ಮೈಸೂರು : ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್ ರಾಜಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಯೊಂದು ವೈರಲ್ ಆಗಿರುವಂತಹ ಘಟನೆ ನಡೆದಿದೆ. ವೈಯಕ್ತಿಕ ಲಾಭಕ್ಕಾಗಿ ಮಗಳೊಂದಿಗಿನ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಾಗಿ ತಂದೆ ದೂರು ನೀಡಿದ್ದು, ಕಾಂಗ್ರೆಸ್ ಮುಖಂಡ ವಿರುದ್ಧ ನಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ಅ. 16ರಂದು ರಾತ್ರಿ 9:20 ಗಂಟೆಗೆ ಸೋಮೇಗೌಡ ಬಿನ್ ಲೇಟ್ ಮಲೆಗೌಡ ಎಂಬುವರ ದೂರಿನ ಸಾರಾಂಶವೆನೆಂದರೆ, ನಾನು ವ್ಯವಸಾಯ ಕಸುಬನ್ನು ಮಾಡಿಕೊಂಡಿರುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಮೂರು ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಮರಹಳ್ಳಿ ಗ್ರಾಮದ ವ್ಯಕ್ತಿ ಜೊತೆಗೆ ಮಗಳ ಮದುವೆ ಮಾಡಿರುತ್ತೇನೆ. ನನ್ನ ಮಗಳು ಮತ್ತು ಅಳಿಯ ಅನ್ಯೋನ್ಯವಾಗಿದ್ದರು.
ದೀಪಾವಳಿ ಹಬ್ಬದ ಹಿನ್ನೆಲೆ ನನ್ನ ಮಗಳು ನಮ್ಮ ಮನೆಗೆ ಬಂದಿದ್ದಳು. ಹೀಗಿರುವಾಗ ಅ.16ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಸಂಬಂಧಿಕರು ನಮ್ಮ ಜಮೀನಿನ ಬಳಿ ಸಿಕ್ಕು, ನಿಮ್ಮ ಮಗಳು ಮತ್ತು ನಿಮ್ಮೂರಿನ ಲೋಹಿತ್ ಅಲಿಯಾಸ್ ರಾಜಿ ಇಬ್ಬರ ಅಶ್ಲೀಲ ವಿಡಿಯೋ ಮಲ್ಲಿಕಾರ್ಜುನ ಎಂಬುವವರ ವಾಟ್ಸಾಪ್ ನಂಬರ್‌ಗೆ ಬಂದಿದ್ದು, ಆತನು ನನ್ನ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದು, ಏನೆಂದು ವಿಡಿಯೋ ನೋಡಲಾಗಿ ಅದು ನಿಮ್ಮ ಮಗಳ ಮತ್ತು ಲೋಹಿತ್ ಅಶ್ಲೀಲ ವಿಡಿಯೋ ಆಗಿತ್ತು. ಬಳಿಕ ಡಿಲೀಟ್ ಮಾಡಿರುವುದಾಗಿ ನನಗೆ ಹೇಳಿದ್ದಾರೆ.
ನಮಗೂ ನಮ್ಮೂರಿನ ಲೋಹಿತ್ ಎಂಬುವನಿಗೂ ಜಮೀನು ದಾರಿ ವಿಚಾರವಾಗಿ ಆಗಾಗ ಗಲಾಟೆಯಾಗಿದ್ದು, ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಒಂದು ಗತಿ ಕಾಣಿಸುತ್ತೇನೆ ನೋಡು, ಒಂದಲ್ಲ ಒಂದು ದಿನ ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಪದೇ ಪದೇ ಹೇಳುತ್ತಿದ್ದನು. ಈ ದ್ವೇಷದಿಂದ ನನ್ನ ಮಗಳ ಮತ್ತು ನಮ್ಮ ಕುಟುಂಬದ ಮಾನಮರ್ಯಾದೆಯನ್ನು ಬೀದಿ ಪಾಲು ಮಾಡುವ ಉದ್ದೇಶದಿಂದ ನನ್ನ ಮಗಳೊಂದಿಗೆ ತೋಡಗಿದ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಎಲ್ಲರಿಗೂ ವಾಟ್ಸಾಪ್‌ನಲ್ಲಿ ಕಳುಹಿಸಿ, ನನ್ನ ಮಗಳ ಮತ್ತು ನಮ್ಮ ಸಂಸಾರವನ್ನು ಹಾಳು ಮಾಡಿರುತ್ತಾನೆ. ಆದ್ದರಿಂದ ಲೋಹಿತ್ ಅಲಿಯಾಸ್ ರಾಜಿ ಎಂಬುವನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…