ಜಿಲ್ಲೆಗಳು

‘ಭಾವ ಮತ್ತು ಜ್ಞಾನ ಸಂಪನ್ಮೂಲ ಭಾಷೆ’ :ಪ್ರೊ.ಎಂ.ಕೃಷ್ಣೇಗೌಡ

ಮೈಸೂರು : ‘ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ಭಾವ ಮತ್ತು ಜ್ಞಾನ ಸಂಪನ್ಮೂಲ’ ಎಂದು ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪ್ರಪಂಚದ ಎಲ್ಲಿಯೂ ಭಾಷೆಯ ಹಬ್ಬವನ್ನು ಇಷ್ಟು ಸಡಗರದಿಂದ, ದೊಡ್ಡ ಮಟ್ಟದಲ್ಲಿ ಕನ್ನಡಿಗರನ್ನು ಬಿಟ್ಟರೇ ಮತ್ಯಾರೂ ಆಚರಿಸುವುದಿಲ್ಲ. ನಾಡಿನ ಭಾಷೆ, ನೆಲ, ಜಲ, ಸಾಂಸ್ಕೃತಿ, ಆಚಾರ-ವಿಚಾರ ಎಲ್ಲವನ್ನು ಒಳಗೊಂಡಂತೆ ಕನ್ನಡ ನಾಡು ಸಮೃದ್ಧವಾಗಿ ಇರಬೇಕು ಎಂಬುದೇ ಕನ್ನಡ ರಾಜ್ಯೋತ್ಸವ ಆಚರಣೆಯ ಉದ್ದೇಶ’ ಎಂದರು.

‘ಜಗತ್ತಿನ ಎಲ್ಲ ಭಾಷೆಗಳನ್ನು ಪ್ರೀತಿಸುವುದನ್ನು ಕನ್ನಡಿಗರಿಂದ ನೋಡಿ ಕಲಿಯಬೇಕು. ಹಾಗೆಯೇ, ತಮ್ಮ ತಮ್ಮ ಭಾಷೆಯನ್ನು ಹೇಗೆ, ಎಷ್ಟು ಪ್ರೀತ್ರಿಸಬೇಕು ಎಂಬುದನ್ನು ಕನ್ನಡಿಗರು ಬೇರೆ ಬೇರೆ ಭಾಷೆಯವರನ್ನು ನೋಡಿ ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಕಣಕಾರ, ಲೇಖಕ ಶ್ರೀವತ್ಸ ಜೋಶಿ, ‘ಮಾತೃ ಭಾಷೆ ಎಂಬುದು ತಾಯಿಯಿದ್ದಂತೆ. ಮಗುವಿನ ಲಾಲನೆ-ಪಾಲನೆಯಲ್ಲಿ ತಾಯಿಯ ಪಾತ್ರಯಿರುವಂತೆ, ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನದಲ್ಲಿ ಭಾಷೆಯ ಪಾತ್ರ ಸಾಕಷ್ಟು ಇದೆ’ ಎಂದರು.

ಕನ್ನಡದಲ್ಲಿ ಕಲಿತವರಿಗೆ ಕನ್ನಡದ ಬಗ್ಗೆ ಕೀಳರಿಮೆ ಇದೆ. ಇದನ್ನು ಬಿಡಬೇಕು. ಕನ್ನಡ ಅಳಿವಿನಲ್ಲಿ ಇದೆ ಎಂಬ ಮಾತುಗಳಿಗೆ ಆಸ್ಪಾದ ನೀಡದಂತೆ ಕನ್ನಡವನ್ನು ಉಳಿಸುವ, ಬಳಸುವ ಮತ್ತು ಬದುಕುವ ಕಿಚ್ಚನ್ನು ಇಟ್ಟುಕೊಳ್ಳಬೇಕು ಎಂದರು.

‘ಹಚ್ಚೋಣ ಕನ್ನಡದ ದೀಪ ಎಂದು ಹಾಡುತ್ತೇವೆ. ಕೊಚ್ಚೋಣ ಕನ್ನಡದ ಶೇಫಾ ಎಂಬಂತೆ ಆಗಬಾರದು. ಕನ್ನಡ ನಮಗೆ ವಿಶೇಷ ಗೌರವ ನೀಡಿದೆ. ಆ ಭಾಷೆಯನ್ನು ಅಗೌರವ ತೋರುವ ರೀತಿ ಭಾಷೆಯನ್ನು ಬಳಸಬಾರದು’ಎಂದು ಕಿವಿಮಾತು ಹೇಳಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ಗಣ್ಯರು ಬಹುಮಾನ ವಿತರಿಸಿದರು. ಭಾಷಾವಾರು ರಾಜ್ಯಗಳ ಹಿನ್ನೆಲೆ, ಉದ್ದೇಶ, ಇದಕ್ಕಾಗಿ ನಡೆದ ಹೋರಾಟಗಳ ಬಗ್ಗೆ ತಿಳಿಸಿಕೊಟ್ಟ ಪ್ರೊ.ಎಂ.ಕೃಷ್ಣೇಗೌಡರು ಕವಿ ಹುಯಿಲಗೋಳ ನಾರಾಯಣ ಅವರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಹಾಡಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.

ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ.ಡಾ.ಬರ್ನಾರ್ಡ್ ಪ್ರಕಾಶ್ ಬಾರ್ನಿಸ್, ಕಾಲೇಜಿನ ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ್ಹಾ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಟಿ.ಸದೆಬೋಸ್ ಇದ್ದರು.

ಪೋಟೋ : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಶ್ರೀವತ್ಸ ಜೋಶಿ ಉದ್ಘಾಟಿಸಿದರು. ಪ್ರೊ.ಎಂ.ಕೃಷ್ಣೇಗೌಡ ಇತರರು ಇದ್ದರು.

ಪೋಟೋ ಬರಲಿದೆ))

 

 

 

 

 

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

16 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

16 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

18 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

20 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

23 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

23 hours ago