ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು : ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ರಾಮಾಪುರ ಸಮೀಪದ ಅಪ್ಪಿ ಕುಳಿ ಬಳಿ ಗುರುವಾರ ತಡರಾತ್ರಿ ಜರುಗಿದೆ.
ರಾಮಾಪುರ ಗ್ರಾಮದ ಕಂದ ಎಂಬ ರೈತನೇ ಹಸು ಕಳೆದುಕೊಂಡ ರೈತನಾಗಿದ್ದಾರೆ.
ಘಟನೆ ವಿವರ: ರಾಮಾಪುರ ಭಾಗದಲ್ಲಿ ಹಸುಗಳನ್ನು ಮೇಯಿಸಲು ಕಾಡಿನಲ್ಲಿ ಬಿಟ್ಟು ಬರುವುದು ವಾಡಿಕೆ. ಹಾಗೆಯೇ ಹಸುಗಳು ಮರಳಿ ಸಂಜೆ ವೇಳೆ ಬರುವ ವೇಳೆಗೆ ಜಮೀನಿನ ಸಮೀಪದಲ್ಲಿ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ತಿಂದು ಹಾಕಿದೆ. ಹೀಗಾಗಿ ರೈತ ಕಂದನಿಗೆ ಸಾವಿರಾರು ರೂ ನಷ್ಟ ಉಂಟಾಗಿದೆ.
ಚಿರತೆ ದಾಳಿ ಮೊದಲಲ್ಲ: ಈ ಭಾಗದಲ್ಲಿ ಆಗಿಂದಾಗೆ ಚಿರತೆ ದಾಳಿ ಮಾಡುತ್ತಿದ್ದೂ ಸಾಕು ಪ್ರಾಣಿಗಳಾದ ನಾಯಿ, ಮೇಕೆ ಕುರಿ ತಿನ್ನುತ್ತಿದೆ. ಹಾಗಾಗಿ ಚಿರತೆ ದಾಳಿ ಈ ಭಾಗದಲ್ಲಿ ಮಿತಿ ಮೀರಿದ್ದು ತೋಟದ ಮನೆಗಳ ಜನರು ಭಯ ಭೀತರಾಗಿದ್ದಾರೆ. ಹಾಗಾಗಿ ಚಿರತೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಪರಿಹಾರ ನೀಡಿ: ಸುಮಾರು 30 ಸಾವಿರ ರೂ ಬೆಲೆ ಬಾಳುವ ಹಸುವನ್ನು ಕಳೆದುಕೊಂಡ ರೈತ ಸಾಲದ ಸುಳಿಯಲ್ಲಿ ಸಿಲುಕಿದಂತಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕು ಎಂದು ರೈತ ಕಂದ ಆಗ್ರಹ ಮಾಡಿದ್ದಾರೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಳೆಯ…
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮ್‌ಗಳನ್ನು ಅಳವಡಿಸಲಾಗಿದೆ ಎಂದು…
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ವಿಶ್ವನಾಥ್…
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ಕಾವೇರಿ…
ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…