ಜಿಲ್ಲೆಗಳು

ಅರ್ಜುನನ ಅಂತ್ಯಕ್ರಿಯೆಗೆ ಸಿಎಂ, ಡಿಸಿಎಂ ಯಾಕೆ ಬರಲಿಲ್ಲ? ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂತು ಕೂಗು

ಕಾಡಾನೆಯೊಂದರ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ದಸರಾ ಆನೆ ಅರ್ಜುನನ ಕುರಿತು ಇದೀಗ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅರ್ಜುನನ ಮಾವುತ ವಿನು ಕಾಡಾನೆಗೆ ಗುಂಡು ಹಾರಿಸುವ ಬದಲು ಅರ್ಜುನನಿಗೆ ಗುಂಡು ಹಾರಿಸಿದರು ಎಂದು ಆರೋಪಿಸಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರು ಹಾಕಿದ್ದು ಅರ್ಜುನನ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಉಂಟಾಗುವ ಹಾಗೆ ಮಾಡಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಅರ್ಜುನನ ಅಂತ್ಯಕ್ರಿಯೆಯ ಬಗ್ಗೆ ಪೋಸ್ಟ್‌ ಒಂದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳವರೆಗೆ ಹಲವು ಪ್ರಶ್ನೆಗಳನ್ನು ಹಾಕಲಾಗಿದೆ.

ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ಏನಿದೆ?

ಈ ವೈರಲ್‌ ಪೋಸ್ಟ್‌ನಲ್ಲಿ “ಅರ್ಜುನ ಸತ್ತಾಗ ಯಾರಿಗೂ ಬೇಡ ದಸರಾ ಸಮಯದಲ್ಲಿ ಮಾತ್ರ ಬೇಕಾ ನಿಮಗೆ?” ಎಂಬ ಹೆಡ್‌ಲೈನ್‌ ಒಂದನ್ನು ಬರೆಯಲಾಗಿದ್ದು ಪ್ರಶ್ನೆಗಳು ಈ ಕೆಳಕಂಡಂತಿವೆ..

1. ಮೈಸೂರು ರಾಜರು ಯಾಕೆ ಬರಲಿಲ್ಲ?
2. ಮುಖ್ಯಮಂತ್ರಿಗಳು ಯಾಕೆ ಬರಲಿಲ್ಲ?
3. ಉಪಮುಖ್ಯಮಂತ್ರಿ ಯಾಕೆ ಬರಲಿಲ್ಲ?
4. ರಾಜಕಾರಣಿಗಳು ಯಾಕೆ ಬರಲಿಲ್ಲ?
5. ಮೈಸೂರಿನಲ್ಲಿ ಅಂತ್ಯಕ್ರಿಯೆ ಯಾಕೆ ಮಾಡಲಿಲ್ಲ?
6. ತರಾತುರಿಯಲ್ಲಿ ಯಾಕೆ ಅಂತ್ಯಕ್ರಿಯೆ ಮಾಡಿದರು?
7. ಅರ್ಜುನನ ಸಾವಿನ ಸಂದರ್ಭದ ವಿಡಿಯೊಗಳನ್ನು ಯಾಕೆ ಹಂಚಿಕೊಂಡಿಲ್ಲ?
8. ದಂತ ಕತ್ತರಿಸುವ ಅಗತ್ಯವೇನಿತ್ತು?
9. ಆನೆಗಳಿಗೆ 60 ವರ್ಷ ವಯಸ್ಸಾದರೆ ವಿಶ್ರಾಂತಿ ನೀಡಬೇಕು, ಅರ್ಜುನನಿಗೆ 64 ವರ್ಷ ವಯಸ್ಸಾದರೂ ಈ ಬೇಟೆ ಬೇಕಿತ್ತಾ?

ಈ ಪೋಸ್ಟ್‌ ಅನ್ನು ಹಲವಾರು ಮಂದಿ ಹಂಚಿಕೊಂಡಿದ್ದು ಸಂಬಂಧಪಟ್ಟವರು ಇದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.

andolana

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

13 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

14 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

15 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

16 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

19 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

19 hours ago