ಜಿಲ್ಲೆಗಳು

ಶೀಘ್ರ ದೇವನೂರು ಕೆರೆ ಅಭಿವೃದ್ಧಿ ಕಾರ್ಯ ಶುರು

ಅಂತಿಮ  ಹಂತದಲ್ಲಿ ತಾಂತ್ರಿಕ ಬಿಡ್‌ ಗೆ ಅನುಮೋದನೆ ; ಮೂವರ ತಂಡದಿಂದ ಸರ್ವೇ 

– ದೇವನೂರು ಕೆರೆ ಅಭಿವೃದ್ಧಿ ಕುರಿತಂತೆ ಆಂದೋಲನ ದಿನಪತ್ರಿಕೆ ಮಾ.೨೨ರಿಂದ ೧೦ ದಿನಗಳ ಕಾಲ ಅಭಿಯಾನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು

ಮೈಸೂರು: ಅವಸಾನದ ಅಂಚಿಗೆ ತಲುಪಿರುವ ದೇವನೂರು ಕೆರೆಗೆ ಕಾಯಕಲ್ಪ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಮುಂದಾಗಿದ್ದು, ಮುಂದಿನ ೨೦ ದಿನಗಳಲ್ಲಿ ದೇವನೂರು ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.

೨೦೨೨-೨೩ನೇ ಸಾಲಿನ ಮುಡಾ ಆಯವ್ಯಯದಲ್ಲಿ ದೇವನೂರು ಕೆರೆ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಅದರಂತೆ, ಆರ್ಥಿಕ ಅನುಮತಿ ದೊರೆತು ತಾಂತ್ರಿಕ ಬಿಡ್‌ಗೆ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ದೊರೆಯುತ್ತಿದ್ದಂತೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ತೀರ್ಮಾನಿಸಿರುವುದರಿಂದ ಜನರ ಬಹು ದಿನಗಳ ಬೇಡಿಕೆ ಈಡೇರುವ ದಿನಗಳು ಸಮೀಪಿಸುತ್ತಿದೆ.

ಸರ್ವೇ ಕಾರ್ಯ: ದೇವನೂರು ಕೆರೆಯು ೧೨.೩೭ ಎಕರೆ ವಿಸ್ತೀರ್ಣಹೊಂದಿದ್ದು, ಕೆರೆಯ ಎಡ ಮತ್ತು ಬಲ ಭಾಗದಲ್ಲಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಮುಡಾ ಸರ್ವೇಯರ್ ಕಾವೇರಿ ಗೌಡ, ರವಿ, ಮಧುಸೂದನ್ ಎಂಬವರು ಮಂಗಳವಾರದಿಂದ ಸರ್ವೇ ಕಾರ್ಯ ಆರಂಭಿಸಿದರು. ಕೆರೆಯ ಸುತ್ತಲೂ ಸರ್ವೇ ಮಾಡಿ ಬೌಂಡರಿ ನಿಗದಿಪಡಿಸುವ ಜತೆಗೆ ತಂತಿಬೇಲಿಯನ್ನು ಹಾಕಲಾಗುತ್ತದೆ. ಕೆರೆ ಅಂಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳ ಪಟ್ಟಿಯನ್ನು ಮಾಡಿದ ಮೇಲೆ ತೆರವುಗೊಳಿಸಲು ನೋಟಿಸ್ ನೀಡಲಾಗುತ್ತದೆ. ನಗರಪಾಲಿಕೆ ವತಿಯಿಂದ ಖಾತೆ ಮಾಡಿಕೊಟ್ಟಿರುವುದರಲ್ಲದೆ, ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ, ಮುಡಾದಿಂದ ಶೋಕಾಸ್ ನೋಟಿಸ್ ನೀಡಿದ ಮೇಲೆ ತೆರವು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಹೇಳಿದರು.

ಮುಡಾದಿಂದ ಒಂದು ಬಾರಿ ಸರ್ವೇ ನಡೆಸಿದ ನಂತರ ಸ.ನಂ. ೧೨೪, ೧೨೫, ೧೦೮ ಮತ್ತು ೧೦೯ರ ಪೈಕಿ ಅನಧಿಕೃತವಾಗಿ ೩ ಖಾಸಗಿ ಬಡಾವಣೆಗಳು ತಲೆ ಎತ್ತಿರುವುದಲ್ಲದೆ, ೨೧ ಮನೆಗಳು ತಲೆ ಎತ್ತಿವೆ. ಇವುಗಳನ್ನು ತೆರವುಗೊಳಿಸುವುದಕ್ಕೆ ಬೇಕಾದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಎಸ್‌ಟಿಪಿ ಪ್ಲಾಂಟ್: ಕೆರೆ ಅಭಿವೃದ್ಧಿಪಡಿಸುವ ಜೊತೆಗೆ ಕಲುಷಿತ ನೀರು ಸಂಸ್ಕರಿಸಿ ಮಳೆ ನೀರು ಚರಂಡಿ ನೀರಿನೊಂದಿಗೆ ಹೋಗಲು ಎಸ್‌ಟಿಪಿ ಪ್ಲಾಂಟ್ ಅಳವಡಿಸಲಾಗುತ್ತದೆ. ಕೆರೆಯಲ್ಲಿ ಬೆಳೆದಿರುವ ಗಿಡಗಳು, ಬಂಡ್‌ಗಳನ್ನು ಕ್ಲೀನ್ ಮಾಡಿ ಶುದ್ಧ ನೀರು ನಿಲ್ಲುವಂತೆ ಮಾಡಲಾಗುತ್ತದೆ. ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಮತ್ತೊಂದು ಮಾರ್ಗದ ಮೂಲಕ ಹೋಗಲು ಪ್ರತ್ಯೇಕವಾಗಿ ಪೈಪ್‌ಲೇನ್ ಹಾಕುವುದಕ್ಕೆ ವಿನ್ಯಾಸ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

andolanait

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

6 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

7 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

8 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

8 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

11 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

12 hours ago