ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಸರಣಿ ಕಳ್ಳತನದಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗ್ರಾಮದ ಹಲವು ಜಮೀನುಗಳಲ್ಲಿ ಹತ್ತಕ್ಕೂ ಹೆಚ್ಚು ಮೋಟಾರ್ಗಳ ಕೇಬಲ್ಗಳನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ಒಟ್ಟು 500 ಮೀಟರ್ಗೂ ಹೆಚ್ಚು ಕೇಬಲ್ ಕಳುವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಜಮೀನಿನಲ್ಲಿದ್ದ ಮನೆಯೊಂದರ ಬಾಗಿಲು ಮುರಿದ ಕಳ್ಳರು, ಒಳಗಿದ್ದ ಕೇಬಲ್ ತಂತಿ ಹಾಗೂ ಸುಮಾರು ಐದರಿಂದ ಆರು ಸಾವಿರ ರೂಪಾಯಿ ನಗದನ್ನೂ ಕದ್ದೊಯ್ದಿದ್ದಾರೆ ಎಂದು ರೈತರು ಹೇಳಿದ್ದಾರೆ.
ಬರಗಾಲದಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಈಗ ಮೋಟಾರ್ ಕೇಬಲ್ಗಳೂ ಕಳವಾಗಿರುವುದರಿಂದ ಬೆಳೆಗಳಿಗೆ ನೀರು ಹಾಯಿಸುವುದು ಮತ್ತಷ್ಟು ಕಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜಮೀನುಗಳಲ್ಲಿ ಕೇಬಲ್ ಕಳ್ಳತನ ಹೆಚ್ಚುತ್ತಿದ್ದರೂ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಹಸಗೂಲಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು: ಅರಮನೆ ಸಮೀಪದ ಚಾಮರಾಜ ವೃತ್ತದ ಬಳಿ ಸ್ಕೂಟರ್ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ…
ಕೆ.ಆರ್.ನಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ 25 ವರ್ಷದ ಸುಶ್ಮಿತಾ ಹಾಗೂ ಅವರ ನವಜಾತ ಶಿಶು…
ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ವಹಿವಾಟು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೈಬರ್ ವಂಚನೆಗಳೂ ಹೆಚ್ಚುತ್ತಿವೆ.…
ವರ್ಷಕ್ಕೊಮ್ಮೆ ಅವಕಾಶ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಮಧ್ಯೆ ಹಾಸನ ಜಿಲ್ಲಾಡಳಿತ ಮತ್ತು ದೇವಾಲಯದ…
ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ನಾಡಧ್ವಜಕ್ಕೆ ಇದುವರೆಗೂ ಅಧಿಕೃತ ಸ್ಥಾನಮಾನ ದೊರೆಯದಿರುವುದು ನೋವಿನ ಸಂಗತಿಯಾಗಿದೆ. ವಿವಿಧ ರಾಜ್ಯಗಳಲ್ಲಿ ಅಲ್ಲಿನ ಧ್ವಜಗಳಿಗೆ…
ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ನಡೆಯುತ್ತಿದ್ದು, ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ…