ಭೇರ್ಯ ಮಹೇಶ್
ಕೆ.ಆರ್.ನಗರ: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಸ್ವಂತ ಖರ್ಚಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಮದುವಣಿಗಿತ್ತಿಯಂತೆ ಶೃಂಗರಿಸಿ, ಕನ್ನಡದ ಮೆರಗನ್ನು ಹೆಚ್ಚಿಸುತ್ತಿರುವ ಕೆ.ಆರ್.ನಗರ ಬಸ್ ಘಟಕದ ಚಾಲಕನಾಗೇಶ್ ತಮ್ಮ ಬಸ್ಸುಗಳನ್ನು ಕೇವಲ ವಾಹನವಾಗಿ ನೋಡದೆ, ಕನ್ನಡದ ಸಾಂಸ್ಕ ತಿಕ ತೇರಾಗಿ ಬದಲಾಯಿಸುವ ಮೂಲಕ ಪ್ರಯಾಣಿಕರ ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.
ವಿಶೇಷ ಶೃಂಗಾರ: ಬಸ್ಸಿನ ಮುಂಭಾಗದಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿಯ ಭವ್ಯ ಭಾವಚಿತ್ರ ಅಥವಾ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹಳದಿ ಮತ್ತು ಕೆಂಪು ಬಣ್ಣದ ಹೂವಿನ ಹಾರಗಳು ಹಾಗೂ ಬಲೂನ್ ಗಳಿಂದ ಇಡೀ ಬಸ್ಸನ್ನು ಸೃಜನಾತ್ಮಕವಾಗಿ ಅಲಂಕರಿದ್ದಾರೆ.
ಬಸ್ಸಿನ ಒಳಗೆ ಮತ್ತು ಹೊರಗೆ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರ ಸ್ಕ ತರು, ಪ್ರಮುಖ ಕವಿಗಳು, ಸಾಹಿತಿಗಳು, ನಾಡಿನ ಮಹನೀಯರು ಹಾಗೂ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಅಳವಡಿಸಿ ಚಲಿಸುವ ವಸ್ತು ಸಂಗ್ರಹಾಲಯದಂತೆ ಮಾಡಿದ್ದಾರೆ ಚಾಲಕ ನಾಗೇಶ್. ಬಸ್ಸಿನ ಒಳಗಿನ ಸೀಟುಗಳಿಗೆ ಕರ್ನಾಟಕ ಧ್ವಜವನ್ನು ನೆನಪಿಸುವ ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಹೊದಿಸಿ ಇಡೀ ಬಸ್ಸಿನೊಳಗಿನ ವಾತಾವರಣವನ್ನು ಕನ್ನಡದ ಸೊಬಗನ್ನು ಸೂಚಿಸುವ ಕನ್ನಡಮಯ ಮಾಡಿದ್ದಾರೆ.
ಸ್ವಂತ ಖರ್ಚಿನ ಸೇವೆ: ಇಲಾಖೆಯಿಂದ ಯಾವುದೇ ವಿಶೇಷ ಧನಸಹಾಯ ನಿರೀಕ್ಷಿಸದೆ, ಚಾಲಕ ನಾಗೇಶ್ ಮತ್ತು ನಿರ್ವಾಹಕ ಶಿವನಂಜು ತಮ್ಮ ಸ್ವಂತ ಹಣದಿಂದಲೇ ಈ ಅಲಂಕಾರದ ವೆಚ್ಚವನ್ನು ಭರಿಸಿ ತಮ್ಮ ನಾಡು-ನುಡಿಯ ಮೇಲಿರುವ ಭಕ್ತಿಯನ್ನು ಮೆರೆದಿದ್ದು ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬಸ್ ಡಿಪೋ ವ್ಯವಸ್ಥಾಪಕ ಎ.ಡಿ. ಕುಮಾರ್, ಸಹಾಯಕ ಸಂಚಾರ ಅಧೀಕ್ಷಕಿ ರಾಜೇಶ್ವರಿ, ಸಹಾಯಕ ಸಂಚಾರ ನಿರೀಕ್ಷಕ ಎಂ.ಸುರೇಶ್ ಅವರು ಬಸ್ ಚಾಲಕ ನಾಗೇಶ್, ನಿರ್ವಾಹಕ ಶಿವನಂಜು ಅವರನ್ನು ಅಭಿನಂದಿಸಿದ್ದಾರೆ.
ಕೇಶವ್ ಎಂ. ಮೈಸೂರು ಜಿಲ್ಲೆಯಲ್ಲಿ ಪದವಿ ೧೯,೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ ಮೈಸೂರು:…
ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಬಿ.ಕೆ.…
ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ದಿನ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ…
ಬರ್ಲಿನ್: ಜರ್ಮನಿಯ ಪ್ರಮುಖ ವಾಣಿಜ್ಯ ನಗರ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನೀಡಿರುವ ವರದಿಯ ಪ್ರಕಾರ, ದುಷ್ಕರ್ಮಿಗಳು…
ಬೆಂಗಳೂರು: ಅರ್ನಬ್ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ‘ಮುರುಸು’ ಚಂಡಮಾರುತದ ಪರಿಣಾಮ, ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ…