ಮೈಸೂರು

ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲು ಪ್ರಯತ್ನ : ಶಾಸಕ ಜಿ.ಟಿ.ದೇವೆಗೌಡ

ಮೈಸೂರು : ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಂತಹಂತವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರಪಾಲಿಕೆಯಷ್ಟೇ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುವ ಜತೆಗೆ,ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಹೂಟಗಳ್ಳಿ ಎಚ್.ಕೆ.ಫಂಕ್ಷನ್‌ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹೂಟಗಳ್ಳಿ ನಗರಸಭೆ ವತಿಯಿಂದ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಬೀದಿನಾಯಿಗಳ ಹಾವಳಿ, ಒಳಚರಂಡಿ ನಿರ್ವಹಣೆ ಮತ್ತು ಬೀದಿ ದೀಪಗಳ ನಿರ್ವಹಣೆ ಕುರಿತಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲೇ ೧೮ ಗ್ರಾಮ ಪಂಚಾಯಿತಿ,ನಗರಪಾಲಿಕೆ ಐದು ವಾರ್ಡುಗಳು, ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ನಾಲ್ಕು ದಿಕ್ಕುಗಳನ್ನು ಸಂಪರ್ಕ ಕಲ್ಪಿಸುವ ಪ್ರದೇಶವಾಗಿರುವ ಕಾರಣ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದರು. ಮೈಸೂರು ನಗರದ ರಿಂಗ್ ರಸ್ತೆಯ ಅಕ್ಕಪಕ್ಕದ ಗ್ರಾಪಂಗಳು, ಬಡಾವಣೆಗಳು, ವಿಜಯನಗರ ಮೂರನೇ ಹಂತ,ನಾಲ್ಕನೇ ಹಂತವನ್ನು ಮೈಸೂರು ನಗರಪಾಲಿಕೆಗೆ ಸೇರಿಸಲು ಯುದ್ಧ ಮಾಡಿದಂತೆ ಹೋರಾಟ ಮಾಡಿದ್ದೆ. ನಗರಪಾಲಿಕೆಗೆ ಸೇರ್ಪಡೆಗೊಳಿಸಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲು ಪ್ರಸ್ತಾವನೆ ಇಟ್ಟಾಗ ಬಿಜೆಪಿ,ಜಾ.ದಳ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಐದು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರೆ ಮಾತ್ರ ಸೇರ್ಪಡೆ ಮಾಡಿಸಿಕೊಳ್ಳುತ್ತೇವೆಂದು ನಿರ್ಣಯ ಕೈಗೊಂಡರು.

ಇದನ್ನು ಓದಿ:MLA ನಾಮ ನಿರ್ದೇಶನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ರಾಜ್ಯಪಾಲರು

ಇದರಿಂದಾಗಿ ಅಪಮಾನವಾಗಿ ವಾಪಸ್ ಬಂದು ಬಿಟ್ಟೆ. ನಂತರ, ಅಂದಿನ ಸಂಸದ ಪ್ರತಾಪ್ ಸಿಂಹ ಅವರನ್ನು ಕೂರಿಸಿಕೊಂಡು ಸಮಾಲೋಚನೆಮಾಡಿದಾಗ ಗ್ರಾಪಂಗಳನ್ನು ಪಾಲಿಕೆ ಸೇರಿಸಿಕೊಳ್ಳಲ್ಲ. ಬಡಾವಣೆಗಳಲ್ಲಿ ಸ್ವಚ್ಛಮಾಡಲ್ಲ. ಖಾತೆ ಕಂದಾಯ ಮಾಡಲ್ಲ. ಮುಡಾದ ಬಡಾವಣೆಗಳಲ್ಲೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿ ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ರಚಿಸಲಾಯಿತು ಎಂದು ಹೇಳಿದರು. ಮುಡಾದಿಂದ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೊಡಲಾಗುತ್ತಿತ್ತು.ಆದರೆ,ಸರ್ಕಾರ ನಿಧಿ-೧, ನಿಧಿ-೨ ಎನ್ನುವಂತೆ ವಿಂಗಡಿಸಿದರು. ನಿಧಿ ಒಂದರಲ್ಲಿ ಹತ್ತಾರು ವರ್ಷಗಳ ಹಿಂದೆ ರಚನೆಯಾಗಿರುವ ಬಡಾವಣೆಗಳಿಗೆ ನಿರ್ವಹಣೆ ಮಾಡಬಹುದು ಹೊರತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಸುವಂತಿಲ್ಲ. ನಿಧಿ-೨ರಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದರಿಂದ ತುಂಬಾ ಸಮಸ್ಯೆಯಾಯಿತು. ಹೀಗಾಗಿಯೇ, ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಲು ಹಗಲು-ರಾತ್ರಿ ವಿಧಾನಸೌಧದಲ್ಲಿ ಅಲೆದಾಡಿ ಅನುಮೋದನೆ ಕೊಡಿಸಿದ್ದರಿಂದಾಗಿ ಇಂದು ಅನುಕೂಲವಾಯಿತು ಎಂದು ಹೇಳಿದರು.

ಖಾಸಗಿ ಬಡಾವಣೆಗಳನ್ನು ರಚನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ ಮಾಲೀಕರು ರಸ್ತೆ,ನೀರು,ಚರಂಡಿಯನ್ನೇ ಮಾಡದೆ ಹಾಗೆಯೇ ಬಿಟ್ಟು ಹೋದರು. ನಿವೇಶನಗಳನ್ನು ಖರೀದಿಸಿದವರು ಮನೆ ಕಟ್ಟಿಸಿಕೊಂಡು ವಾಸ ಮಾಡುತ್ತಿದ್ದರಿಂದ ಮೂಲ ಸೌಕರ್ಯ ಇಲ್ಲವೆಂದು ಬರಲು ಶುರು ಮಾಡಿದ್ದರಿಂದ ದೊಡ್ಡ ಸಮಸ್ಯೆಯಾಯಿತು. ಕಷ್ಟಪಟ್ಟು ಮನೆ ಕಟ್ಟಿದರೂ ನೆಮ್ಮದಿಯಾಗಿ ವಾಸಿಸಲು ಸಾಧ್ಯವಾಗದ ಸ್ಥಿತಿಯಾಯಿತು. ಹಾಗಾಗಿಯೇ, ಪಟ್ಟಣ ಪಂಚಾಯಿತಿ,ನಗರಸಭೆಮಾಡಿಸಿ ಈಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗಿದೆ ಎಂದು ಹೇಳಿದರು.

ಕೈಗಾರಿಕಾ ಪ್ರದೇಶಗಳಿಂದ ೨೫ರಿಂದ ೩೦ ಕೋಟಿ ರೂಪಾಯಿ ಬರುತ್ತಿದ್ದರು.ಈಗ ಕರ್ನಾಟಕ ಕೈಗಾರಿಕಾ ಪ್ರಾಧಿಕಾರ ರಚನೆ ಮಾಡಿದ ಮೇಲೆ ಬರುವ ತೆರಿಗೆ ನಿಂತು ಹೋಗಿದೆ. ಇದರಿಂದಾಗಿ ಅನೇಕ ಕಾಮಗಾರಿಗಳು ನಿಂತುಹೋಗಿವೆ. ಗ್ರಾಪಂಗಳು ಕಟ್ಟದೆ ಹೋಗಿರುವ ವಿದ್ಯುತ್ ಬಿಲ್‌ನ್ನು ಎಂಡಿಎದಿಂದ ಕಟ್ಟಿಸಿಕೊಡಲು ತೀರ್ಮಾನ ಮಾಡಿದ್ದೇನೆ ಎಂದು ಭರವಸೆ ನೀಡಿದರು.

ಇದನ್ನು ಓದಿ: ಭಾರತದ ಕ್ವಾಂಟಮ್‌ ಭವಿಷ್ಯದ ಕೇಂದ್ರವಾಗಲು ಬೆಂಗಳೂರಿಗೆ ಮಹತ್ವದ ಹೆಜ್ಜೆ

ಖಾಸಗಿ ಬಡಾವಣೆಗಳನ್ನು ಈಗ ಎಂಡಿಎಗೆ ವರ್ಗಾವಣೆ ಮಾಡಿ ಖಾತೆ ಮಾಡುವಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚುನಿವೇಶನಗಳನ್ನು ವರ್ಗಾವಣೆ ಮಾಡಿರುವುದರಿಂದ ಕಂದಾಯ ಕಟ್ಟಿಸಿಕೊಂಡು ಖಾತೆ ಮಾಡಲಾಗುತ್ತಿದೆ. ನಿವೇಶನ,ಮನೆ ಮಾಲೀಕರು ಯಾರಿಗೂ ಒಂದು ಪೈಸೆ ಕಟ್ಟದೆ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.೨೦೦೭ರಲ್ಲಿ ಜೆನರ್ಮ್ ಯೋಜನೆಯಡಿ ೬೦ ಎಂಎಲ್‌ಡಿ ನೀರನ್ನು ತರಲಾಯಿತು. ಕಬಿನಿ ಎರಡನೇ ಹಂತ,ಉಂಡುವಾಡಿ ಯೋಜನೆಯಿಂದ ದಿನದ ೨೪ಗಂಟೆಗಳ ಕಾಲ ನೀರು ಒದಗಿಸುವುದಕ್ಕೆ ಕೆಲಸ ಶುರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ಒದಗಿಸಲಾಗುವುದು. ಸರ್ಕಾರದಿಂದ ಅನುದಾನ ತಂದು ರಸ್ತೆ,ಚರಂಡಿ ಎಲ್ಲವನ್ನು ಒದಗಿಸುತ್ತೇನೆ ಎಂದರು.ರಿಂಗ್ ರಸ್ತೆಯ ಬದಿಯಲ್ಲಿ ಕಸ ಹಾಕಿದರೆ, ಕೋಳಿ ತ್ಯಾಜ್ಯಗಳನ್ನು ಎಸೆಯುವವರು ಕಂಡುಬಂದರೆ ಅಂತಹವರ ಮೇಲೆ ಮೊಕದ್ದಮೆ ಹಕುವ ಜತೆಗೆ, ದಂಡ ವಿಧಿಸಬೇಕು. ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಇದಾದ ಬಳಿಕ ವಿಜಯನಗರ ನಾಲ್ಕನೇಹಂತಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಟ್ಯಾಂಕ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನುಷ್, ನಗರಸಭೆ ಎಇಇಗಳಾದ ಮಧು, ಗಿರಿಜಾ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

19 mins ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

6 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

6 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

6 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

6 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

6 hours ago