ಜಿಲ್ಲೆಗಳು

ಸುರಕ್ಷಾ ನಮೂನೆ ಭರ್ತಿ ಮಾಡಿ : ಬಾಡಿಗೆದಾರರು ಕಡ್ಡಾಯವಾಗಿ ಮಾಹಿತಿ ನೀಡಿ

ಬಾಡಿಗೆದಾರರು, ಪಿಜಿಯಲ್ಲಿ ಇರುವವರು ನಿಯಮ ಪಾಲಿಸದಿದ್ದರೆ, ಮಾಲೀಕರೇ ಹೊಣೆ

ಮೈಸೂರು : ಬಾಡಿಗೆ ಮನೆ ಮತ್ತು ರೂಮ್‌ಗಳು, ಪಿಜಿಗಳಲ್ಲಿ ಇರುವವರು ತಮ್ಮ ಪೂರ್ವಾಪರ ಮಾಹಿತಿಯನ್ನು ಕಡ್ಡಾಯವಾಗಿ ಒಂದು ತಿಂಗಳೊಳಗೆ ಪೊಲೀಸರಿಗೆ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು.

ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಮೈಸೂರು ನಗರ ಪೊಲೀಸ್ ವೆಬ್‌ಸೈಟ್‌ನಲ್ಲಿ ಮತ್ತು ನಗರದ ಎಲ್ಲ ಠಾಣೆಗಳಲ್ಲಿ ಸುರಕ್ಷಾ ನಮೂನೆ-೧ ಸಿಗಲಿದೆ. ಇದನ್ನು ಪಡೆದುಕೊಂಡು ನಾವು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ಇದರ ಜೊತೆಗೆ ಬಾಡಿಗೆದಾರರ ಯಾವುದಾದರೂ ಒಂದು (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ) ಗುರುತಿನ ಚೀಟಿ ಜೆರಾಕ್ಸ್ ಅನ್ನು ಲಗತ್ತಿಸಬೇಕು. ಮುಂದಿನ ದಿನಗಳಲ್ಲಿ ಆನ್‌ಲೈನ್ ಅಲ್ಲಿಯೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಹೀಗೆ ನೀಡುವ ನಮೂನೆಗಳನ್ನು ಮತ್ತು ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲಿಸುವರು. ಇದಕ್ಕೆ ನಗರ ಪಾಲಿಕೆ ಅಧಿಕಾರಿಗಳ ಸಹಕಾರವನ್ನು ಕೇಳಿದ್ದೇವೆ. ಮಾಹಿತಿಯನ್ನು ನೀಡದೆ ಉದಾಸೀನ ಮಾಡಿದರೆ, ಮುಂದೆ ಯಾವುದೇ ಅನಾಹುತವಾದರೂ ಅದಕ್ಕೆ ಮಾಲೀಕರು ಮತ್ತು ಪಿಜಿ ನಡೆಸುವವರೇ ಹೊಣೆಯಾಗುತ್ತಾರೆ. ಬಾಡಿಗೆದಾರರು ನಕಲಿ ದಾಖಲೆಗಳನ್ನು ನೀಡುತ್ತಿದ್ದಾರೆ ಎಂಬ ಅನುಮಾನವಿದ್ದರೆ ಆಯಾ ಠಾಣೆ ಪೊಲೀಸರಿಗೆ ತಿಳಿಸಿ ಅನುಮಾನ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಮಾಲೀಕರ ಮೇಲೆ ಕ್ರಮ : ಹೋಟೆಲ್, ಲಾಡ್ಜ್, ಹೋಮ್‌ಸ್ಟೇಗಳಿಯೂ ಯಾವುದೇ ವ್ಯವಸ್ಥಿತವಾದ ದಾಖಲೆ ಇಲ್ಲದೆ, ಯಾರಿಗಾದರೂ ರೂಮ್‌ಗಳನ್ನು ನೀಡುವುದು, ಉಳಿದುಕೊಳ್ಳಲು ಅವಕಾಶ ನೀಡುವುದು ಮಾಡುವಂತಿಲ್ಲ. ನಮ್ಮ ಸಿಬ್ಬಂದಿಗಳು ನಿತ್ಯ ಪರಿಶೀಲನೆ ಮಾಡಲಿದ್ದು, ದಾಖಲೆ ಇಲ್ಲದೆ ಯಾರಿಗಾದರೂ ಉಳಿಯಲು ಅವಕಾಶ ನೀಡುವುದು ಕಂಡು ಬಂದಲ್ಲಿ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ಗಡಿಪಾರು ಮಾಡುತ್ತೇನೆ : ನಗರದ ಮೊಹಲ್ಲಾಗಳಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಲಿದ್ದು, ಸಾರ್ವಜನಿಕರು ಕೊಂದುಕೊರತೆಗಳನ್ನು ತಿಳಿಸಬಹುದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ರೌಡಿ ಶೀಟರ್‌ಗಳ ಪೆರೇಡ್ ಹೆಚ್ಚಿಸಲಾಗುವುದು. ಅವರಿಗೆ ತಿಳುವಳಿಕೆ ಹೇಳಲಾಗುವುದು. ಕೇಳದೆ ಅವರ ಚಟುವಟಿಕೆಯನ್ನು ಮುಂದುವರೆಸಿದರೆ ಗಡಿಪಾರು ಮಾಡುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ಪರಿಶೀಲನೆ : ನಗರಕ್ಕೆ ಪ್ರವೇಶಿಸುವ ೯ ಪಾಯಿಂಟ್‌ಗಳಲ್ಲಿ ಇನ್ ಅಂಡ್ ಔಟ್ ಆಗುವವರ ಬಗ್ಗೆ ನಮ್ಮ ಸಿಬ್ಬಂದಿ ಪರಿಶೀಲಿಸಿ, ವಿಳಾಸ ನಮೂದಿಸಿಕೊಳ್ಳುತ್ತಾರೆ. ನಗರದ ಒಳಗೆ ೨೩ ಪಾಯಿಂಟ್‌ಗಳನ್ನು ಮಾಡಿದ್ದು, ನಮ್ಮ ಸಿಬ್ಬಂದಿ ಅನುಮಾನಸ್ಪದವಾಗಿ ಕಂಡು ಬಂದವರನ್ನು ಪರಿಶೀಲಿಸುವರು. ನಗರ ಪಾಲಿಕೆಯಿಂದ ರಾತ್ರಿ ೧೧ ಗಂಟೆಯ ನಂತರವೂ ತೆರೆದಿರಬಹುದಾದ ಅಂಗಡಿಗಳನ್ನು ಬಿಟ್ಟು, ಉಳಿದ ಎಲ್ಲ ಅಂಗಡಿಗಳು ರಾತ್ರಿ ೧೧ಗಂಟೆಯ ಹೊತ್ತಿಗೆ ಮುಚ್ಚಬೇಕು. ಇಲ್ಲವಾದರೆ, ಕ್ರಮ ಕೈಗೊಳ್ಳಲು ಎಲ್ಲ ಠಾಣೆಯ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಹೊಸ ಪಾರ್ಕಿಂಗ್ ವ್ಯವಸ್ಥೆ : ವಾಹನ ದಟ್ಟಣೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ, ಸಂಚಾರ ವಿಭಾಗದ ಎಸಿಪಿ ಅವರಿಗೆ ಹೇಗೆ ಮಾಡಬಹುದು ಎಂದು ಪ್ರಸ್ತಾವನೆ ನೀಡಲು ಹೇಳಿದ್ದೇನೆ. ಇದನ್ನು ನೋಡಿ ಆ ನಂತರ ಯೋಜನೆ ಕೈಗೊಳ್ಳುತ್ತೇನೆ ಎಂದರು.

ನಾನು ಕೂಡ ಮ.೧೨.೩೦ರಿಂದ ಸಂಜೆ ೬ಗಂಟೆಯವರೆಗೂ ಸಾರ್ವಜನಿಕರ ಭೇಟಿಗೆ ಸಿಗಲಿದ್ದು, ಏನಾದರೂ ದೂರುಗಳು ಇದ್ದರೆ ಬಂದು ತಿಳಿಸಬಹುದು. ಎಲ್ಲಾ ಠಾಣೆ ಪಿಐ ದಿನನಿತ್ಯ ಎರಡು ಗಂಟೆ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆ ಆಲಿಸಲು ಸಮಯ ನಿಗದಿ ಮಾಡಿಕೊಳ್ಳಲು, ಜನಸ್ನೇಹಿಯಾಗಿರು ಹೇಳಿದ್ದೇನೆ. ಮಂಗಳೂರು ಕುಕ್ಕರ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರೇ ಇಲ್ಲಿಯೂ ತನಿಖೆ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಸಹಕಾರವನ್ನು ಅಷ್ಟೇ ನಾವು ನೀಡಿದ್ದೇವೆ. ಹಾಗಾಗಿ, ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತರು, ಮೈಸೂರು.

andolana

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

1 hour ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

1 hour ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

1 hour ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

1 hour ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

2 hours ago