ಕೊಡಗು

ಕೊಡಗು: ಗೇಟ್‌ನಲ್ಲಿ ಸಿಕ್ಕಿಕೊಂಡ ತಲೆಯನ್ನು ಹೊರ ತೆಗೆಯಲು ಪರದಾಡಿದ ಕಾಡಾನೆ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತಿತಿಮತಿಯ ಬಳಿಯ ಅರಣ್ಯ ಇಲಾಖೆಯ ಟಿಂಬರ್‌ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆಯ ತಲೆ ಸಿಕ್ಕಿಕೊಂಡಿದ್ದು, ಅದನ್ನು ಹೊರ ತೆಗೆಯಲು ಪಡದಾಡಿದೆ.

ತಿತಿಮತಿಯ ಬಳಿಯ ಅರಣ್ಯ ಇಲಾಖೆಯಲ್ಲಿ ಇಂದು(ಜನವರಿ.18) ಟಿಂಬರ್ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆ ತಲೆಯೂ ಸಿಕ್ಕಿಕೊಂಡಿದ್ದು, ಕೆಲಕಾಲ ಹೊರಬರಲು ಹರಸಾಹಸ ಮಾಡಿದೆ.

ಒಟ್ಟು 5 ಕಾಡಾನೆಗಳ ಹಿಂಡಿನಲ್ಲಿದ್ದ ಒಂದು ಕಾಡಾನೆಯ ತಲೆ ,ರೆಡಿಯೋ ಕಾಲರ್ ಅಳವಡಿಸಿದ್ದ ಯಾರ್ಡ್ ಗೇಟ್‌ನಲ್ಲಿ ಸಿಲುಕಿಕೊಂಡಿತ್ತು. ಆದರೆ ಆ ಕಾಡಾನೆ ಕೆಲಕ್ಷಣದಲ್ಲಿಯೇ ಚಾಣಕ್ಷತೆಯಿಂದ ತಲೆ ಹೊರತೆಗೆದು ಪರಾರಿಯಾಗಿದೆ. ಇನ್ನೂ ಕಾಡಾನೆ ತಲೆ ಸಿಲುಕಿಕೊಂಡಿದ್ದ ಸಂಗಾತಿಯ ನೆರವಿಗೆ ಧಾವಿಸಿದ್ದ ಮತ್ತೊಂದು ಕಾಡಾನೆಯೂ ಕ್ಯಾಮರದಲ್ಲಿ ಸೆರೆಯಾಗಿದೆ.

ಈ ಘಟನೆಯೂ ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್‌ನ ಮುಂಭಾಗ ಅರಣ್ಯ ಡಿಪೋದಲ್ಲಿ ನಡೆದಿದೆ. ಈ ವೇಳೆ ತಲೆ ಸಿಕ್ಕಿಕೊಂಡಿದ್ದ ಕಾಡಾನೆಯೊಂದಿಗೆ ಐದು ಕಾಡಾನೆಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಅರ್ಚನ ಎಸ್‌ ಎಸ್

Recent Posts

ಓದುಗರ ಪತ್ರ: ರಸ್ತೆ ದುರಸ್ತಿಗೊಳಿಸಿ

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…

1 hour ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಕಸ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…

1 hour ago

ಹಾರ್ಮುಜ್ ಹಾದಿಯಲ್ಲಿ ಬಟ್ಟಬಯಲಾದ ನೀತಿ ವೈಫಲ್ಯ

ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…

1 hour ago

ಕಡಂಗಮರೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…

1 hour ago

ಗುಂಡ್ಲುಪೇಟೆ: ಟಿಪ್ಪರ್‌ಗಳಿಗೆ ಬೀಳಬೇಕಿದೆ ಬ್ರೇಕ್

ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…

2 hours ago