ಮೈಸೂರು

ಮೈಸೂರು | ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಟ್ರಾಮಾ ಸೌಲಭ್ಯ : ಶಾಸಕ ದರ್ಶನ್‌ ಮನವಿಗೆ ಸ್ಪಂದಿಸಿದ ಸರ್ಕಾರ

ನಂಜನಗೂಡು : ಶಾಸಕ ದರ್ಶನ್ ದ್ರುವನಾರಾಯಣರ ಪ್ರಯತ್ನದಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಟ್ರಾಮಾ ಸೌಲಭ್ಯ ಸಿಕ್ಕಿದೆ.

ಎರಡು ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಅಫಘಾಥದ ಬೀಡಾಗಿರುವ ದಕ್ಷೀಣ ಕಾಶಿ ನಂಜನಗೂಡಿಗೆ ಒಂದು ಅಫಘಾತ ತುರ್ತು ಚಿಕೀತ್ಸಾ ಘಟಕ ಟ್ರಾಮಾ ಸೆಂಟರ್ ತರುವ ಶಾಸಕ ದರ್ಶನ್ ದ್ರುವನಾರಾಯಣರ ಸತತ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಿಭಿಸಿದೆ.

ಬೆಂಗಳೂರು ನೀಲಗಿರಿ ರಸ್ತೆ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗಳೆಂಬ ಎರಡು ಹೆದ್ದಾರಿಗಳು ಹಾದೂ ಹೊಗಿರುವ ನಂಜನಗೂಡಲ್ಲಿ ಇತ್ತೀಚಿಗೆ ರಸ್ತೆ ಅಫಘಾಥಗಳು ಹೆಚ್ಚಾಗಿದ್ದವು. ಪ್ರತಿನಿತ್ಯ ರಸ್ತೆ ಅಫಘಾತಗಳು ಕೇಳಿ ಬರುತ್ತಿದ್ದನ್ನು ತಿಳಿದ ಶಾಸಕ ದರ್ಶನ್ ದ್ರುವನಾರಾಯಣ ಅಫಘಾಥ ಕಡಿಮೆ ಮಾಡುವದರ ಜೊತೆ ಅಫಘಾತದ ಗಾಯಾಳುಗಳಿಗೆ ತುರ್ತು ಚಿಕೀತ್ಸೆ ದೊರಕಬೇಕು ಎಂದು ಆಲೋಚಿಸಿದ್ದರು. ಗಾಯಾಳುಗಳಿಗೆ ಸದ್ಯ ನಂಜನಗೂಡಲ್ಲಿ ತುರ್ತು ಚಿಕೀತ್ಸೆ ನೀಡಲು ಯಾವುದೇ ಸೌಲಭ್ಯವಿಲ್ಲದಿರುವದರಿಂದ ಅವರನ್ನು ಜಿಲ್ಲಾ ಕೇಂದ್ರ ಮೈಸೂರಿಗೆ ಕರೆದೊಯ್ಯಬೇಕಿತ್ತು. ಜಿಲ್ಲಾ ಕೇಂದ್ರಕ್ಕೆ ಹೋಗುವ ಮೊದಲೇ ಚಿಕಿತ್ಸೆ ದೊರೆಯದೇ ಅನೇಕರು ಮೃತ ಪಟ್ಟ ಘಟನೆಗಳನ್ನು ಗಮನಿಸಿದ ಶಾಸಕರು ಅಫಘಾಥದ ಬೀಡಾಗಿರುವ ತಮ್ಮ ಕ್ಷೇತ್ರದಲ್ಲೇ ಟ್ರಾಮಾ ಸೆಂಟರ್ ಘಟಕವನ್ನು ಆರಂಭಿಸಿದರೆ ಅನೇಕರ ಪ್ರಾಣ ಉಳಿಯಬಹುದು ಎಂದು ಆಲೋಚಿಸಿ ಆರೋಗ್ಯ ಇಲಾಖೆ ಹಾಗೂ ಸರ್ಕಾರದೊಂದಿಗೆ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು ಅವರ ಸತತ ಪರಿಶ್ರಮಕ್ಕೆ ಈಗ ಫಲಕೊಡುವ ಭರವಸೆ ವಿಧಾನ ಸಭೆಯಲ್ಲಿ ದರ್ಶನರಿಗೆ ಸಿಕ್ಕಿದೆ.

ತಮ್ಮ ಕ್ಷೇತ್ರದಲ್ಲಿ ಕಳೆದ ವರ್ಷ ೩೨೬ ಕ್ಕೂ ಹೆಚ್ಚು ರಸ್ತೆ ಅಫಘಾಥಗಳು ನಡೆದಿದ್ದು ೧೨೦ಕ್ಕೂ ಹೆಚ್ಚು ಸಾವುಗಳಾಗಿದ್ದನ್ನು ಚುಕ್ಕೆ ಪ್ರಶ್ನೆಯ ಮೂಲಕ ವಿಧಾನ ಸಭೆಯ ಮುಂದಿಟ್ಟ ಶಾಸಕರಿಗೆ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡುರಾವ ನಿಮ್ಮ ಮಾನವೀಯ ಕಳಕಳಿಯನ್ನು ಮನಗಂಡ ಸರ್ಕಾರ ನಂಜನಗೂಡೂ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೂ ಶಿಘ್ರದಲ್ಲೇ ಟ್ರಾಮಾ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ ಹಾಗೂ ಹೆಚ್ಚುವರಿಯಾಗಿ ತಾಲೂಕು ಆಸ್ಪತ್ರೆಗೆ ಟ್ರಾಮಾ ಸೌಲಭ್ಯಗಳ ಜೊತೆ ಅಂಬುಲೆನ್ಸ್ ಸಹ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ನಂಜನಗೂಡು ಶಾಸಕ ದರ್ಶನ ದ್ರುವನಾರಾಯಣರಿಂದಾಗಿ ಈಗ ಜಿಲ್ಲೆಯ ಎಲ್ಲ ತಾಲೂಕೂಗಳಿಗೂ ಟ್ರಾಮಾ ಸೌಲಭ್ಯ ದೊರೆಯು ದೊರಕಿದಂತಾಗಿದೆ

ಆಂದೋಲನ ಡೆಸ್ಕ್

Recent Posts

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ…

3 hours ago

ನಂಜನಗೂಡು: ಬೋನಿಗೆ ಬಿದ್ದ ಚಿರತೆ

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು…

3 hours ago

ವಂದೇ ಮಾತರಂ ಅರ್ಧಕ್ಕೆ ಕಡಿತ: ಆದೇಶ ಮರುಪರಿಶೀಲನೆಗೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ…

3 hours ago

ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ದಾಳಿ

ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…

4 hours ago

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

7 hours ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

12 hours ago