Andolana originals

ಓದುಗರ ಪತ್ರ: ಡಿಜಿಟಲ್ ವಂಚನೆ: ಸುಪ್ರೀಂ ಆದೇಶ ಸ್ವಾಗತಾರ್ಹ

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಹಿವಾಟು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೈಬರ್ ವಂಚನೆಗಳೂ ಹೆಚ್ಚುತ್ತಿವೆ.

ಸಾಮಾನ್ಯ ಜನರು ತಮ್ಮ ಸಂಪಾದನೆಯ ಹಣವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತಿzರೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ಗಳ ಹೊಣೆಗಾರಿಕೆಯನ್ನು ಒತ್ತಿಹೇಳಿರುವ ಸುಪ್ರೀಂ ಕೋರ್ಟ್ ನಿಲುವು ಸ್ವಾಗತಾರ್ಹವಾಗಿದೆ.

ಬ್ಯಾಂಕ್‌ಗಳು ಗ್ರಾಹಕರ ಹಣದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣ ಪತ್ತೆಹಚ್ಚುವ ವ್ಯವಸ್ಥೆಮ ರೂಪಿಸಬೇಕು. ವಂಚನೆ ಸಂಭವಿಸಿದಾಗ ಸಂತ್ರಸ್ತರಿಗೆ ನೆರವು ನೀಡುವಲ್ಲಿ ವಿಳಂಬ ಮಾಡಬಾರದು. ಡಿಜಿಟಲ್ ವಂಚನೆಗೆ ಒಳಗಾದ ಗ್ರಾಹಕರ ಮೇಲೆಯೇ ಸಂಪೂರ್ಣ ಹೊಣೆ ಹೊರಿಸುವುದು ನ್ಯಾಯಸಮ್ಮತವಲ್ಲ. ಬ್ಯಾಂಕ್‌ಗಳ ಭದ್ರತಾ ಲೋಪ ಅಥವಾ ನಿರ್ಲಕ್ಷ್ಯವಿದ್ದರೆ ಅವುಗಳೂ ಹೊಣೆ ಹೊರಬೇಕು. ಜೊತೆಗೆ ಗ್ರಾಹಕರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸುವ ಕೆಲಸವೂ ನಡೆಯಬೇಕು ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ನಿಲುವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ವಿಶ್ವಾಸವನ್ನು ಬಲಪಡಿಸುವಂತಾಗಿದೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದರ ಇಳಿಸಿದ ಸಚಿವರ ನಡೆ ಶ್ಲಾಘನೀಯ

ವರ್ಷಕ್ಕೊಮ್ಮೆ ಅವಕಾಶ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಮಧ್ಯೆ ಹಾಸನ ಜಿಲ್ಲಾಡಳಿತ ಮತ್ತು ದೇವಾಲಯದ…

40 mins ago

ಓದುಗರ ಪತ್ರ: ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ಸಿಗಲಿ

ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ನಾಡಧ್ವಜಕ್ಕೆ ಇದುವರೆಗೂ ಅಧಿಕೃತ ಸ್ಥಾನಮಾನ ದೊರೆಯದಿರುವುದು ನೋವಿನ ಸಂಗತಿಯಾಗಿದೆ. ವಿವಿಧ ರಾಜ್ಯಗಳಲ್ಲಿ ಅಲ್ಲಿನ ಧ್ವಜಗಳಿಗೆ…

43 mins ago

ಓದುಗರ ಪತ್ರ: ಸೂಚನಾ ಫಲಕ, ಬೀದಿ ದೀಪ ಅಳವಡಿಸಿ

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ನಡೆಯುತ್ತಿದ್ದು, ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ…

45 mins ago

ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ…

47 mins ago

ಯುವನಿಧಿ: ನಿರುದ್ಯೋಗಿಗಳ ಖಾತೆಗೆ 47 ಕೋಟಿ ರೂ

ಕೇಶವ್ ಎಂ. ಮೈಸೂರು ಜಿಲ್ಲೆಯಲ್ಲಿ ಪದವಿ ೧೯,೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ ಮೈಸೂರು:…

58 mins ago

ಕನ್ನಡ ಸಾಂಸ್ಕೃತಿಕ ತೇರಾದ ಕೆಎಸ್‌ಆರ್‌ಟಿಸಿ ಬಸ್!

ಭೇರ್ಯ ಮಹೇಶ್ ಕೆ.ಆರ್.ನಗರ: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಸ್ವಂತ ಖರ್ಚಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಮದುವಣಿಗಿತ್ತಿಯಂತೆ ಶೃಂಗರಿಸಿ, ಕನ್ನಡದ…

1 hour ago