Andolana originals

ಮಣ್ಣಿನ ಘಮ, ನಾಟಿ ಸಂಭ್ರಮ, ಗ್ರಾಮೀಣ ಕ್ರೀಡೆಗಳ ಉತ್ಸಾಹ

ಲಕ್ಷ್ಮೀಕಾಂತ್ ಕೊಮಾರಪ್ಪ

ಮಣ್ಣಿನೊಂದಿಗೆ ಯುವಜನರ ನಂಟು ಬೆಸೆಯುವ ಉದ್ದೇಶ 

ನಾಳೆ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಗದ್ದೆ ನಾಟಿ

ಸೋಮವಾರಪೇಟೆ: ಮಣ್ಣಿನೊಂದಿಗೆ ಯುವಜನರ ನಂಟು ಬೆಸೆಯುವ, ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೊಡಗಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಯಿಫಾ) ವತಿಯಿಂದ ಆ.೨೮ರಂದು ಹೆಬ್ಬಾಲೆ ಗ್ರಾಮದಲ್ಲಿ ಗದ್ದೆ ನಾಟಿ ಹಾಗೂ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಹೆಬ್ಬಾಲೆ ಗ್ರಾಮದ ಕೃಷಿಕ ಸಂದೇಶ್ ಅವರ ಭತ್ತದ ಗದ್ದೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಇದರೊಂದಿಗೆ ಸ್ಥಳೀಯರಿಗಾಗಿ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.

೨೦೧೮ರಿಂದ ಯಿಫಾ ವತಿಯಿಂದ ಗದ್ದೆ ನಾಟಿ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಯುವಕರು ಮಣ್ಣಿನೊಂದಿಗೆ ಬೆರೆಯಬೇಕು ಎಂಬ ಉದ್ದೇಶದಿಂದ ೨೦೧೮ರಿಂದ ಗದ್ದೆನಾಟಿ ಮತ್ತು ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಯುವಕರು ಕೂಡ ೨೦೧೮ರಲ್ಲಿ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ನಗರ ಜೀವನದಲ್ಲಿರುವ ಯುವಕರಿಗೂ ನಮ್ಮ ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುವುದು ಈ ಕಾರ್ಯಕ್ರಮದ ವಿಶೇಷತೆ. ಮಣ್ಣಿನ ಘಮ, ನಾಟಿಯ ಸಂಭ್ರಮ ಮತ್ತು ಗ್ರಾಮೀಣ ಕ್ರೀಡೆಗಳ ಉತ್ಸಾಹ ಒಂದೇ ವೇದಿಕೆಯಲ್ಲಿ ಮೇಳೈಸಲಿದ್ದು, ಹೆಬ್ಬಾಲೆಯಲ್ಲಿ ಆ.೨೮ರಂದು ನಡೆಯಲಿರುವ ಕಾರ್ಯಕ್ರಮ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.

ಮೊದಲ ಬಾರಿಗೆ ನಾಟಿ ಮಾಡಿದ್ದ ಸಂಸದ ಯದುವೀರ್ ಯಿಫಾ ವತಿಯಿಂದ ಕಳೆದ ಬಾರಿ ಹುದುಗೂರು ಗ್ರಾಮ ದಲ್ಲಿ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ ಮೈಸೂರು – ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಜೀವನದಲ್ಲೇ ಮೊದಲ ಬಾರಿಗೆ ರೈತರೊಂದಿಗೆ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ರೈತರೊಂದಿಗೆ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನೆಟ್ಟು, ಕೃಷಿಯ ಮಹತ್ವ ಹಾಗೂ ಯುವಜ ನರು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದ್ದರು. ಈ ಬಾರಿಯ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಅವರು ಸೇರಿದಂತೆ ಶಾಸಕ ಡಾ.ಮಂಥರ್‌ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್, ಉದ್ಯಮಿಗಳಾದ ಎಡಿಕೇರಿ ಪ್ರಸನ್ನ, ಹರಪಳ್ಳಿ ರವೀಂದ್ರ, ಕೊತ್ನಳ್ಳಿ ಅರುಣ್, ನಾಪಂಡ ಮುತ್ತಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಂತ ಯಿಫಾ:  ಯಿಫಾ ಜನಸೇವೆಯ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಇಂದು ಜನಸೇವೆ, ಸಾಮಾಜಿಕ ಜಾಗೃತಿ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿಕಾರ್ಯನಿರ್ವಹಿಸುತ್ತಿದೆ. ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಯಿಫಾ, ೨೦೧೯ರಲ್ಲಿ ಉತ್ತರ ಕರ್ನಾಟಕ ಹಾಗೂ ಕೊಡಗು ಭಾಗದಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿಯೂ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು. ೨೦೨೦-೨೧ರ ಕೋವಿಡ್ ಸಂಕಷ್ಟದ ಸಮಯದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿತು

” ಯುವ ಪೀಳಿಗೆ ಮಣ್ಣಿನೊಂದಿಗೆ ನಂಟು ಬೆಳೆಸಿಕೊಂಡು, ಕೃಷಿಯನ್ನು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ಯುವಜನರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದಲೇ ೨೦೧೮ರಿಂದ ಗದ್ದೆನಾಟಿ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ.”

-ಶ್ರೀನಿಧಿ ಲಿಂಗಪ್ಪ, ಅಧ್ಯಕ್ಷ, ಯಿಫಾ ಕೊಡಗು

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

2 hours ago

ಓದುಗರ ಪತ್ರ: ಶೇ. ೭.೫ರಷ್ಟು ಮೀಸಲಾತಿ: ಜನ ಮೆಚ್ಚುವ ನಿರ್ಧಾರ

ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…

2 hours ago

ಓದುಗರ ಪತ್ರ: ಸುಪ್ರೀಂಕೋರ್ಟ್ ಪೀಠಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು

ಸುಪ್ರೀಂ ಕೋರ್ಟ್ ಬಾಗಿಲು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತೆರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆದರೆ ದೇಶದ ಉತ್ತರದ…

2 hours ago

‘ಬಂದೋಬಸ್ತ್ ’ ಎಂಬ ಬದ್ಧತೆ

ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ  ಸಾರ್... ಎಲ್ಲ…

2 hours ago

ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಕೃಷ್ಣ ಸಿದ್ದಾಪುರ ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ   ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್…

2 hours ago

ಡೆಡ್ ಬಾಡಿ ಬಿಸಾಕಿದ ಜಾಗದಲ್ಲಿ ಹೊಸ ಸುಳಿವು

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ ನಾಳೆ ೧೦ ಗಂಟೆಯವರೆಗೆ…

3 hours ago