ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ಮಾರ್ಚ್ 6 ರಿಂದ 11 ರವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬರೋಬ್ಬರಿ 3.24 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ವಿಶೇಷವೆಂದರೆ ಈ ಹಣ ಹುಂಡಿ ಕಾಣಿಕೆ ಮತ್ತು ವಸತಿ ವ್ಯವಸ್ಥೆಯ ಶುಲ್ಕದಿಂದ ಗಳಿಸಿದ ಹಣವನ್ನು ಹೊರತುಪಡಿಸಿದ ಆದಾಯವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ದೇಗುಲದ ಆಡಳಿತ ಮಂಡಳಿಯು ಎಲ್ಲಾ ರೀತಿಯ ಉತ್ಸವಗಳು, ಸೇವೆಗಳು, ಲಡ್ಡು ಪ್ರಸಾದ ಮಾರಾಟ ಮತ್ತು ಇತರ ಪ್ರಸಾದ, ವಿಶೇಷ ದರ್ಶನ ಟಿಕೆಟ್‌ಗಳು, ಬ್ಯಾಗ್‌ಗಳು, ಸ್ಟಾಲ್ ಒಪ್ಪಂದಗಳು ಮತ್ತು ಇತರ ಎಲ್ಲಾ ಆದಾಯದ ಮೂಲಗಳನ್ನು ಗಣನೆಗೆ ತೆಗೆದುಕೊಂಡಿದೆ.
ಆರು ದಿನಗಳಲ್ಲಿ ಲಡ್ಡು ಮಾರಾಟದ ಮೂಲಕ 1.13 ಕೋಟಿ ರೂ., ಚಿನ್ನದ ರಥದ ಸೇವೆಯಿಂದ 90.25 ಲಕ್ಷ ರೂ., ವಿಶೇಷ ದರ್ಶನ ಟಿಕೆಟ್‌ನಿಂದ 67.70 ಲಕ್ಷ ರೂ., ಪ್ರಸಾದ ಮಾರಾಟದಿಂದ 11.93 ಲಕ್ಷ ರೂ., ಸ್ಟಾಲ್ ಒಪ್ಪಂದದ ಮೂಲಕ 10.52 ಲಕ್ಷ ರೂ. ಆದಾಯ ಬಂದಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಆರು ದಿನಗಳ ಪೈಕಿ ಮಾರ್ಚ್ 6 ರಂದು 40.17 ಲಕ್ಷ ರೂ., ಮಾರ್ಚ್ 7 ರಂದು 30.21 ಲಕ್ಷ ರೂ., ಮಾರ್ಚ್ 8 ರಂದು 70.85 ಲಕ್ಷ ರೂ., ಮಾರ್ಚ್ 9 ರಂದು 62.78 ಲಕ್ಷ ರೂ., ಮಾರ್ಚ್ 10 ರಂದು 87.92 ಲಕ್ಷ ರೂ. ಮತ್ತು ಮಾರ್ಚ್ 11 ರಂದು 32.21 ಲಕ್ಷ ರೂ. ಆದಾಯ ಸಂಗ್ರವಾಗಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…
ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್ ನೀರನ್ನು 3 ಸಾವಿರ…
ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…
ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…
ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…
ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…