ರಾಜ್ಯ

ಅಧ್ಯಕ್ಷ ಸ್ಥಾನಕ್ಕೆ ನೀನು ಯೋಗ್ಯನಲ್ಲ: ಬಿವೈ ವಿಜಯೇಂದ್ರ ವಿರುದ್ಧ ರಮೇಶ್‌ ಜಾರಕಿಹೊಳಿ ಗುಡುಗು

ಬೆಳಗಾವಿ: ವಿಜಯೇಂದ್ರ ನೀನು ಇನ್ನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋಕಾಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳವಿರುವುದು ಅಧ್ಯಕ್ಷ ಸ್ಥಾನ ಬದಲಾವಣೆಗೆ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆ ಆಗದಿದ್ದರು ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮೇಲೆ ನಮಗೆ ಈಗಲೂ ಗೌರವವಿದೆ. ಅವರ ಹೆಸರಿನಲ್ಲಿ ನೀನು ಸುಳ್ಳು ಹೇಳುವುದನ್ನು ಮೊದಲು ಬಿಡು. ನಿನ್ನ ಮೇಲೆ ನನಗೆ ಗೌರವವಿಲ್ಲ, ಅಧ್ಯಕ್ಷ ಸ್ಥಾನದ ಮೇಲೆ ಮಾತ್ರ ಗೌರವ ಎಂದು ಹೇಳಿದರು.

ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ನಿಯಂತ್ರಿಸುವ ಶಕ್ತಿ ನಮಗಿದೆ. ಆದರೆ ನಿನ್ನ ಹಾಗೆ ಕೀಳು ಮಟ್ಟದ ರಾಜಕೀಯಕ್ಕೆ ಇಳಿಯುವುದಿಲ್ಲ. ಪಕ್ಷಕ್ಕೆ ಬಂದು ಮೂರು ವರ್ಷ ಆಯಿತು ಎಂದು ಹೇಳುತ್ತಿಯಾ. ನಿಮ್ಮ ಅಪ್ಪನ ಹರಾಮಿ ದುಡ್ಡಲ್ಲಿ ಒಡಾಡ್ತಿದ್ದೀಯಾ ಎಂದು ವಾಗ್ದಾಳಿ ನಡೆಸಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಬಹುಸಂಖ್ಯಾತ ಜನರಿಗೆ ಬೇಕಾಗಿರುವ ವ್ಯಕ್ತಿ ಆದ ಕಾರಣ ನಾವು ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯಿತರಲ್ಲಿ ಇನ್ನು ಸಾಕಷ್ಟು ಹಿರಿಯ ನಾಯಕರಿದ್ದಾರೆ. ನೀನು ಇನ್ನು ಸಣ್ಣ ಹುಡುಗ ನಿನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಆಗಲೂ ಹೈಕಮಾಂಡ್‌ ಮುಂದುವರೆಸಿದರೆ ಪಕ್ಷದ ನಿರ್ಣಯವನ್ನು ನಾನು ಸ್ವಾಗತ ಮಾಡುತ್ತೇನೆ ಏಂದು ಹೇಳಿದರು.

ನನ್ನಿಂದ ಏನಾದರೂ ತಪ್ಪಾಗಿದ್ದರೆ ನನ್ನ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ. 2028 ಕ್ಕೆ ಬಿಜೆಪಿ ಪಕ್ಷ ಅಧಿಕಾರ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

1 hour ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

1 hour ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

2 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

2 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

2 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

2 hours ago