ಕೊಡಗು

ಕೊಡಗಿನಲ್ಲಿ ಗಾಳಿ-ಮಳೆಗೆ ಧರೆಗುರುಳಿದ ವಿದ್ಯುತ್‌ ಕಂಬಗಳು: ಚೆಸ್ಕಾಂಗೆ ಭಾರೀ ನಷ್ಟ

ಕೊಡಗು: ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆಯಾದ ಪರಿಣಾಮ ಈ ವರ್ಷ ಚೆಸ್ಕಾಂಗೆ ಭಾರೀ ನಷ್ಟ ಉಂಟಾಗಿದೆ.

ಕಳೆದ ಜುಲೈ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿ ಪ್ರವಾಹದ ರೂಪ ಪಡೆದಿತ್ತು.

ಮಳೆಗಿಂತ ಮುಖ್ಯವಾಗಿ ಭೀಕರ ಗಾಳಿ ಬೀಸಿದ್ದ ಪರಿಣಾಮ ಸಾವಿರಾರು ಮರ, ವಿದ್ಯುತ್‌ ಕಂಬಗಳು ಧರೆಗುರುಳಿದ್ದವು. ಮರಗಳು ವಿದ್ಯುತ್‌ ಕಂಬಗಳ ಮೇಲೆ ಉರುಳಿ ಬಿದ್ದ ಪರಿಣಾಮ ಜಿಲ್ಲೆಯಲ್ಲಿ ಸುಮಾರು 3077 ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದವು.

ಇದರ ಜೊತೆಗೆ 150 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ ಎಂದು ಸ್ವತಃ ಚೆಸ್ಕಾಂ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಇದರಿಂದ ಇಲಾಖೆಗೆ 4.83 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಈ ತಿಂಗಳು ಕೂಡ ಮಳೆ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿದ್ದು, ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲರ್ಟ್‌ ಆಗಿರುವಂತೆ ಸೂಚನೆ ನೀಡಲಾಗಿದೆ.

ಇನ್ನು ಈ ವರ್ಷಕ್ಕೆ ನೋಡಿದರೆ, ಕಳೆದ ವರ್ಷ ವಿದ್ಯುತ್‌ ಇಲಾಖೆಗೆ ಹೆಚ್ಚೇನೋ ನಷ್ಟವಾಗಿರಲಿಲ್ಲ. ಆದರೆ ಈ ಬಾರಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ನಷ್ಟವಾಗಿದೆ.

ಇದರ ಜೊತೆ ಜೊತೆಗೆ ಬೆಟ್ಟ-ಗುಡ್ಡಗಳಲ್ಲಿ ವಾಸಿಸುತ್ತಿರುವ ಜನರಿಗೆ ಕಡಿತವಾಗಿರುವ ವಿದ್ಯುತ್‌ ಸಂಪರ್ಕವನ್ನು ಸರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊಡಗು ಜಿಲ್ಲೆ ಸದ್ಯದ ಮಟ್ಟಿಗೆ ಸಹಜ ಸ್ಥಿತಿಯಲ್ಲಿದೆ.

ಒಂದು ವೇಳೆ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ತಿಂಗಳು ಕೂಡ ಮಳೆ ಮುಂದುವರಿದರೆ, ಮತ್ತೆ ಅದೇ ಸ್ಥಿತಿ ಬರಲಿದೆ ಎನ್ನಲಾಗಿದ್ದು, ಜನತೆ ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಪಿಎಂ-ಸಿಎಂ ಗುಟ್ಟು ರಟ್ಟು ; ಸಂಭಾಷಣೆ ರಹಸ್ಯ ಬಿಚ್ಚಿಟ್ಟ ಸಿಎಂ

ಮೈಸೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ…

15 mins ago

ಇನ್ನು ಮುಂದೆ ಸೌಜನ್ಯದಿಂದ ವರ್ತಿಸುವುದಿಲ್ಲ ; ಇರಾನ್‌ಗೆ ಟ್ರಂಪ್‌ನ ಕಠಿಣ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, “ನಾವು ಹೇಳುವ ಒಪ್ಪಂದವನ್ನು…

39 mins ago

ಬಿಟ್‌ಕಾಯಿಲ್‌ ಪ್ರಕರಣ; ನಲಪಾಡ್‌ ಹ್ಯಾರಿಸ್‌ ಮನೆ ಸೇರಿ 17 ಕಡೆ ಇ.ಡಿ ದಾಳಿ

ಬೆಂಗಳೂರು : ಕಾಂಗ್ರೆಸ್ ಶಾಸಕ ಎನ್.​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ…

49 mins ago

ಪ್ರಸ್ತುತ ದಲಿತ ರಾಜಕಾರಣದಲ್ಲಿ ಮಹದೇವಪ್ಪ ಎಂಬ ವಿದ್ಯಮಾನ

ರಮೇಶ್‌ ಎಚ್.ಕೆ. ಶಿವಮೊಗ್ಗ ಕರ್ನಾಟಕದಲ್ಲಿ ದಲಿತ ವರ್ಗಗಳ ರಾಜಕಾರಣ ಎಂದಾಕ್ಷಣ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ,…

1 hour ago

ಬೆಂ-ಮೈ ಹೆದ್ದಾರಿಯಲ್ಲಿ ಕಾರು-ಬಸ್ ಡಿಕ್ಕಿ ; ತಪ್ಪಿದ ಭಾರೀ ಅನಾಹುತ, ಪ್ರಯಾಣಿಕರು ಪಾರು

ಮಂಡ್ಯ : ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್…

2 hours ago

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

2 hours ago