ಆಂದೋಲನ ಸಂದರ್ಶನದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎ.ಪ್ರಸನ್ನ ವಾಹಿತಿ
ಸಂದರ್ಶನ: ನವೀನ್ ಡಿಸೋಜ
ಮಡಿಕೇರಿ: ಇತ್ತೀಚೆಗೆ ಮಡಿಕೇರಿ ನಗರದ ಹೊರವಲಯದಲ್ಲಿ ಉದ್ಘಾಟನೆಗೊಂಡಿರುವ ಗೋಶಾಲೆಗೆ ಶೀಘ್ರದಲ್ಲಿಯೇ ಜಾನುವಾರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಎ. ಪ್ರಸನ್ನ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ರಾಜ್ಯದ ೨ನೇ ಸರ್ಕಾರಿ ಗೋಶಾಲೆಯನ್ನು ಇತ್ತೀಚೆಗೆ ಉದ್ಘಾಟಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದ ಇನ್ನೂ ಗೋಶಾಲೆ ಕಾರ್ಯಾರಂಭ ವಾಡಿಲ್ಲ. ಈ ಬಗ್ಗೆ ‘ಆಂದೋಲನ’ ಸಂದರ್ಶನದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಎ. ಪ್ರಸನ್ನ ವಾಹಿತಿ ನೀಡಿದ್ದಾರೆ.
ಪ್ರಶ್ನೆ: ಗೋಶಾಲೆ ಉದ್ಘಾಟನೆಗೊಂಡರೂ ಜಾನುವಾರುಗಳನ್ನು ದಾಖಲಿಸದಿರಲು ಕಾರಣವೇನು?
ಉತ್ತರ: ಕೆ.ನಿಡುಗಣೆ ಗ್ರಾಮದಲ್ಲಿ ಗೋಶಾಲೆಯನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಆದರೆ, ಈ ಸಮಯದಲ್ಲಿ ಮೇವಿನ ಕೊರತೆ ಇರುವುದರಿಂದ ಸಂಗ್ರಹ ಸಾಧ್ಯವಾಗಿಲ್ಲ. ಇನ್ನು ೮-೧೦ ದಿನಗಳಲ್ಲಿ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಈಗ ೫೦ ಜಾನುವಾರುಗಳಿಗೆ ಮಾತ್ರ ಆಶ್ರಯ ಕಲ್ಪಿಸುವಷ್ಟು ಮೂಲಭೂತ ಸೌಲಭ್ಯವಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಬಿಡಾಡಿ ಜಾನುವಾರುಗಳಿಗೆ ೨ನೇ ಆದ್ಯತೆ ನೀಡಿ ನಂತರ ಮಾಲೀಕರು ಸೇರ್ಪಡೆಗೊಳಿಸುವ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ. ಗೋಶಾಲೆಗೆ ಸಿಬ್ಬಂದಿಗಳ ನೇಮಕವಾಗಿಲ್ಲ. ಡಿ ಗ್ರೂಪ್ ನೌಕರರನ್ನು ತಾತ್ಕಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಬೇಕಾಗಿದೆ.
ಪ್ರಶ್ನೆ: ಜಿಲ್ಲೆಯಲ್ಲಿ ಬಿಡಾಡಿ ಜಾನುವಾರುಗಳಿಂದ ಸಾಕಷ್ಟು ಸಮಸ್ಯೆಯುoಟಾಗುತ್ತಿದೆ. ೫೦ ಜಾನುವಾರುಗಳಿಗೆ ಆಶ್ರಯ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತದೆಯೇ
ಉತ್ತರ: ಪ್ರಸ್ತುತ ೨ ಎಕರೆ ಜಾಗದಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ೮ ಎಕರೆಗೆ ವಿಸ್ತರಿಸುವ ಚಿಂತನೆ ಇದೆ. ಈಗ ಕೊಟ್ಟಿಗೆಯಲ್ಲಿ ಸಾಕಲು ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಫೆನ್ಸ್ ಹಾಕಿ ಹೊರಗೆ ಬಿಡುವ ಮೂಲಕ ಗೋಶಾಲೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಶ್ನೆ: ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎಷ್ಟಿದೆ?
ಉತ್ತರ: ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಶೇ.೩೦ರಷ್ಟು ಸಿಬ್ಬಂದಿಗಳು ವಾತ್ರ ಕಾರ್ಯನಿರ್ವಹಿಸುತ್ತಿದ್ದು, ಶೇ.೭೦ರಷ್ಟು ಸಿಬ್ಬಂದಿಗಳ ಕೊರತೆಯ ನಡುವೆ ಕೆಲಸ ವಾಡಬೇಕಾದ ಪರಿಸ್ಥಿತಿ ಇದೆ. ಇಲಾಖೆುಂಲ್ಲಿ ೭೩ ಸಂಸ್ಥೆಗಳಿದ್ದು, ೪೮ ಸಂಸ್ಥೆಗಳಲ್ಲಿ ವೈದ್ಯರು ಇರಬೇಕಾಗಿತ್ತು. ಆದರೆ, ೨೧ ಸಂಸ್ಥೆಗಳಲ್ಲಿ ವಾತ್ರ ವೈದ್ಯರಿದ್ದಾರೆ. ಒಬ್ಬ ವೈದ್ಯರು ೨-೩ ಸಂಸ್ಥೆಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಪ್ರಶ್ನೆ: ಜಿಲ್ಲೆಯಲ್ಲಿ ಇತರ ಪ್ರಾಣಿ ಸಂಬಂಧಿತ ರೋಗಗಳ ಭೀತಿ ಇದೆೆಯೇ?
ಉತ್ತರ: ಇತ್ತಿಚೆಗೆ ಕೇರಳ ರಾಜ್ಯದ ಹಂದಿಗಳಲ್ಲಿ ಜ್ವರ ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಸದ್ಯ ಆ ರೋಗವೂ ಕಡಿಮೆಯಾಗಿರುವುದರಿಂದ ಸಮಸ್ಯೆಯಿಲ್ಲ. ಜಿಲ್ಲೆಯ ಕೆಲವು ಭಾಗಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದಿರುವುದರಿಂದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವು ವರದಿಗಳು ನೆಗೆಟಿವ್ ಬಂದಿದ್ದು, ಇನ್ನು ಕೆಲವು ವರದಿಗಳು ಬರಬೇಕಿದೆ. ಸದ್ಯ ಆತಂಕ ಪಡುವಂತಹ ಯಾವ ಪ್ರಕರಣಗಳೂ ಇಲ್ಲ.
ಪ್ರಶ್ನೆ: ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಯಾವುದಾದರೂ ಅಭಿಯಾನ ನಡೆಯುತ್ತಿದೆಯೇ ?
ಉತ್ತರ: ಸೆ.೧ರಿಂದ ೧೫ರವರೆಗೆ ರೇಬೀಸ್ ಹಾಗೂ ಪ್ರಾಣಿ ಸಂಬಂಧಿತ ಇತರ ರೋಗಗಳ ಬಗ್ಗೆ ವಾಹಿತಿ ಶಿಬಿರವನ್ನು ಪ್ರೌಢಶಾಲೆಗಳಲ್ಲಿ ಆಯೋಜಿಸಲಾಗಿದೆ. ಸೆ.೧೫ರಿಂದ ೩೦ರವರೆಗೆ ಉಚಿತ ಆ್ಯಂಟಿ ರೇಬೀಸ್ ಅಭಿಯಾನ ಮೂಲಕ ಸುವಾರು ೧೦,೫೦೦ ಶ್ವಾನಗಳಿಗೆ ಜಿಲ್ಲೆಯಾದ್ಯಂತ ಲಸಿಕೆ ಹಾಕಲಾಗಿದೆ. ೫ ತಾಲ್ಲೂಕುಗಳಲ್ಲೂ ಈ ಅಭಿಯಾನ ನಡೆಸಲಾಗಿದೆ.
ಪ್ರಶ್ನೆ: ಕೊಡಗು ಜಿಲ್ಲೆಯಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆಯೇ?
ಉತ್ತರ: ಚರ್ಮಗಂಟು ರೋಗ ಸದ್ಯ ಕೊಡಗು ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯಲ್ಲಿ ರೋಗ ಹರಡುವ ಸಾಧ್ಯತೆ ಕಡಿಮೆ ಇದೆ. ಬೇರೆ ಕಡೆಗಳಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯುವುದರಿಂದ ರೋಗ ಹರಡುತ್ತದೆ. ನಮ್ಮಲ್ಲಿ ಜಾತ್ರೆಯಂತಹ ಜಾನುವಾರುಗಳು ಸೇರುವಂತಹ ಕಾರ್ಯಕ್ರಮ ಕಡಿಮೆ ಇರುವುದರಿಂದ ರೋಗ ಹರಡುವ ಸಾಧ್ಯತೆ ಇಲ್ಲ. ಆದರೂ ಪಕ್ಕದ ಜಿಲ್ಲೆಗಳಲ್ಲಿ ರೋಗ ಪತ್ತೆಯಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ.
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…
ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…
ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…