ಚಾಮರಾಜನಗರ

ತಂಬೂರಿ ಕಲಾವಿದ ಕೆ.ಬಿ.ರಾಚಯ್ಯ ಈ ಮಣ್ಣಿನ ವರಪ್ರಸಾದ: ವೆಂಕಟೇಶ್‌ ಬಣ್ಣನೆ

ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಇಂದವಾಡಿ ವೆಂಕಟೇಶ್ ಅಭಿಪ್ರಾಯ

ಗುಂಡ್ಲುಪೇಟೆ: ಜನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಯಾವತ್ತೂ ಸಾವಿಲ್ಲ, ನಾಡಿನಾದ್ಯoತ ತಮ್ಮ ಕಲೆಯನ್ನು ಪಸರಿಸಿರುವ ತಂಬೂರಿ ಕಲಾವಿದ ಕೆ.ಬಿ.ರಾಚಯ್ಯ ಈ ಮಣ್ಣಿನ ವರಪ್ರಸಾದ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊ.ಇಂದುವಾಡಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಚಪ್ಪಾಜಿ ಜಾನಪದ ಕಲಾಸಂಘದ ವತಿಯಿಂದ ಆಕಾಶವಾಣಿ ‘ಎ’ ಗ್ರೇಡ್ ತಂಬೂರಿ ಕಲಾವಿದರಾದ ದಿ.ಕೆ.ಬಿ. ರಾಚಯ್ಯ ಅವರ 25ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಈ ಮಣ್ಣಿನ ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವ ಜನಪದ ಕಲಾವಿದರು ನಾಡಿನಾದ್ಯಂತ ಪಸರಿಸಬೇಕು. ಆಕಾಶವಾಣಿ ಎ ಗ್ರೇಡ್ ತಂಬೂರಿ ಹಿರಿಯ ಕಲಾವಿದರಾದ ದಿವಂಗತ ಕೆ.ಬಿ. ರಾಚಯ್ಯನವರಂತೆ ಅವರ ಮಗನಾದ ಸಿದ್ದರಾಜು ಕೂಡ ತಂಬೂರಿ ಕಲಾವಿದರಾಗಿ ಮುಂದುವರಿಯುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದು ಹೇಳಿದರು.

ಈ ನೆಲದ ಮಣ್ಣಿನ ಸೊಗಡೇ ಹಾಗೇ, ಜನಪದವನ್ನು ಉತ್ತಿ ಬೆಳೆಸಿ, ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದ ಭರಾಟೆಯಲ್ಲಿಯೂ ಜನಪದ ಕಲೆಯನ್ನು ಉಳಿಸಿ ಬೆಳೆಸುವಂತಹ ಕೆಲಸ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.

ಜಾನಪದ ಅಕಾಡೆಮಿ ಸದಸ್ಯ ಉಮೇಶ್ ಮಾತನಾಡಿ, ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ ಸ್ವಾಮಿ ನೆಲೆ ನಿಂತಿರುವ ನಾಡು ಚಾಮರಾಜನಗರ, ಮಂಡ್ಯ, ಮೈಸೂರು ಈ ನೆಲವು ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿ ರಾಷ್ಟ್ರದ್ಯoತ ಈ ನಾಡಿನ ಕಲೆ, ಸಂಸ್ಕೃತಿಯನ್ನು ಪಸರಿಸಿದೆ ಎಂದರು.

 

ಕಾರ್ಯಕ್ರಮದಲ್ಲಿ  ಚಿಕ್ಕಲ್ಲೂರು ಕ್ಷೇತ್ರದ ಭಾರತ್ ಪ್ರಭುರಾಜೇ ಅರಸು ಸ್ವಾಮೀಜಿ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೊಳ್ಳೇಗಾಲ ಉಪಖಜಾನಾಧಿಕಾರಿ ಪಿ.ನಾಗರತ್ನಮ್ಮ, ಬೆಂಗಳೂರಿನ ಜಾನಪದ ಸಿರಿ ಚಾನೆಲ್ ನ ಕಾಂತರಾಜು, ಜಾನಪದ ಅಕಾಡೆಮಿ ಸದಸ್ಯರಾದ ಉಮೇಶ್, ಸಮಾಜ ಸೇವಕ ಗಿರೀಶ್ ಬಾಬು, ಸರ್ಕಾರಿ ವೈದ್ಯಾಧಿಕಾರಿ ಸಿ.ಮಹೇಶ್, ಹಸಗೂಲಿ ಸಿದ್ದಯ್ಯ, ಗಾಯಕ ಆರ್. ರವಿಕುಮಾರ್, ರಾಚಪ್ಪಾಜಿ ಜಾನಪದ ಕಲಾ ಸಂಘದ ಅಧ್ಯಕ್ಷರಾದ ಆರ್. ಸಿದ್ದರಾಜು, ಕಾರ್ಯದರ್ಶಿ ಬಾಚಹಳ್ಳಿ ಸೋಮಣ್ಣ, ವಕೀಲರಾದ ಸಿದ್ದಯ್ಯ, ಸಿದ್ದೇಶ್, ಸುಭಾಸ್ ಮಾಡ್ರಹಳ್ಳಿ, ಸಾಹಿತಿ ಕಾಳಿಂಗಸ್ವಾಮಿ, ಉಪನ್ಯಾಸಕಿ ಎಸ್. ಶೃತಿ, ಸುರೇಶ ಕಂದೇಗಾಲ, ಎಸ್. ಬಿ. ನಾಗರಾಜ್, ತಂಬೂರಿ ಕಲಾವಿದರಾದ ಚಿಕ್ಕರಂಗಶೆಟ್ಟಿ, ಮಹಾದೇವಯ್ಯ, ಸೋಬಾನೆ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸನ್ಮಾನಿತರು…

ರಾಜ್ಯ ಪ್ರಶಸ್ತಿ ವಿಜೇತರಾದ ದೊಡ್ಡ ಗವಿಬಸಪ್ಪ, ತಂಬೂರಿ ಕಲಾವಿದರಾದ ಸಿದ್ದರಾಜು, ಸಿದ್ದಶೆಟ್ಟಿ, ನಾಗಯ್ಯ, ಸಿದ್ದರಾಜು, ಸಿದ್ದಯ್ಯ, ಗುರುಸಿದ್ಧಯ್ಯ, ಮಹದೇವನಾಯಕ, ಸಿದ್ದರಾಜು, ರಘು, ಕೈಲಾಸಮೂರ್ತಿ, ಶಿವಕುಮಾರ್, ಶ್ರೀನಿವಾಸ, ಮಾದಯ್ಯ, ಹರಳುಕೂಟಯ್ಯ,  ಬಸವರಾಜು,  ಸೋಬಾನೆ ಕಲಾವಿದರಾದ ದೊಡ್ಡಮ್ಮ, ಬೆಳ್ಳಮ್ಮ, ವೆಂಕಟಮ್ಮ, ಲಕ್ಷ್ಮಮ್ಮ, ರಾಜಮ್ಮ ಅವರನ್ನು ಸನ್ಮಾನಿಸಲಾಯಿತು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

3 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

4 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

5 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

5 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

5 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

8 hours ago