ಮೈಸೂರು

ಕೆಸರೆ ನೀರು ಸಂಸ್ಕರಣ ಘಟಕ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಪ ಲೋಕಾಯುಕ್ತ ಭೇಟಿ, ಪರಿಶೀಲನೆ

ಮೈಸೂರು : ಉಪ ಲೋಕಾಯುಕ್ತ ಕೆ.ಎನ್.ಪಣೇಂದ್ರ ಅವರು ಶುಕ್ರವಾರ ಬೆಳಿಗ್ಗೆ ಕೆಸರೆ ನೀರು ಸಂಸ್ಕರಣ ಘಟಕ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ಕೆಸರೆ ನೀರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ನೀರು ಸಂಸ್ಕರಣ ಘಟಕದಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಇಲ್ಲಿರುವ ಪ್ರದೇಶದಲ್ಲಿ ಗಿಡ ಗಂಟೆಗಳನ್ನು ತೆರವುಗೊಳಿಸಿ ಹೂವಿನ ಹಾಗೂ ಉತ್ತಮ ಗಿಡಗಳನ್ನು ಹಾಕಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಹಳ್ಳಿಗಳ ಕಡೆ ಸ್ವಚ್ಚತೆ ಆದ್ಯತೆ ನೀಡಬೇಕು. ಸ್ವಚ್ಚತೆಯ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಒಳ ಕಸ ಹಾಗೂ ಹಸಿ ಕಸದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅದರಂತೆ ಸ್ವಚ್ಚತೆಗೆ ಸಾರ್ವಜನಿಕರಿಂದಲೂ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಜ್ಞರಿಂದ ತಪಾಸಣೆ ಮಾಡಿಸಿ
ನಂತರ ಉಪ ಲೋಕಾಯುಕ್ತರು ಕೆಸರೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನರು ಮನವಿಯ ಮೇರೆಗೆ ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿ 5 ಕಿ.ಮೀ ಒಳಗೆ ಯಾವುದಾದರೂ ಮನೆಯಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಹಾಗೂ ಹೋಟೆಲ್‌ಗಳಿಗೆ ಜನರಿಗೆ ತೊಂದರೆ ಆಗಿದ್ರೆ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ 500 ಮೀ ಒಳಗೆ ನಿವೇಶನಗಳು ಇದ್ದರೆ ರದ್ದು ಪಡಿಸುವ ಕೆಲಸ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಹಾಗೂ ಜನರಿಗೆ ವಾಸನೆಯಿಂದ ಆರೋಗ್ಯದಲ್ಲಿ ಸಮಸ್ಯೆ ಆಗುವ ಬಗ್ಗೆ ಪರಿಶೀಲನೆ ಮಾಡಿಸಿ.. ಮುನ್ನೇಚರಿಕೆ ಕ್ರಮವಾಗಿ ಜನರಿಗೆ ಘಟಕದಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಆಸಿಫ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

‘ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ…’

ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ.…

1 second ago

ಕಾವೇರಿ ನದಿಯಲ್ಲಿ ಬರೀ ಬಂಡೆಗಲ್ಲುಗಳ ದರ್ಶನ

ಭೇರ್ಯ ಮಹೇಶ್ ಬಿರುಬಿಸಿಲಿಗೆ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು; ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ  ಕೆ.ಆರ್.ನಗರ: ಬಿರುಬಿಸಿಲಿನ ಝಳಕ್ಕೆ ಭತ್ತದ…

8 mins ago

ಮದ್ದೂರಮ್ಮ ಉತ್ಸವ; ಕಳೆಗಟ್ಟಿದ ದನಗಳ ಜಾತ್ರೆ

ಎಂ.ಆರ್.ಚಕ್ರಪಾಣಿ ಜಾತ್ರೆಯಲ್ಲಿ ಹಳ್ಳಿಕಾರ್ ಎತ್ತುಗಳು, ಟಗರುಗಳ ಆಕರ್ಷಣೆ; ಸ್ಥಳವಕಾಶದ ಕೊರತೆಗೆ ರೈತರು ಬೇಸರ ಮದ್ದೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶನಿವಾರ…

13 mins ago

ಮುಸ್ಲಿಂ ಸಮುದಾಯದ ಜಹಾನ ಈಗ ವೈದ್ಯೆ!

ಕೋಟೆ ತಾಲ್ಲೂಕಿನ ಮುಸ್ಲಿಂ ಸಮುದಾಯದ ಪ್ರಥಮ ವೈದ್ಯೆ ಎಂಬ ಹೆಗ್ಗಳಿಕೆ ಹೊಂದಿದ ಜಹಾನ   ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ…

9 hours ago

ಚೇತನ್ ಅಹಿಂಸಾ ಗಡಿಪಾರಿಗೆ ಆಗ್ರಹ

ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…

13 hours ago