ಮೈಸೂರು : ನಮ್ಮ ಕಲೆ ಸಂಸ್ಕೃತಿ ಯನ್ನು ಜಗತ್ತಿನಾದ್ಯಂತ ಸಾರುತ್ತಿರುವ ಜಾರ್ಜಿಯ ಎಂಬ ಎನ್ ಜಿ ಒ ತಂಡದವರು ಇಂದು ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ ಎರಡು ತಂಡಗಳಾಗಿ ಪ್ರದರ್ಶನ ನೀಡಿದವು.
ಮಿನಿ ಫಾಕ್ಸ್, ವತ್ಸಲ್ ಪರಾಶನ್, ಗಯೂಕಿ, ತೆದೋ, ಭಾರತದ ರಾಗಗಳು ಹಾಗೂ ಭಾರತೀಯ ಸಂಗೀತ ಉಪಕರಣಗಳನ್ನು ಬಳಸಿಕೊಂಡು ಸಂಗೀತ ಪ್ರದರ್ಶನ ನೀಡಿದ ಇವರು ತಮ್ಮ ಮೇಲುವಾದ ಕಂಠದಿಂದ ನೆರದಿದ್ದಂತಹ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ತಂಡದ ನಾಯಕ ಮಾತನಾಡಿ, ಭಾರತದಲ್ಲಿ ನಾವು ಪ್ರದರ್ಶನ ನೀಡುತ್ತಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ ಇಲ್ಲಿ ನಮ್ಮ ಸಂಸ್ಕೃತಿಯನ್ನು ನಿಮ್ಮೆಲ್ಲರಿಗೂ ತಿಳಿಯುವಂತೆ ಮಾಡುವುದು ನಮಗೆ ಸಂತಸ ತಂದಿದೆ ಎಂದರು.
11 ಜನರಿಂದ ಕೂಡಿದ ನ್ಯೂ ಬಾನ ತಂಡದವರು ಮೊದಲಿಗೆ ಭಾರತದ ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ಸಾರ್ವಜನಿಕರನ್ನು ಎದ್ದು ನಿಲ್ಲುವಂತೆ ಮಾಡಿದರು.
ನಂತರದಲ್ಲಿ ತಮ್ಮ ದೇಶದ ರಾಷ್ಟ್ರ ಗೀತೆಯನ್ನು ಮೈಸೂರು ಜನತೆಗೆ ಪರಿಚಯಿಸಿದರು. ಅದಾದ ನಂತರದಲ್ಲಿ ಮೂರು ಸಂಗೀತ ಪ್ರದರ್ಶನ ನೀಡಿ ಜನರ ಮನ ಸೆಳೆಯುವುದರ ಮೂಲಕ ಶಿಳ್ಳೆಯನ್ನು ತಮ್ಮದಾಗಿಸಿಕೊಂಡರು.
ಮಡಿಕೇರಿಯಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸೆ; ವೈದ್ಯರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಮಡಿಕೇರಿ: ಕೊಡಗಿನಲ್ಲಿ ಡೇಕೇರ್ ಕಿಮೊಥೆರಪಿ ಕೇಂದ್ರ…
ಒಟ್ಟು ೧೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ; ಗುಂಡ್ಲುಪೇಟೆಯಲ್ಲೇ ಹೆಚ್ಚು ಚಾಮರಾಜನಗರ: ಹಿಂಗಾರು ಅವಧಿಯಲ್ಲಿ ಈ ಬಾರಿ ಹಿಂದಿಗಿಂತ ಹುರುಳಿ ಬಿತ್ತನೆ…
ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…
‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…
ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…