ಶಾಸಕರಿಗೆ ಅನಾರೋಗ್ಯ; ಮಳೆ ಹಾನಿ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ನೊಂದವರು
ಮಂಜು ಕೋಟೆ
ಎಚ್.ಡಿ.ಕೋಟೆ: ಕ್ಷೇತ್ರದ ಶಾಸಕರಿಗೆ ಅನಾರೋಗ್ಯವಿದ್ದರೆ ಅಧಿಕಾರಿಗಳ ಕಾರುಬಾರು ನಡೆಸುತ್ತಿದ್ದು, ಇತ್ತ ಮಳೆ ಹಾನಿಯ ಪರಿಹಾರಕ್ಕಾಗಿ ರೈತರು ಮತ್ತು ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಹಿಂದುಳಿದ ತಾಲ್ಲೂಕಿನಲ್ಲಿ ಮಹಾಮಳೆಯ ಆರ್ಭಟದಿಂದ ಅನೇಕ ಮನೆಗಳು ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿ ರೈತರು ಮತ್ತು ಜನಸಾಮಾನ್ಯರು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ. ಇವರುಗಳಿಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿ ವರ್ಗ ಆನೆ ನಡೆದಿದ್ದೇ ದಾರಿ ಎಂಬಂತೆ ಕಾರ್ಯವಹಿಸುತ್ತಿರುವುದರಿಂದ ನೊಂದವರಿಗೆ ಮತ್ತು ಬಡವರಿಗೆ ದಿಕ್ಕೇ ತೋಚದಂತಾಗಿದೆ.
ಕಳೆದ ಹತ್ತು ದಿನಗಳಿಂದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ತಾಲ್ಲೂಕಿನಲ್ಲಿರುವ ಅಧಿಕಾರಿಗಳಿಗೆ ಯಾರೂ ಹೇಳುವವರು ಕೇಳುವವರು ಇಲ್ಲವಾಗಿದೆ. ಅಧಿಕಾರಿಗಳು ಹೇಳುವ ಮಾತುಗಳೇ ಅಂತಿಮವಾಗಿದೆ. ಇದರಿಂದಾಗಿ ಮಳೆ ಹಾನಿಯಿಂದ ಅನಾಹುತವಾಗಿಮನೆ ಮತ್ತು ಬೆಳೆ ಕಳೆದುಕೊಂಡವರು ಅಧಿಕಾರಿಗಳು ಕೇಳಿದ ಎಲ್ಲಾ ದಾಖಲಾತಿಗಳು ಮತ್ತು ಹಣ ಕೊಟ್ಟು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪ್ರತಿನಿತ್ಯ ಸರಗೂರು ಮತ್ತು ಕೋಟೆ ತಾಲ್ಲೂಕು ಕಚೇರಿಗಳಿಗೆ ಆ ಗ್ರಾಮ ಪಂಚಾಯಿತಿಗಳು ಕಂದಾಯ ಅಧಿಕಾರಿಗಳ ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಕಚೇರಿಗೆ ನೂರಾರು ಮಂದಿ ಅಲೆದಾಡಿದರೂ ಕೆಲವರ ಕೆಲಸ ಕಾರ್ಯಗಳು ಮಾತ್ರ ಆಗುತ್ತಿದ್ದು ಉಳಿದವರ ಕೆಲಸ ಕಾರ್ಯಗಳು ಹಾಗೇ ಉಳಿದುಕೊಳ್ಳುತ್ತಿವೆ.
ಮಳೆಹಾನಿ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು ಹಣ ಪಡೆದು ಅಧಿಕಾರಿಗಳು ಮೂಲಕ ಕೆಲಸ ಕಾರ್ಯಗಳನ್ನು ಭರದಿಂದ ಮಾಡಿಸಿಕೊಡುವಲ್ಲಿ ಮುಂದಾಗುತ್ತಾರೆ. ಆದರೆ, ನೊಂದವರಿಗೆ ಮತ್ತು ರೈತರ ಪರವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಿದಾಗ ಮಾತ್ರ ಸರ್ಕಾರ ನೀಡುವ ೋಂಜನೆಗಳು ಹಿಂದುಳಿದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಸದ್ಬಳಕೆಯಾಗಲು ಸಾಧ್ಯವಾಗಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಶಾಸಕ ಅನಿಲ್ ಚಿಕ್ಕಮಾದು ಮಳೆ ಹಾನಿಯ ಪರಿಹಾರದ ವಿಚಾರದಲ್ಲಿ ಹೆಚ್ಚಿನ ರೀತಿ ಗಮನಹರಿಸಬೇಕಾಗಿದೆ.
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…