ಮೈಸೂರು: ಪ್ರಾಚೀನ ಕಾಲದ ನಾಣ್ಯ, ನೋಟುಗಳು ಇತಿಹಾಸ ತಿಳಿಸುವ ಸಾಧನವಾಗಿವೆ. ನಾಣ್ಯಗಳಿಂದ ಅಂದಿನ ಕಾಲದ ಆರ್ಥಿಕ, ಸಾಮಾಜಿಕ ಹಾಗೂ ಸೈನಿಕ ವ್ಯವಸ್ಥೆಗಳ ಬಗ್ಗೆ ತಿಳಿಯಬಹುದು ಎಂದು ಸಂಪನ್ಮೂಲ ವ್ಯಕ್ತಿ ಗೌತಮ್ ಜಂತಕಲ್ ಹೇಳಿದರು.
ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ‘ಕರ್ನಾಟಕ ನಾಣ್ಯ ಪರಂಪರೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಾತತ್ವ ಉತ್ಖನನದ ವೇಳೆ ದೊರೆತ ನಾಣ್ಯಗಳು, ಅಂದಿನ ಸಾಮ್ರಾಜ್ಯದ ಸಾಮ್ರಾಟರ ಕಾಲಾನುಕ್ರಮಗಳ ಬಗ್ಗೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಉತ್ಖನನದ ವೇಳೆ ಸಿಗುವ ಮಡಿಕೆ, ಕಲ್ಲಿನ ಚೂರುಗಳಲ್ಲಿ ಕಾಲಮಾನ ಇರಲ್ಲ. ಆದರೆ, ನಾಣ್ಯಗಳಲ್ಲಿ ರಾಜನ ಚಿತ್ರ, ದೇವ-ದೇವಿಯರ ಚಿತ್ರ ಸೇರಿದಂತೆ ಅನೇಕ ಮಾಹಿತಿ ಇರುತ್ತದೆ. ಇದರಿಂದ ಆಡಳಿತಯುಗ, ಧಾರ್ಮಿಕ ನಂಬಿಕೆಗಳು ಹೀಗೆ ಎಲ್ಲವೂ ತಿಳಿಯಲಿದೆ. ಉತ್ಖನನದಲ್ಲಿ ದೊರಕುವ ನಾಣ್ಯದ ಮಹತ್ವ ಅಪಾರ ಎಂದು ವಿವರಿಸಿದರು.
ಇತಿಹಾಸದ ಆರಂಭ ಕಾಲದ ನಾಣ್ಯಗಳಿಂದ ಬ್ರಿಟಿಸ್ ಈಸ್ಟ್ ಇಂಡಿಯಾ ಕಂಪನಿಯವರೆಗೂ ನಾಣ್ಯಗಳು ನಮಗೆ ಉತ್ಖನನದ ವೇಳೆ ದೊರಕಿವೆ. ಇವು ಇತಿಹಾಸ ರಚಿಸುವಲ್ಲಿ ವಿದ್ವಾಂಸರುಗಳಿಗೆ ಪೂರಕವಾಗಿವೆ. ಮೌರ್ಯರು, ಶಾತವಾಹನರು, ಕದಂಬರು, ರಾಷ್ಟ್ರಕೂಟರು ಹಾಗೂ ಗಂಗರ ಕಾಲದ ನಾಣ್ಯಗಳು ಅಂದಿನ ಕಾಲದ ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕ ಹಾಗೂ ತಾಂತ್ರಿಕ ಇತಿಹಾಸದ ಬಗ್ಗೆ ತಿಳಿಸುತ್ತದೆ. ದೇಶ, ವಿದೇಶಗಳ ಸ್ವಾತಂತ್ರ್ಯಪೂರ್ವ ಮತ್ತು ನಂತರದ ನಾಣ್ಯಗಳು ಹಾಗೂ ನೋಟುಗಳನ್ನು ಸಂಗ್ರಹಿಸಲಾಗಿದೆ. ಇವುಗಳ ವೀಕ್ಷಣೆಯಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಿದೆ ಎಂದು ಅಭಿಪ್ರಾಯಪಟ್ಟರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಮಾತನಾಡಿ, ನಮ್ಮ ಇಲಾಖೆಯಿಂದ ಈವರೆಗೂ ಸುಮಾರು 9 ಸಾವಿರು ಶಾಸನಗಳನ್ನು ಪತ್ತೆ ಹಚ್ಚಿ ಸಂರಕ್ಷಿಸುವ ಕೆಲಸ ನಡೆದಿದೆ. ಇದಲ್ಲದೆ ಪುರಾತತ್ವ ವಿದ್ಯಾರ್ಥಿ, ಸಂಶೋಧಕರ ನೆರವಿನಿಂದ ಗ್ರಾಮವಾರು ಸ್ಮಾರಕ, ವೀರಗಲ್ಲು, ಮಾಸ್ತಿಗಲ್ಲುಗಳ ಸರ್ವೇಕಾರ್ಯ ಮಾಡಲಾಗಿದೆ. ಪುರಾತತ್ವ ಎಲ್ಲರಿಗೂ ತಿಳಿಯಬೇಕೆಂಬುದು ನಮ್ಮ ಇಚ್ಛೆ ಎಂದು ಹೇಳಿದರು.
ಈವರೆಗೂ 510ಕ್ಕೂ ಹೆಚ್ಚು ಕೇಂದ್ರ ಸಂರಕ್ಷಿತ ಪ್ರದೇಶ ಹಾಗೂ 810 ರಾಜ್ಯ ಸಂರಕ್ಷಿತ ಪ್ರದೇಶವೆಂದು ಗುರುತಿಸಲಾಗಿದೆ. ಇನ್ನೂ ಎಷ್ಟೋ ಸ್ಮಾರಕಗಳು ಮಣ್ಣಲ್ಲಿ ಉದುಗಿಹೋಗಿವೆ. ನಿಮ್ಮ ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಕಾಣಸಿಗುವ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಸ್ಮಾರಕಗಳನ್ನು ಗುರುತಿಸಿ ಹತ್ತಿರದ ತಾಲೂಕು ಅಧಿಕಾರಿ ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿ. ಪರಂಪರೆ ಉಳಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ಕೆ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಸಿ.ಎನ್. ಮಂಜುಳಾ, ಪುಟ್ಟಸ್ವಾಮಿ, ರಾಕೇಶ್ ಸೇರಿದಂತೆ ಪುರಾತತ್ವ ವಿದ್ಯಾರ್ಥಿಗಳು ಹಾಜರಿದ್ದರು.
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…