ಜಿಲ್ಲೆಗಳು

ಹಶೀಶ್ ಆಯಿಲ್ ಮಾರಾಟ ಜಾಲ ಪತ್ತೆಹಚ್ಚುವಲ್ಲಿ ಕೊಡಗು ಪೊಲೀಸರು ಯಶಸ್ವಿ

ಮಡಿಕೇರಿ: ಹಶೀಶ್ ಆಯಿಲ್ ಮಾರಾಟ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಕೊಡಗು ಜಿಲ್ಲಾ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅಹಮ್ಮದ್ ಕಬೀರ್ (೩೭), ಅಬ್ದುಲ್ ಖಾದರ್ (೨೭), ಮಹಮ್ಮದ್ ಮುಜಾಬಿಲ್ (೨೨) ಬಂಧಿತ ಆರೋಪಿಗಳು.
ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಬಂಧಿತರಿಂದ ೧೦ ಲಕ್ಷ ರೂ ಮೌಲ್ಯದ ೧.೧೬೦ ಗ್ರಾಂ ಹಶೀಶ್ ಆಯಿಲ್ ವಶಪಡಿಸಿಕೊಳ್ಳಲಾಗಿದ್ದು, ಭಾಗಮಂಡಲ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ವೇಳೆ ಎರಡು ಅನುಮಾನಸ್ಪದ ನಂಬರ್ ಪ್ಲೇಟ್‌ಗಳು ಪತ್ತೆ ಆಗಿದೆ. ಪರಿಶೀಲನೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ಪತ್ತೆಯಾಗಿದೆ. ವಿಚಾರಣೆ ಸಂದರ್ಭ ಹಶೀಶ್ ಆಯಿಲ್‌ನ್ನು ಮಾರಾಟ ಮಾಡಲು ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಧಿತರೆಲ್ಲರೂ ಕೇರಳ ಮೂಲದ ಆರೋಪಿಗಳಾಗಿದ್ದು, ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧ ನಂಬರ್ ಪ್ಲೇಟ್, ಮಾರುತಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಅಹಮದ್ ವಾಹನ ಕಳ್ಳತನ, ರಾಬರಿ, ಹನಿಟ್ರ್ಯಾಪ್‌ನಲ್ಲಿ ಸಕ್ರಿಯನಾಗಿದ್ದ, ಈತನ ವಿರುದ್ಧ ಮಡಿಕೇರಿ ಪೋಲಿಸ್ ಸ್ಟೇಷನ್‌ನಲ್ಲಿ ಕೂಡ ವಿವಿಧ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.

andolanait

Recent Posts

ಮಾ.23ರಿಂದ ವಿಜೃಂಭಣೆಯ ವೈರಮುಡಿ ಬ್ರಹ್ಮೋತ್ಸವ

ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು…

2 hours ago

ಓದುಗರ ಪತ್ರ: ಮೊಬೈಲ್ ಸ್ಟೇಟಸ್ !

ಮೊಬೈಲ್ ಸ್ಟೇಟಸ್ ! ಶಾಲೆಗಳಲ್ಲಿ ಮೊಬೈಲ್ ನಿಷೇಧ..? ಸರ್ಕಾರದ ಮೆಸೇಜ್‌ಗೆ ಲೈಕ್ ನೀಡಬಹುದು ಪೋಷಕರು ! ಆದರೆ, ಸ್ಟೂಡೆಂಟ್‌ಗಳು ?…

2 hours ago

ಓದುಗರ ಪತ್ರ: ಕಿಡಿಗೇಡಿಗಳಿಂದ ವಿದ್ಯಾರ್ಥಿಗಳು ವಿಚಲಿತರಾಗದಿರಿ

ಫೆ.೨೮ರ ಶನಿವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಪಾಠವನ್ನು ಮುಗಿಸಿ ಮಾದರಿ ಪ್ರಶ್ನೆ ಪತ್ರಿಕೆ…

2 hours ago

ಓದುಗರ ಪತ್ರ; ಸಫಾರಿಗೆ ಅನುಮತಿ ಖಂಡನೀಯ

ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ವನಸಿರಿಗೆ ಹೆಸರುವಾಸಿ, ಇಲ್ಲಿನ ಉತ್ತಮ ಹವಾಗುಣಕ್ಕೆ ಸನಿಹದಲ್ಲೇ ಇರುವ ಅರಣ್ಯ ಪ್ರದೇಶ ಕೂಡ…

2 hours ago

ತಂಪಾದ ಕೊಡಗಿನಲ್ಲಿಯೂ ಹೆಚ್ಚುತ್ತಿದೆ ತಾಪ

ನವೀನ್ ಡಿಸೋಜ ೩೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವ ತಾಪಮಾನ; ಅಗತ್ಯ ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ ಮಡಿಕೇರಿ: ಫೆಬ್ರವರಿ ತಿಂಗಳು ಕೊನೆಗೊಳ್ಳುತ್ತಿರುವಂತೆಯೇ…

2 hours ago

ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯಬೇಕು

ಸಫಾರಿ ಪುನಾರಂಭದ ಸಂಬಂಧ ‘ಆಂದೋಲನ’ ದಿನಪತ್ರಿಕೆಯು ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಪತ್ರಿಕೆ ನಡೆಸಿದ…

2 hours ago