ನಷ್ಟವನ್ನು ಸರ್ಕಾರ ಯಥಾವತ್ತಾಗಿ ತುಂಬಿಕೊಡಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಗ್ರಹಿಸಿದರು. ತಹಶೀಲ್ದಾರ್ ಬಸವರಾಜು ಅವರು ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಗ್ಗೊಠಾರವಿಜಯಕುಮಾರ್, ಮೇಲಾಜಿಪುರ ಕುಮಾರ್, ಹೊನ್ನೂರು ಬಸವಣ್ಣ, ಕುಂದಕೆರೆ ಸಂಪತ್ತು, ಶಿವಮೂರ್ತಿ, ಅಶೋಕ್, ಮಹೇಂದ್ರ, ಮಹೇಶ್, ಕಡಬೂರುಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಚುನಾವಣಾ ಕಾವು ತೀವ್ರ ಕೆ.ಆರ್.ನಗರ: ರಾಜ್ಯ ಸರ್ಕಾರವು ಜಿಪಂ, ತಾಪಂ ಕ್ಷೇತ್ರಗಳ…
ಚಿರಂಜೀವಿ ಸಿ.ಹುಲ್ಲಹಳ್ಳಿ ಮಹೇಂದ್ರ ಆನೆ ಹೊರಬಿದ್ದ ಬಳಿಕ ಸ್ಪರ್ಧೆ ಜೋರು: ಪ್ರಶಾಂತ್, ಧನಂಜಯ, ಸುಗ್ರೀವ, ಏಕಲವ್ಯ ನಡುವೆ ಪೈಪೋಟಿ ಭಾನುವಾರ…
ನವೀನ್ ಡಿಸೋಜ ಮಡಿಕೇರಿ ದಸರಾಕ್ಕೆ ಕರಗಗಳೇ ಮುನ್ನುಡಿ ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ ಮಡಿಕೇರಿ: ಐತಿಹಾಸಿಕ ಮಡಿಕೇರಿ…
ಕೆ.ಬಿ.ರಮೇಶನಾಯಕ ಇಂದು ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ ಕೊಪ್ಪಳದ ಗವಿಮಠ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ ವಿದುಷಿ ಡಾ.ಮೈಸೂರು ನಾಗಮಣಿ ಶ್ರೀನಾಥ್‌ಗೆ…
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…