ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ
ಹೇಮಂತ್‌ಕುಮಾರ್
ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ ಮುಖ ಮಾಡುತ್ತಾರೆ. ಅಂತೆಯೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿಯ ಕುರಹಟ್ಟಿ ವಾಟರ್‌ಫಾಲ್ಸ್ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ.
ಇದು ನೈಸರ್ಗಿಕವಾದ ಜಲಪಾತವಲ್ಲ. ಕೆ. ಆರ್. ಎಸ್. ಅಣೆಕಟ್ಟೆಯಿಂದ ಬರುವ ವಿಶ್ವೇಶ್ವರಯ್ಯ ನಾಲೆ. ಈ ನಾಲೆಯ ನೀರು ಈ ಜಾಗದಲ್ಲಿ ಹೆಚ್ಚಾಗಿ ಹರಿಯುವುದರಿಂದ ನಿರ್ಮಾಣವಾಗಿರುವ ಫಾಲ್ಸ್.
ಅಂತರ್ಜಾಲದಲ್ಲಿ ಸರ್ಚ್ ಮಾಡಿ ನೋಡುವ ಬೆಂಗಳೂರು -ಮೈಸೂರು ನಗರದ ಯುವಕ ಮಿತ್ರರು ಹೆಚ್ಚಾಗಿ ಟೆಂಪೂ, ಕಾರುಗಳಲ್ಲಿ ಆಗಮಿಸುತ್ತಾರೆ. ನೈಸರ್ಗಿಕ ಜಲಪಾತಗಳಲ್ಲಿರುವಂತೆ ಯಾವುದೇ ಅಪಾಯಗಳ ಆತಂಕವಿಲ್ಲ. ಕೆಳಗೆ ಲೋಕಪಾವನಿ ನದಿ ಹರಿಯುತ್ತಿದ್ದರೆ, ಮೇಲ್ಗಾಲುವೆ(ಆಕ್ವಾಡಕ್ಟ್) ಮೂಲಕ ಕಾವೇರಿ ಹರಿಯುವ ಆಕರ್ಷಕ ತಾಣವಿದು.
ಈ ಮೇಲ್ಗಾಲುವೆಗೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿವಿನ ಸಾಮರ್ಥ್ಯವಿದ್ದು, ಹೆಚ್ಚುವರಿ ನೀರು ಮೇಲ್ಗಾಲುವೆಯ ಒಂದು ಬದಿಯಲ್ಲಿ ಮಾತ್ರ ಜಲಪಾತದಂತೆ ಧುಮ್ಮಿಕ್ಕುವುದನ್ನು ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ಫಾಲ್ಸ್‌ನೊಳಗೆ ಹೋಗಿ ಬಂದು ಖುಷಿ ಪಡುತ್ತಾರೆ. ಆ ಮೂಲಕ ಕಾರನ್ನು ವಾಷ್ ಮಾಡಿಕೊಳ್ಳುವುದನ್ನೂ ಕಾಣಬಹುದು.
ಇನ್ನೂ ಕೆಲ ಸಾಹಸಿಗಳು ಕಾಲುವೆ ಮೇಲಕ್ಕೇ ಹೋಗಿ ಕುಳಿತು ಸಾಹಸ ಮಾಡುವುದೂ ಇಲ್ಲಿ ಸಾಮಾನ್ಯ. ಮೇಲಿನಿಂದ ಧುಮ್ಮಿಕ್ಕುವ ಜಲಪಾತದಲ್ಲಿ ನಿಂತು ರಭಸದಿಂದ ಬೀಳುವ ನೀರಿನಲ್ಲಿ ಖುಷಿ ಪಡುವುದೇ ಇಲ್ಲಿನ ವಿಶೇಷ.
ಈ ಸೊಬಗನ್ನು ಸವಿಯಬೇಕಾದರೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯಬಿಟ್ಟಾಗ ಮಾತ್ರ ಇಂತಹ ಫಾಲ್ಸ್ ಕಾಣಸಿಗುತ್ತದೆ. ನೀರಿಲ್ಲದಿದ್ದಾಗ ಕೆಳಗೆ ಹರಿಯುವ ಲೋಕಪಾವನಿಯ ಝುಳು ಝುಳು ನಿನಾದವನ್ನಷ್ಟೇ ಕೇಳಬಹುದು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…