ಕೋಟೆ ತಾಲ್ಲೂಕಿನ ಮುಸ್ಲಿಂ ಸಮುದಾಯದ ಪ್ರಥಮ ವೈದ್ಯೆ ಎಂಬ ಹೆಗ್ಗಳಿಕೆ ಹೊಂದಿದ ಜಹಾನ
ಮಂಜು ಕೋಟೆ
ಎಚ್.ಡಿ.ಕೋಟೆ: ತಾಲ್ಲೂಕಿನ ಮುಸ್ಲಿಂ ಸಮುದಾಯದ ಯುವತಿ ಒಬ್ಬರು ಪ್ರಪ್ರಥಮವಾಗಿ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿ ವೈದ್ಯರಾಗಿ ದಾಖಲೆ ನಿರ್ಮಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ ಕೋಟೆ ಮತ್ತು ಜೆಜೆ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಜಮೀರ್ ಅಹಮದ್ ಮತ್ತು ಜಾಸ್ಮಿನ್ ದಂಪತಿಯ ಮೊದಲನೇ ಪುತ್ರಿ ಜಹಾನ ಫಿರ್ದೋಸ್ ವೈದ್ಯರಾಗಿ ಗಮನ ಸೆಳೆದಿದ್ದಾರೆ.
ಪಟ್ಟಣದ ಸೇಂಟ್ ಮೇರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ, ನಂತರ ಆದಿಚುಂಚನಗಿರಿ ಕಾಲೇಜಿನಲ್ಲಿ ಪಿಯುಸಿ ಓದಿ, ಸರ್ಕಾರದ ಉಚಿತ ಪ್ರವೇಶದಲ್ಲಿ ಬೆಳ್ಳೂರ್ ಕ್ರಾಸ್ ಆದಿಚುಂಚನಗಿರಿ ವಿ.ವಿಯಲ್ಲಿ ಎಂಬಿಬಿಎಸ್ ಅನ್ನು ಐದು ವರ್ಷಗಳ ಕಾಲ ವ್ಯಾಸಂಗ ಮಾಡಿ ಅಧಿಕೃತವಾಗಿ ವೈದ್ಯರಾದ ಪ್ರವಾಣ ಪತ್ರ ಪಡೆದುಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬದವರು ತಮ್ಮ ಮಕ್ಕಳನ್ನು ಎಂಬಿಬಿಎಸ್ ಮತ್ತು ಇಂಜಿನಿಯರಿಂಗ್ ಓದಿಸುವುದು ಕಷ್ಟವಿದೆ. ಅದರಲ್ಲೂ ಮುಸ್ಲಿಂ ಸಮುದಾಯದವರು ಹೆಣ್ಣು ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸಿರುವುದು ವಿರಳವಾಗಿದೆ.
ತಾಲ್ಲೂಕಿನ ಹೊನ್ನಮ್ಮನಕಟ್ಟೆ ಗ್ರಾಮದಲ್ಲಿ ಬಡ ಕುಟುಂಬದ ರೈತಾಪಿ ವರ್ಗದಿಂದ ಬಂದ ಜಮೀರ್ ಅಹಮದ್ ದಂಪತಿ ತಮ್ಮ ಮೂವರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂದು ೩೦ ವರ್ಷಗಳ ಹಿಂದೆ ಕೋಟೆ ಪಟ್ಟಣಕ್ಕೆ ಬಂದು ಡ್ರೈವಿಂಗ್ ಶಾಲೆ ತೆರೆದು ಕಷ್ಟಪಟ್ಟು ಮೊದಲನೇ ಪುತ್ರಿ ಜಹಾನ ಫಿರ್ದೋಸ್‌ರನ್ನು ವೈದ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಪುತ್ರಿ ಜಸ್ನ ಫಿರ್ದೋಸ್ ಬಿಎಸ್ಸಿ ಅಗ್ರಿ ಮುಗಿಸಿ ಯುಪಿಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪುತ್ರ ಜಹಾಂಗೀರ್ ಅಹಮದ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ವಾಡಿದ್ದಾರೆ. ಎಲ್ಲರಿಗೂ ಸರ್ಕಾರದ ಉಚಿತ ಪ್ರವೇಶದ ಮೂಲಕವೇ ವ್ಯಾಸಂಗದ ಅವಕಾಶ ದೊರೆತಿರುವುದು ವಿಶೇಷವಾಗಿದೆ.
ಮುಸ್ಲಿಂ ಸಮುದಾಯದ ಜಹಾನ ಫಿರ್ದೋಸ್ ಎಂಬಿಬಿಎಸ್ ಮುಗಿಸಿ ವೈದ್ಯರಾಗಿರುವುದು ಇತರರಿಗೂ ಸ್ಫೂರ್ತಿ ಮೂಡಿಸಲಿದೆ. ಇಂಥವರನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಬಹಳ ಕಡಿಮೆ. ನಮ್ಮ ತಂದೆ ತಾಯಿ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ನಮಗೆ ಎಂಥ ಕಷ್ಟದಲ್ಲೂ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಛಲದಿಂದ ಕಷ್ಟಪಟ್ಟು ಓದಿ ಗುರಿ ಇಟ್ಟುಕೊಂಡು ವೈದ್ಯೆಯಾಗಿದ್ದೇನೆ. ಮುಂದಿನ ದಿನದಲ್ಲಿ ಎಂಡಿ ವಾಡಬೇಕೆಂಬ ಗುರಿ ಹೊಂದಿದ್ದು, ವೈದ್ಯಕೀಯ ವೃತ್ತಿಯನ್ನು ನಮ್ಮ ತಾಲ್ಲೂಕಿನಲ್ಲಿ ಮಾಡುವ ಉದ್ದೇಶ ಹೊಂದಿದ್ದೇನೆ. -ಜಹಾನ ಫಿರ್ದೋಸ್, ವೈದ್ಯರು
ಶಕ್ತಿಮೀರಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇವೆ. ಅವರಿಗೆ ಅತ್ಯುತ್ತಮವಾದ ಸ್ಥಾನಮಾನಗಳು, ಹುದ್ದೆಗಳು ಲಭಿಸುತ್ತಿರುವುದು ಸಂತಸ ತಂದಿದೆ. ನಮ್ಮ ಸಮುದಾಯದಲ್ಲಿ ವೈದ್ಯ ಹುದ್ದೆಯನ್ನು ನನ್ನ ಮಗಳು ಅಲಂಕರಿಸಿರುವುದು ಕಂಡು ಸಂತಸವಾಗಿದೆ. ಸಮುದಾಯದವರಿಗೂ ಇದು ಸ್ಫೂರ್ತಿ ಉಂಟುಮಾಡಲಿದೆ.
-ಜೆ.ಜೆ.ಜಮೀರ್ ಅಹಮದ್, ಜಹಾನ ತಂದೆ
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…