Andolana originals

ಮದ್ದೂರಮ್ಮ ಉತ್ಸವ; ಕಳೆಗಟ್ಟಿದ ದನಗಳ ಜಾತ್ರೆ

ಎಂ.ಆರ್.ಚಕ್ರಪಾಣಿ

ಜಾತ್ರೆಯಲ್ಲಿ ಹಳ್ಳಿಕಾರ್ ಎತ್ತುಗಳು, ಟಗರುಗಳ ಆಕರ್ಷಣೆ; ಸ್ಥಳವಕಾಶದ ಕೊರತೆಗೆ ರೈತರು ಬೇಸರ

ಮದ್ದೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಇತಿಹಾಸ ಪ್ರಸಿದ್ಧ ಶ್ರೀ ಮದ್ದೂರಮ್ಮ ದನಗಳ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ರೈತರು ರಾಸುಗಳನ್ನು ತಂದು ಕಟ್ಟಿದ್ದು ಜಾತ್ರೆಗೆ ಕಳೆಗಟ್ಟಿದೆ.

ಏ.೨೫ರಿಂದ ಪ್ರಾರಂಭವಾಗಿ ಏ.೩೦ರವರೆಗೆ ನಡೆಯಲಿರುವ ಜಾತ್ರೆಗೆ ಮದ್ದೂರು ತಾಲ್ಲೂಕು ಸೇರಿದಂತೆ ಮಂಡ್ಯ, ರಾಮನಗರ, ಮಾಗಡಿ,  ಹುಲಿಯೂರುದುರ್ಗ, ಅನೆಕಲ್, ಮೈಸೂರು.  ಶ್ರೀರಂಗಪಟ್ಟಣ, ಚಾಮರಾಜನಗರ, ಕನಕಪುರ,  ಕುಣಿಗಲ್ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ರಾಸುಗಳು ಆಗಮಿಸಿವೆ. ಜಾತ್ರೆಯಲ್ಲಿ ೪೦ ಸಾವಿರದಿಂದ ೨೫ ಲಕ್ಷ ರೂ. ಬೆಲೆಬಾಳುವ ದನಗಳಿದ್ದು, ಜಾತ್ರೆಯಲ್ಲಿ ದನಗಳನ್ನು ಖರೀದಿ ಮಾಡಲು ಬೇರೆ ಜಿಲ್ಲೆಯ ಮತ್ತು ರಾಜ್ಯಗಳಿಂದಲೂ ರೈತರು ಆಗಮಿಸುತ್ತಿದ್ದಾರೆ.  ಜಾತ್ರೆಯಲ್ಲಿ ಬಹುತೇಕ ಹಳ್ಳಿಕಾರ್ ತಳಿಯ ರಾಸುಗಳನ್ನು ರೈತರು ಕಟ್ಟಿರುವುದು ವಿಶೇಷವಾಗಿದೆ.

ಜಾತ್ರೆ ವಿಶೇಷ:  ಮದ್ದೂರಮ್ಮ ಜಾತ್ರೆಯಲ್ಲಿ ೧ ಲಕ್ಷದಿಂದ ೩ ಲಕ್ಷ ರೂ.ವರೆಗೆ ಬೆಲೆ ಬಾಳುವ   ಟಗರುಗಳನ್ನು ಮಾರಾಟಕ್ಕೆ ಕಟ್ಟಲಾಗಿದೆ. ಲಕ್ಷ ರೂ. ಬೆಲೆಬಾಳುವ ಕಪ್ಪು ಎತ್ತುಗಳನ್ನು ಕಟ್ಟಿದ್ದು ಸಾರ್ವಜನಿಕರು ಇದನ್ನು ನೋಡಲು ಮುಗಿಬಿದ್ದಿದ್ದಾರೆ. ಕುದುರೆಯನ್ನು ಕೂಡ ಜಾತ್ರೆಯಲ್ಲಿ ಮಾರಾಟಕ್ಕೆ ಕಟ್ಟಲಾಗಿದೆ. ಪಟ್ಟಣದ ಪೊಲೀಸ್ ಕ್ವಾರ್ಟರ್ಸ್, ತಾಪಂ ಕಚೇರಿಯ ಎದುರು ಹಾಗೂ ಪೇಟೆ ಬೀದಿ ಮಳವಳ್ಳಿ ರಸ್ತೆ, ರಾಮಮಂದಿರ ಪಾರ್ಕ್, ಸರ್ಕಾರಿ ಮಹಿಳಾ ಕಾಲೇಜು ವಿವಿಧ ಭಾಗಗಳಲ್ಲಿ ದನಗಳನ್ನು ಕಟ್ಟಲಾಗಿದೆ.  ಸಂಜೆಯಾದಂತೆ ಜಾತ್ರೆಯಲ್ಲಿ ರಾಸುಗಳನ್ನು ಮಧುವಣಿಗಿತ್ತಿಯಂತೆ ಸಿಂಗಾರ ಮಾಡಿ ಮೆರವಣಿಗೆ ನಡೆಸಲಾಗುತ್ತದೆ.

ಜಾತ್ರೆ ಆಯೋಜಿಸಿರುವ ಮೈದಾನದಲ್ಲಿ ಸ್ಥಳಾವಕಾಶಕೊರತೆ ಹಾಗೂ ರಾಸುಗಳ ಪ್ರಮಾಣ ಕಡಿಮೆಯಾದ ಕಾರಣ ಇತ್ತೀಚೆಗೆ ನಡೆಯುತ್ತಿರುವ ಜಾತ್ರೆಗೆ ಮೊದಲಿನಷ್ಟು ರಾಸುಗಳು ಆಗಮಿಸುತ್ತಿಲ್ಲ ಎಂಬುದು ಬೇಸರ ಸಂಗತಿಯಾಗಿತ್ತು.  ಆದರೆ, ಇತ್ತೀಚೆಗೆ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದರಿಂದಪೇಟೆಬೀದಿಯ ತಾಪಂನಿಂದ ಪ್ರವಾಸಿ ಮಂದಿರದ ತನಕ ಎರಡು ಬದಿಯ ಫುಟ್‌ಪಾತ್‌ಗಳಲ್ಲಿ ರಾಸುಗಳನ್ನು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ರೈತರು ಶಾಮಿಯಾನ ,  ಚಪ್ಪರ ಹಾಕಿ ದೀಪಾಲಂಕಾರದಿಂದ ಸಿಂಗರಿಸಿ,  ಜಾನುವಾರುಗಳನ್ನು ಕಟ್ಟಲು ಸ್ಥಳಾವಕಾಶ ಕಲ್ಪಿಸಲಾಗಿದೆ.

ಈ ಬಾರಿ ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಸುಗಳಿಗೆ ಚಾಂಪಿಯನ್‌ಶಿಪ್ ಘೋಷಣೆ ಮಾಡಿದ್ದಾರೆ. ರಾಸುಗಳಿಗೆ ಮೊದಲನೆ ಬಹುಮಾನ ೨ ಲಕ್ಷ ರೂ., ೨ನೇ ಬಹುಮಾನ ೧ ಲಕ್ಷ ರೂ., ೩ನೇ ಬಹುಮಾನ ೫೦ ಸಾವಿರ ರೂ., ಸಮಾಧಾನಕರ ಬಹುಮಾನ ೧೦ ಸಾವಿರ ರೂ. ನಿಗದಿಪಡಿಸಿರುವುದರಿಂದ] ರೈತರು ಅತಿ ಹೆಚ್ಚು ಬೆಲೆ ಬಾಳುವ ರಾಸುಗಳನ್ನು ಜಾತ್ರೆ ಮೈದಾನದಲ್ಲಿ ಕಟ್ಟಿದ್ದಾರೆ.

ಇದಲ್ಲದೆ ಟಗರುಗಳಿಗೆ ತಲಾ ೧೦ ಸಾವಿರ ರೂ.  ಬಹುಮಾನ ಘೋಷಣೆಯಾಗಿದ್ದು, ಈ ಬಾರಿ ಅತಿ ಹೆಚ್ಚು ಟಗರುಗಳನ್ನು ರೈತರು ಕಟ್ಟಿದ್ದಾರೆ. ರಸ್ತೆ ಬದಿಯಲ್ಲಿರುವ ಜಾಗದಲ್ಲಿ ರಾಸುಗಳನ್ನು ಕಟ್ಟುತ್ತಿದ್ದು, ಇದರಿಂದ ಸಣ್ಣಪುಟ್ಟ ಅಂಗಡಿ, ಹೋಟೆಲ್ಗಳ ಮಾಲೀಕರಿಗೆ ಸಮಸ್ಯೆಯಾಗುತ್ತಿದೆ. ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು, ಇದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಹತ್ವ ಪಡೆದ ಮದ್ದೂರಮ್ಮ ಮಹೋತ್ಸವ ಇತಿಹಾಸ ಪ್ರಸಿದ್ಧ ಐತಿಹಾಸಿಕ ಶ್ರೀ ಮದ್ದೂರಮ್ಮ ದನಗಳ ಜಾತ್ರೆ ಎಂದರೆ ಬಹಳ ವಿಶೇಷತೆ ಇದೆ. ರಾಜ್ಯದ ವಿವಿಧ ಮೂಲೆಗಳಿಂದ ರೈತರು ರಾಸುಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಬರುತ್ತಾರೆ. ೧೦ ದಿನಗಳಿಗೂ ಹೆಚ್ಚು ದಿನಗಳ ಕಾಲ ದನಗಳ ಜಾತ್ರೆಯಲ್ಲಿ ಸಂಭ್ರಮ ಮನೆ ಮಾಡಲಿದೆ. ಆದರೆ ಇದಕ್ಕೆ ತಕ್ಕಂತೆ ಜಾಗದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀ ಮದ್ದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ ೩ರಂದು ಕೊಂಡದ ಕೊಂಟು. ಮೇ ೫ ರಂದು ಬಂಡಿ ಉತ್ಸವ ನಡೆಯಲಿದೆ. ಮೇ ೬ರ ಬೆಳಿಗ್ಗೆ ಶ್ರೀ ಮದ್ದೂರಮ್ಮನವರ ಕೊಂಡೋತ್ಸವ, ಮೇ ೭ರಂದುಮಧ್ಯಾಹ್ನ ಸಿಡಿ ಉತ್ಸವ, ಶ್ರೀಉಗ್ರನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ  ನಡೆಯಲಿದೆ.

ಮೇ ೮ಕ್ಕೆ ಓಕಳಿ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಮೇ ೯ಕ್ಕೆ ಮದ್ದೂರಮ್ಮ ಮಠಮನೆ ಸೇರಲಿದೆ. ಈ ಬಾರಿ ನರಸಿಂಹಸ್ವಾಮಿ ರಥೋತ್ಸವ ಮದ್ದೂರಮ್ಮ ಜಾತ್ರೆ ಇತಿಹಾಸ ವೈಭವೀಕರಿಸುವಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ಎಲ್ಲ ರೀತಿಯ ಕಸರತ್ತು ನಡೆಸುತ್ತಿದೆ.

” ಮದ್ದೂರಮ್ಮ ಜಾತ್ರೆಗೆ ಬರುವ ರಾಸುಗಳಿಗೆ, ರೈತರಿಗೆ ಕುಡಿಯುವ ನೀರಿನವ್ಯವಸ್ಥೆಯನ್ನು ಟ್ಯಾಂಕರ್ಮೂಲಕ ಕಲ್ಪಿಸಲಾಗಿದೆ. ಪಶು ಕ್ಲಿನಿಕ್‌ಅನ್ನು ತೆರೆಯಲಾಗಿದೆ. ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಯಾವುದೇ ರೀತಿ ಅಹಿತಕರಘಟನೆಗಳು ನಡೆಯದ ಹಾಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.”

-ಪರುಶುರಾಮ ಸತ್ತಿಗೇರಿ,  ತಹಸಿಲ್ದಾರ್, ಮದ್ದೂರು

” ದನಗಳ ಜಾತ್ರೆಗೆ ಯಾವುದೇ ರೀತಿಯ ತೊಂದರೆ ಇಲ್ಲ.  ಕುಡಿಯುವ ನೀರು ಪೂರೈಕೆಮಾಡುತ್ತಿದ್ದಾರೆ. ಪಶು ಮೊಬೈಲ್ ಕ್ಲಿನಿಕ್ ತೆರೆದು ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆಪ್ರಮುಖವಾಗಿ ದನಗಳನ್ನು ಕಟ್ಟಲು ಸೂಕ್ತವಾದ ಸ್ಥಳವಿಲ್ಲ. ಪಟ್ಟಣದ ಪೇಟೆಬೀದಿಯ ಪಕ್ಕದ ಫುಟ್‌ಪಾತ್‌ನಲ್ಲಿ ಜಾನುವಾರುಗಳನ್ನು ಕಟ್ಟಬೇಕು. ಇದರಿಂದ ನಮಗೂ ತೊಂದರೆ,  ವಾಹನ ಸವಾರರಿಗೂ ತೊಂದರೆಯಾಗಲಿದೆ. ಈ ಬಗ್ಗೆ ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಂಡು ಮುಂದಿನ ಜಾತ್ರೆಗೆ ಸೂಕ್ತವಾದ ಸ್ಥಳಾವಕಾಶ ಕಲ್ಪಿಸಬೇಕು.

” ಮದ್ದೂರು ಇತಿಹಾಸವನ್ನು ಪಸರಿಸುವ ಹಾಗೂ ಉಗ್ರ ನರಸಿಂಹ ಬ್ರಹ್ಮ ರಥೋತ್ಸವ ಮತ್ತು ಮದ್ದೂರಮ್ಮ ವಾರ್ಷಿಕ ಜಾತ್ರೆ ಅಂಗವಾಗಿಮದ್ದೂರಮ್ಮ ಉತ್ಸವ ಹಮ್ಮಿಕೊಳ್ಳಲಾಗಿದೆ. ಒಂದುವಾರ ನಡೆಯುವಕಾರ್ಯಕ್ರಮದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮೆಹೆಂದಿ ಸ್ಪರ್ಧೆ, ಸಂಗೀತ ರಸ ಸಂಜೆ,  ಯುವಕರಿಗೆ ಕಬಡ್ಡಿ, ವಾಲಿಬಾಲ್, ಮ್ಯಾರಥಾನ್ ನಡಿಗೆ ಏರ್ಪಡಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಮದ್ದೂರಮ್ಮ ಉತ್ಸವ ಯಶಸ್ವಿಗೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು.”

-ಕೆ.ಎಂ.ಉದಯ್, ಶಾಸಕರು, ಮದ್ದೂರು ಕ್ಷೇತ್ರ

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

6 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

6 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

12 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

12 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

12 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

12 hours ago