ಮಹೇಂದ್ರ ಹಸಗೂಲಿ
ನಿಯಮಾವಳಿ ಪಾಲಿಸದ ಕ್ರಷರ್; ದೂಳು-ಶಬ್ದ ಮಾಲಿನ್ಯ ಆರೋಪ
ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿ ಗ್ರಾಮದ ಬಳಿ ಇರುವ ಪಾರ್ವತಿ ಕ್ರಷರ್ ಯಾವುದೇ ಅನುಮತಿ ಪಡೆಯದೆ, ನಿಯಮಾವಳಿ ಪಾಲಿಸದೆ, ಯಾವುದೇ ತಡೆಗೋಡೆ ಇಲ್ಲದೆಕ್ರಷರ್ ನಡೆಯುತ್ತಿದ್ದು, ಇದರಿಂದ ಅಕ್ಕಪಕ್ಕದ ಜಮೀನುಗಳಿಗೆ ದೂಳು ಬರುತ್ತಿದ್ದು, ಶಬ್ದಮಾಲಿನ್ಯವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅನುಮತಿ ಪಡೆಯದೆ ದಿನದ ೨೪ ಗಂಟೆ ಜನರೇಟರ್ ಬಳಕೆಯಿಂದ ಕ್ರಷರ್ ನಡೆಸಿ ಕಲ್ಲು ಒಡೆಯುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜಮೀನುಗಳಲ್ಲಿರುವ ಬೆಳೆ ಹಾನಿಯಾಗಿ ಹಾಗೂ ದೂಳು ಮಡಹಳ್ಳಿ ಗ್ರಾಮದವರೆಗೂ ತಲುಪುತ್ತಿದ್ದು ಗಣಿ ಭೂ ವಿಜ್ಞಾನ ಇಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಲ್ಲುಪುಡಿ ಕಾರ್ಖಾನೆಯು ಗ್ರಾಮ ಪಂಚಾಯಿತಿಗೆ ಅನ್ಯಕ್ರಾಂತ ಆದೇಶ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಕ್ಷೆ, ಆದೇಶಗಳು ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಉಲ್ಲಂಘನೆಯಾಗಿದೆ. ಆದ್ದರಿಂದ ತಕ್ಷಣ ಕಾರ್ಖಾನೆ ಸ್ಥಗಿತಗೊಳಿಸಬೇಕು ಎಂದು ಗ್ರಾಪಂನಿಂದ ನೋಟಿಸ್ ನೀಡಿದ್ದರೂ ಕೆಲಸ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.
ನಿಯಮಾನುಸಾರ ಅನುಮತಿ ಹಾಗೂ ಕಟ್ಟಡ ಲೈಸೆನ್ಸ್ ಪಡೆದು ನಿರ್ಮಾಣ ಕಾರ್ಯ ಮಾಡಬೇಕು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತೊಮ್ಮೆ ನೋಟಿಸ್ ಕೂಡ ನೀಡಿದ್ದಾರೆ.
” ಅಕ್ರಮವಾಗಿ ಕ್ರಷರ್ ನಡೆಸುತ್ತಿದ್ದು ಯಾವುದೇ ದಾಖಲಾತಿ ಒದಗಿಸಿಲ್ಲ. ಗ್ರಾ.ಪಂ.ನಿಂದ ಅನುಮತಿ, ಇ-ಸ್ವತ್ತು, ಎನ್‌ಒಸಿ ಪಡೆಯದೆ ನಿಯಮ ಉಲ್ಲಂಘಿಸಿ ಕ್ರಷರ್ ನಡೆಸುತ್ತಿದ್ದು ಮೂರು ಬಾರಿ ನೋಟಿಸ್ ನೀಡಲಾಗಿದ್ದು ಮುಂದೆ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು.”
ಪ್ರಸಾದ್, ಮೂಕಹಳ್ಳಿ, ಪಿಡಿಒ, ಗ್ರಾಪಂ
” ಅಕ್ರಮವಾಗಿ ರಾಜಾರೋಷವಾಗಿ ಕ್ರಷರ್ ನಡೆಯುತ್ತಿದ್ದರೂ ಸಂಬಂಽಸಿದ ಇಲಾಖೆ ಮೌನ ವಹಿಸಿದೆ. ಅಲ್ಲದೆ, ಸುತ್ತುಗೋಡೆ ನಿರ್ಮಿಸದ ಕಾರಣ ದೂಳು ಅಕ್ಕಪಕ್ಕದ ಜಮೀನಿಗೆ ಬರುವುದರಿಂದ ಬೆಳೆ ನಾಶವಾಗುತ್ತಿದೆ. ಗ್ರಾಮಕ್ಕೂ ದೂಳು ಆವರಿಸುತ್ತಿದೆ. ಸಂಬಂಧಪಟ್ಟ ಅಽಕಾರಿಗಳು ಕ್ರಮ ವಹಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.”
ಜೀವನ್‌ಹೊನ್ನ, ಮಡಹಳ್ಳಿ ಗ್ರಾಮಸ್ಥ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…