Andolana originals

ತಂಪಾದ ಕೊಡಗಿನಲ್ಲಿಯೂ ಹೆಚ್ಚುತ್ತಿದೆ ತಾಪ

ನವೀನ್ ಡಿಸೋಜ

೩೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವ ತಾಪಮಾನ; ಅಗತ್ಯ ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ

ಮಡಿಕೇರಿ: ಫೆಬ್ರವರಿ ತಿಂಗಳು ಕೊನೆಗೊಳ್ಳುತ್ತಿರುವಂತೆಯೇ ಬಿಸಿಲಿನ ತಾಪವೂ ಹೆಚ್ಚಾಗಿದ್ದು, ಸದಾ ತಂಪಾಗಿರುವ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲಿನ ಬೇಗೆ ಎದುರಾಗಲಿದೆ.

ಸಾಮಾನ್ಯವಾಗಿ ತಂಪು ಹವಾಮಾನಕ್ಕೆ ಹೆಸರಾಗಿರುವ ಕೊಡಗಿನಲ್ಲಿ ಚಳಿಯಿಂದ ಒಮ್ಮೆಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರಲಿದ್ದು, ಎಚ್ಚರಿ ಕೆಯ ಘಂಟೆ ಮೊಳಗಿಸಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಭಾಗಗಳಲ್ಲಿ ಮಧ್ಯಾಹ್ನದ ತಾಪಮಾನ ೩೧ ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಮಧ್ಯಾಹ್ನದ ಬಿಸಿಲು ದೇಹಕ್ಕೆ ತೀವ್ರವಾಗಿ ತಟ್ಟುತ್ತಿದೆ. ತೀವ್ರ ಚಳಿಯಿಂದ ಕೂಡಿದ್ದ ವಾತಾ ವರಣದಲ್ಲಿ ದಿಢೀರ್ ತಾಪಮಾನ ಏರಿಕೆ ಆತಂಕ ಸೃಷ್ಟಿಸಿದೆ.

ಕೊಡಗಿನಂತಹ ಎತ್ತರ ಪ್ರದೇಶದಲ್ಲೇ ಈ ಮಟ್ಟದ ಉಷ್ಣತೆ ಕಂಡುಬಂದಿರುವುದು ಮುಂದಿನ ತಿಂಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾಗುವ ಸೂಚನೆ ಎಂದೂ ಹೇಳಲಾಗುತ್ತಿದೆ. ಹವಾಮಾನ ತಜ್ಞರ ಪ್ರಕಾರ, ಕಳೆದ ಕೆಲವು ವಾರಗಳಲ್ಲಿಮಳೆ ಕೊರತೆ, ಮೋಡ ಕವಿದ ದಿನಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೂ ಗಾಳಿಯ ತೇವಾಂಶ  ಕುಸಿತ ಇವೆಲ್ಲವೂ ತಾಪಮಾನ ಏರಿಕೆಗೆ ಕಾರಣವಾಗಿವೆ.

ಅಲ್ಲದೆ ಈ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದ್ದು, ತಾಪಮಾನವೂ ಏರಿಕೆಯಾಗಲಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ತಾಪಮಾನ ಇನ್ನೂ ೨ -೩ ಡಿಗ್ರಿ ಏರಿಕೆಯಾಗುವ ಸಂಭವವಿದೆ. ಇದ್ದಕ್ಕಿದ್ದಂತೆ ಉಷ್ಣತೆ ಏರಿಕೆ ಆಗಿರುವುದು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವೈದ್ಯರು.

ಕಾಫಿ ಬೆಳೆಗಾರರಿಗೆ ಈ ಸಮಯದ ತೇವಾಂಶ ಕುಸಿತ ಆತಂಕಕಾರಿ. ಹೂ ಬಿಡುವ ಹಂತದಲ್ಲಿರುವ ಕಾಫಿಗೆ ಸೂಕ್ತ ಮಳೆ ಅಗತ್ಯ. ಬಿಸಿಲು ತೀವ್ರವಾದರೆ ಹೂಗುಚ್ಛ ಉದುರುವ ಸಾಧ್ಯತೆ ಇದೆ. ಈಗಾಗಲೇ ಸ್ಪ್ರಿಂಕ್ಲರ್ ಬಳಸಿ ಕಾಫಿಗೆ ನೀರು ಒದಗಿಸುತ್ತಿದ್ದು, ಮಳೆ ಬಾರದಿದ್ದರೆ ಈ ವರ್ಷ ಇದನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲೆಯ ವಿರಾಜಪೇಟೆ, ನಾಪೋಕ್ಲು, ಚೆಟ್ಟಿಮಾನಿ, ಪೊನ್ನಂಪೇಟೆ ಸೇರಿದಂತೆ ಹಲವೆಡೆ ಈಗಾಗಲೇ ಮಳೆಯಾಗಿದೆ. ಮಳೆಯಾದ ಸಂದರ್ಭದಲ್ಲಿ ತಾಪಮಾನ ಇಳಿಕೆ ಕಂಡಿದ್ದರೂ ಮತ್ತೆ ಏರಿಕೆಯಾಗುತ್ತಿದೆ.

ಕೆರೆಗಳು, ಹೊಳೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಲು ಆರಂಭವಾದರೆ ಬೇಸಿಗೆಯ ಕೊನೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುವ ಸಾಧ್ಯತೆ ಇದೆ.

” ಕೊಡಗು ಮಾತ್ರವಲ್ಲ ಎಲ್ಲೆಡೆ ತಾಪಮಾನ ಏರಿಕೆಯಾಗುತ್ತಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಸಹಿತ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ರಾಜ್ಯದ ದಕ್ಷಿಣ ಒಳನಾಡಿನಮೈಸೂರು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬಂಗಾಳಕೊಲ್ಲಿ ಅಥವಾ ಅರಬ್ಬಿ ಸಮುದ್ರದಲ್ಲಿ ಯಾವುದೇ ಮಹತ್ವದ ವಿದ್ಯಮಾನಗಳು ಇಲ್ಲದ ಕಾರಣ ಅಧಿಕ ತಾಪಮಾನದ ಹಾಗೂ ವಾತಾವರಣದ ತೇವಾಂಶದಿಂದ ಸ್ಥಳೀಯವಾಗಿ ಉಂಟಾಗುವ ಮೋಡಗಳಿಂದ ಮಳೆಯಾಗುತ್ತಿದೆ.”

-ಡಾ.ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಘಟಕ, ನಾಗನಹಳ್ಳಿ

ಆರೋಗ್ಯ ಸಮಸ್ಯೆಗಳು…:

ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಹೀಟ್ ಎಕ್ಸಾಷನ್, ಹೀಟ್ ಸ್ಟ್ರೋಕ್, ತಲೆನೋವು, ತಲೆ ತಿರುಗುವುದುರಕ್ತ ದೊತ್ತಡ ಏರುಪೇರು ಚರ್ಮದ ಅಲರ್ಜಿ, ಉರಿ ಮಲಬದ್ಧತೆ, ಅಜೀರ್ಣ ಸಮಸ್ಯೆಗಳು

ಏನು ಮಾಡಬೇಕು?: 

ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರು ಕುಡಿಯಬೇಕು. ಮಧ್ಯಾಹ್ನದ ಕಡುಬಿಸಿಲು ತಪ್ಪಿಸಿಕೊಳ್ಳುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು. ಮಜ್ಜಿಗೆ, ನಿಂಬೆರಸ, ಎಳ ನೀರು ಸೇವನೆ ಹೆಚ್ಚಿಸುವುದು

 

 

ಆಂದೋಲನ ಡೆಸ್ಕ್

Recent Posts

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

41 mins ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

46 mins ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

1 hour ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

1 hour ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

6 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

6 hours ago