ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಇ ಹುಂಡಿಯನ್ನು ತೆರೆದು ಅನುಕೂಲ ಕಲ್ಪಿಸಲಾಗಿದೆ. ಮಲೆಮಾದೇಶ್ವರ ಬೆಟ್ಟದ ಮುಖ್ಯ ದೇವಾಲಯ ಹಾಗೂ ಇನ್ನಿತರ ಕಡೆ ಹುಂಡಿ (ಗೋಲಕ )ಇಡಲಾಗಿತ್ತು ಇದರಿಂದ ಭಕ್ತಾದಿಗಳು ತಮ್ಮ ಹರಕೆ ಕಾಣಿಕೆಗಳನ್ನು ಹುಂಡಿಯಲ್ಲೇ ಹಾಕಬೇಕಿತ್ತು.
ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲೆಮಹದೇಶ್ವರ ಬೆಟ್ಟ ಶಾಖೆ ಅಧಿಕಾರಿಗಳ ಸಹಕಾರದೊಂದಿಗೆ ದೇವಾಲಯದ ಪ್ರಮುಖ ಕಡೆಗಳಲ್ಲಿ ಇ ಹುಂಡಿ ತೆರೆಯಲಾಗಿದೆ. ಇದರಿಂದ ಭಕ್ತಾದಿಗಳು ಆನ್ಲೈನ್ ಪಾವತಿ ಮಾಡುವ ಮೂಲಕ ಹರಕೆ ಕಾಣಿಕೆ ಸಲ್ಲಿಸಬಹುದಾಗಿದೆ. ಮಲೆಮಾದೇಶ್ವರ ಗರ್ಭ ಗುಡಿ ಆವರಣದಲ್ಲಿ ಇ ಹುಂಡಿ ಇಡುವ ಮೂಲಕ (ಆನ್ ಲೈನ್ ಪೇಮೆಂಟ್) ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಬಸವರಾಜು ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್ ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ ಪಾರುಪತ್ತೇದಾರ ಮಲ್ಲಿಕಾರ್ಜುನ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸುವ ಮುಂಗಡ ಟಿಕೆಟ್ ರದ್ದತಿಯ ಬಗ್ಗೆ ಹೊಸ ನಿಯಮವನ್ನು ಏಪ್ರಿಲ್ ೧ರಿಂದ ಜಾರಿಗೆ ತಂದಿದೆ. ಪ್ರಯಾಣಿಸುವ…
ಮೈಸೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ. ಹಿರಿಯ…
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ…
ಎಚ್.ಹಾಲಪ್ಪ ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ…
ಹಿಂದಿ ಭಾಷೆಯ ಪ್ರಶ್ನೆ ಮತ್ತೆ ವಿವಾದವನ್ನು ಉಂಟು ಮಾಡಿದೆ. ತನ್ನ ಮಾತೃ ಭಾಷೆಯಲ್ಲದ ಮತ್ತು ಉತ್ತರ ಭಾರತದ ರಾಜ್ಯಗಳ ಮಾತೃ…
ನವೀನ್ ಡಿಸೋಜ ಶಿಪ್‌ಮೆಂಟ್ ವಿಳಂಬ, ಕಂಟೇನರ್ ಕೊರತೆ, ಹಡಗುಗಳ ಅಭಾವ, ಇಂಧನ ಅನಿಶ್ಚಿತತೆ ಕಾಫಿ ಉತ್ಪಾದನಾ ವಲಯದಲ್ಲಿ ಗೊಂದಲದ ವಾತಾವರಣ …