ಮೈಸೂರು

ಸಂವಿಧಾನ ಬದಲಾವಣೆ ಬಿಜೆಪಿ ಹಿಡನ್‌ ಅಜೆಂಡಾ : ಸಿಎಂ ಸಿದ್ದರಾಮಯ್ಯ

ಮೈಸೂರು : ಸಂವಿಧಾನ ಬದಲಾವಣೆ ಬಿಜೆಪಿ ಪಕ್ಷದ ಹಿಡನ್‌ ಅಜೆಂಡ ಅದನ್ನು ಬೇರೆಯವರ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದ ಮಹಾರಾಜ ಮೈದಾನದಲ್ಲಿ ನಡೆಯುತ್ತಿರುವ ಐದು ಗ್ಯಾರೆಂಟಿಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದವರಿಗೂ ಸಾಮನತೆ, ಸಮಾನ ಹಕ್ಕು ನೀಡುವ ಕಾರಣಕ್ಕಾಗೊಯೇ ಬಿಜೆಪಿ ಅವರು ಸಂವಿಧಾನವನ್ನು ಬದಲಾವಣೆ ಮಾಡುವ ಅಚಲ ನಂಬಿಕೆ ಹೊಂದಿದ್ದಾರೆ ಎಂದರು.

ಬಿಜೆಪಿ ಪಕ್ಷದ ಸಂಸದ ಅನಂತ್‌ಕುಮಾರ್‌ ಹೆಗಡೆ ಈ ಹಿಂದೆಯೂ ಒಮ್ಮ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಬಳಿಕ ಮತ್ತೆ ಕೆಲವು ದಿನಗಳ ಹಿಂದೆ ಅದೇ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಪಕ್ಷ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ನಮಗೆ ೪೦೦ ಸ್ಥಾನ ನೀಡಿ ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅನಂತ್‌ಕುಮಾರ್‌ ಹೇಳಿಕೆ ನೀಡಿದರೂ ಅವರನ್ನು ಪಕ್ಷದಿಂದ ಉಚ್ಚಾಟನೆ ಅಥವ ಅಮಾನತ್ತು ಮಾಡಿಲ್ಲ. ನೇರವಾಗಿ ಹೇಳಲಾಗದೇ ಅವರಿವರ ಮೂಲಕ ನರೇಂದ್ರ ಮೋದಿ, ಅಮಿತ್‌ ಶಾ ನಡ್ಡ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾವೆಲ್ಲರೂ ಸೇರಿ ನಮ್ಮ ಸಂವಿಧಾನವನ್ನ ಉಳಿಸಿಕೊಳ್ಳಬೇಕು ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಕರೆ ಕೊಟ್ಟರು.

andolanait

Recent Posts

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

7 mins ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

17 mins ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

2 hours ago

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…

2 hours ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…

2 hours ago

ಜನತಂತ್ರ ಉಳಿಸುವ ಯುವಜನರ ನಾಳೆಗಳನ್ನು ಗೌರವಿಸೋಣ

ದೆಹಲಿ ಕಣ್ನೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…

2 hours ago