ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ. ಶಾಸಕ ಜಿ.ಟಿ.ದೇವೇಗೌಡರ ಹೆಸರನ್ನು ನನ್ನ ಬಳಿ ಹೇಳಲೇಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಮೈಸೂರು ನಗರದಲ್ಲಿ ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯದಲ್ಲಿ ಮತ್ತು ದೇಶದಲ್ಲಿ ಎಚ್.ಡಿ. ದೇವೇಗೌಡರು ರಾಜಕಾರಣ ಮಾಡಿಕೊಂಡು ಒಂದು ಗೌರವ ಉಳಿಸಿಕೊಂಡು ಬಂದಿದ್ದಾರೆ. ೬೦ ವರ್ಷಗಳ ರಾಜಕೀಯದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಕಡಿಮೆ. ಅವರ ರಾಜಕೀಯ ಬಳುವಳಿ ನನಗೂ ಕೊಟ್ಟಿದ್ದಾರೆ. ನಾವು ಅಧಿಕಾರಕ್ಕಿಂತ ವಿರೋಧ ಪಕ್ಷದಲ್ಲಿ ಇದ್ದಿದ್ದು ಹೆಚ್ಚು. ೨೦೦೭ರ ನಂತರ ಜೆಡಿಎಸ್ ನಡೆಸುವ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು. ಪಕ್ಷಕ್ಕೆ ಆರ್ಥಿಕವಾಗಿ ಶಕ್ತಿ ಇಲ್ಲದಿದ್ದರೂ. ಇನ್ನು ರಾಜ್ಯದಲ್ಲಿ ಅಸ್ತಿತ್ವ ಇಟ್ಟುಕೊಂಡಿದ್ದೇವೆ. ಇದು ಕಾರ್ಯಕರ್ತರ ಪಕ್ಷ ಮತ್ತು ಅವರೇ ಒಂದು ಶಕ್ತಿಯಾಗಿದ್ದಾರೆ ಎಂದರು. ನಿಜವಾದ ಅಗ್ನಿ ಪರೀಕ್ಷೆ ಇರುವುದು ಮುಂದಿನ ೨೦೨೮ಕ್ಕೆ .ಮುಂದಿನ ದಿನಗಳಲ್ಲಿ ಹಣ ಬಲ ತೋಳ್ಬಲದ ವಿರುದ್ಧ ಹೋರಾಟ ಮಾಡಬೇಕಿದೆ. ಪಕ್ಷ ಉಳಿಸುವುದಕ್ಕೆ ನಿಜವಾದ ಜೆನ್ ಜಿ ತಲೆಮಾರಿನ ಕಾರ್ಯಕರ್ತರು ಇದ್ದಾರೆ ಎಂದರು.
ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟ್ ಮಾಡಿರುವವರ ಸಂಪೂರ್ಣ ಮಾಹಿತಿಯಿದೆ. ಈ ಫಲಿತಾಂಶ ನನಗೆ ಮೊದಲೇ ಗೊತ್ತು. ಅದರಿಂದ ನಾನು ವಿಚಲಿತನಾಗಿಲ್ಲ. ದೃತಿಗೆಡಲ್ಲ. ಕ್ಷೇತ್ರದಲ್ಲಿ ಅಭಿವೃದಿ ಆಗುತ್ತಿಲ್ಲ ಅಂತ. ಮುಂದೆ ಏನು ಮಾಡಬೇಕು ಅಂತ ಕೆಲವರು ತೀರ್ಮಾನ ಮಾಡಿಕೊಂಡಿದ್ದಾರೆ. ನಾಲ್ಕು ಜನರು ಕ್ರಾಸ್ ವೋಟ್ ಹಾಕಿದ್ದಾರೆ. ಯಾರು ಯಾರು ಅಂತಾನೂ ಗೊತ್ತು. ಪಾರ್ಟಿ ಬಿಡುವ ಬಗ್ಗೆಯೂ ಅವರೆಲ್ಲರೂ ಚರ್ಚೆ ಮಾಡಿದ್ದಾರೆ. ಅದು ಕೂಡ ನನಗೆ ಗೊತ್ತು. ಹೋಗುವವರು ಹೋಗಬಹುದು. ಹೊಸ ಯುವಕರು ಪಾರ್ಟಿಗೆ ಬರುತ್ತಾರೆ ಎಂದರು.
ಶಾಸಕ ಜಿ.ಟಿ. ದೇವೇಗೌಡರ ಹೆಸರು ನನ್ನ ಬಳಿ ಹೇಳಲೇ ಬೇಡಿ. ಅವರ ಬಗ್ಗೆ ನಾನು ಮಾತನಾಡಲ್ಲ.ಎಚ್.ಡಿ. ರೇವಣ್ಣ ಜೊತೆ ಚರ್ಚೆ ಮಾಡಿದ್ದಾರೆ. ಆದರೆ, ಪಕ್ಷದಲ್ಲಿ ಅಂತಿಮ ತೀರ್ಮಾನ ಮಾಡುವುದು ನಾನೇ. ಕಾರ್ಯಕರ್ತರ ಅಭಿಪ್ರಾಯವೇ ನನಗೆ ಮುಖ್ಯ.ಮೂರು ಬಾರಿ ನನಗೆ ಅನುಭವವಾಗಿದೆ. ೨೦೦೬ ೨೦೧೩ ೨೦೧೮ ಎಲ್ಲಾ ಕಡೆ ಏನೇನು ಮಾಡಿದ್ದಾರೆ ನೋಡಿದ್ದೇನೆ. ಯಾರು ಎಷ್ಟೇ ಒತ್ತಡ ಹಾಕಿದರೂ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ದೇವೇಗೌಡರ ವಿರುದ್ಧ ಪರೋಕ್ಷ ಕಿಡಿಕಾರಿದರು.ಶಾಸಕ ಜಿ.ಟಿ. ದೇವೇಗೌಡ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ತೀವ್ರ ಅಸಹನೆ ವ್ಯಕ್ತಪಡಿಸಿದ ಕೇಂದ್ರ ಸಚಿವರು ನನ್ನ ಮುಂದೆ ಅವರ ಹೆಸರು ಎತ್ತಬೇಡಿ ಎಂದು ಎಂದು ನೇರವಾಗಿಯೇ ಹೇಳಿದರು. ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ನಾನು ಚಕಾರ ಎತ್ತಿಲ್ಲ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೂಡ ಅವರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದರು.ಈ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೆ ಗೊತ್ತು. ಮೂರು ಬಾರಿ ನನಗೆ ಇವರಿಂದ ಕಹಿ ಅನುಭವ ಆಗಿದೆ ಎಂದರು.
ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…
ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…
ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…