ರಾಜ್ಯ

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಗೀಳು : ಡಿಜಿಟಲ್‌ ಲಾಕ್‌ ಪ್ರಯೋಗಕ್ಕೆ ಮುಂದಾದ ಸರ್ಕಾರ

ಬೆಂಗಳೂರು : ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಕಡಿಮೆ ಮಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ಮೊಬೈಲ್ ಸ್ವಿಚ್ ಆಫ್ ಹಾಗೂ ಟಿ.ವಿ. ಬಂದ್ ಮಾಡಿಸುವ ಡಿಜಿಟಲ್ ಲಾಕ್ ಪ್ರಯೋಗಕ್ಕೆ ಮುಂದಾಗಿದೆ.

ಸದ್ಯ ಇದನ್ನು ಹಾವೇರಿ ಜಿಲ್ಲೆಯಲ್ಲಿ ಮಾತ್ರ ಪ್ರಯೋಗಿಕವಾಗಿ ಜಾರಿ ಮಾಡಲಾಗಿದ್ದು,ಇಲ್ಲಿ ಬರುವ ಪರಿಣಾಮವನ್ನು ನೋಡಿಕೊಂಡು ಮುಂದಿನ ಕೆಲವೇ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯದದ್ಯಾಂತ ಜಾರಿ ಮಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಹಾಕಿಕೊಂಡಿದೆ.

ಪ್ರತಿ ದಿನ ಸಂಜೆ 7 ಗಂಟೆಯಿಂದ 9ರವರೆಗೆ ಎರಡು ಗಂಟೆ ಮೊಬೈಲ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿಸುವಂತೆ ಸೂಚಿಸಿದೆ. ಪ್ರತಿ ಹಂತದಲ್ಲಿಯೂ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಡಂಗೂರು ಬಾರಿಸಿ ಪೋಷಕರಿಗೆ ಜಾಗೃತಿ ಮಾಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸುವುದಕ್ಕಾಗಿ, ಪ್ರತಿ ಗ್ರಾಮದಲ್ಲಿಯೂ ನಿತ್ಯ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಹಾಗೂ ಟಿ.ವಿ. ಆಫ್ ಮಾಡುವಂತೆ ಢಂಗುರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರ ಬರೆದಿದ್ದಾರೆ.

ಎಸ್‍ಎಸ್‍ಎಲ್‍ಸಿ ಓದುವ ಮಕ್ಕಳಿರುವ ಮನೆಗಳಲ್ಲಿ ಕಡ್ಡಾಯವಾಗಿ ಡಿಜಿಟಲ್ ಲಾಕ್ ಪ್ರಯೋಗ ಪಾಲಿಸುವಂತೆ ಕೋರಲಾಗುತ್ತಿದೆ.‘ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮಕ್ಕಳ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ, ಡಿಜಿಟಲ್ ಲಾಕ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದ್ದು, ಪ್ರಯೋಗಕ್ಕೆ ಕೈ ಜೋಡಿಸುವಂತೆ ಕೋರಲಾಗಿದೆ.

ಆಧುನಿಕ ಯುಗದಲ್ಲಿ ಮೊಬೈಲ್ ಹಾಗೂ ಟಿ.ವಿ. ಬಳಕೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದಲು ಆಗುತ್ತಿಲ್ಲ. ಓದಿಗೆ ಅಡೆತಡೆ ಉಂಟಾಗುತ್ತಿದೆ. ಮಕ್ಕಳ ಓದಿಗೆ ಸಹಕರಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ಅವಧಿಯಲ್ಲಿ ಪೋಷಕರು ಹಾಗೂ ಮನೆಯಲ್ಲಿರುವವರು ಮೊಬೈಲ್–ಟಿ.ವಿ. ಬಂದ್ ಮಾಡಿ, ಮಕ್ಕಳ ಓದಿಗೆ ಸಹಕರಿಸಬೇಕು’ ಎಂದು ಅವರು ಕೋರಲಾಗಿದೆ.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

4 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

5 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

7 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

8 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

8 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

9 hours ago