ಪರಿಸರ, ಸಾವಯವ ಕೃಷಿ, ವನ್ಯಮೃಗಗಳ ರಕ್ಷಣೆಯ ಸಂದೇಶ ಸಾರಿದ ಚಿತ್ರಗಳು
ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಕಡೆಯ ದಿನ ಪರಿಸರ ಸಂರಕ್ಷಣೆ ಮತ್ತು ಪ್ರಕೃತಿ ಸೌಂದರ್ಯ, ವನ್ಯಜೀವಿ ಸಂರಕ್ಷಣೆ, ಸಾವಯವ ಕೃಷಿಯ ಮಹತ್ವ ಸಾರುವ ಚಿತ್ರ ಮತ್ತು ಕಿರುಚಿತ್ರಗಳು ಪ್ರದರ್ಶನಗೊಂಡವು. ವಿಶೇಷವೆಂದರೆ ವರನಟ ಡಾ.ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರ ಪ್ರದರ್ಶನ ಮೆರುಗು ತಂದಿತು.
ಬೆಳಿಗ್ಗೆ ೧೦.೩೦ಕ್ಕೆ ಆರಂಭವಾದ ಚಿತ್ರೋತ್ಸವದ ಮೊದಲ ಪ್ರದರ್ಶನವು 53 ನಿಮಿಷದ ಪ್ರಿಯಾ ತುವಾಸ್ಸೆರಿ ನಿರ್ದೇಶನದ ‘ಕೊರಲ್ ವುಮೆನ್’(ಇಂಗ್ಲಿಷ್) ಚಿತ್ರವು ಚೆನ್ನೈನ ಉಮಾ ಮಣಿ ಎಂಬ ಗೃಹಿಣಿ ತನ್ನ ಜೀವನವಿಡೀ ಸಮುದ್ರದಾಳದ ಹವಳದ ದಂಡೆ ಮತ್ತು ಅಲ್ಲಿನ ಜಲಚರಗಳ ರಕ್ಷಣೆಗೆ ದುಡಿದ ಕುರಿತು ಬೆಳಕು ಚೆಲ್ಲಿತು.
‘ಕೊರಲ್ ವುಮೆನ್’: 49ರ ಹರೆಯದಲ್ಲಿ ಸ್ವತಃ ಹವಳದ ದಂಡೆಗಳನ್ನು ನೋಡುವ ಆಸೆಯಾಗಿ ಸಾಗರದಲ್ಲಿ ಇಳಿದು ಮುಳುಗು ಈಜು ತರಬೇತಿ ಪಡೆಯುವ ಉಮಾಮಣಿ, ಒಮ್ಮೆ ನೀರಿಗಿಳಿದ ಮೇಲೆ ಆಕೆಯ ಕಣ್ಣೆದುರು ಸುಂದರವಾದ ವರ್ಣ ರಂಜಿತ ಹವಳಗಳನ್ನಷ್ಟೆ ಕಾಣದೆ ಅವುಗಳಿಗೆ ಒದಗಿರುವ ತೊಂದರೆಗಳೂ ಅರಿವಿಗೆ ಬರುತ್ತವೆ. ಜಾಗತಿಕ ತಾಪಮಾನ, ಸಮುದ್ರದ ಆಮ್ಲೀಕರಣ, ನಗರದ ಬಚ್ಚಲುಗಳ ಕೊಳಕು ನೀರಿನ ಸೇರ್ಪಡೆಯಾಗುತ್ತಿರುವುದರ ಪರಿಣಾಮಗಳು ಉಮಾಳ ಮನಸ್ಸಿಗೆ ತಾಗುತ್ತದೆ. ಸುಮ್ಮನೆ ಕೊರದೆ ಅದನ್ನು ಸರಿಪಡಿಸಲು ಕೂಡಲೇ ಕಾರ್ಯ ಪ್ರವೃತ್ತಳಾಗುವ ಸಂದೇಶವನ್ನು ಈ ಚಿತ್ರ ಸಾರಲಿದೆ.
‘ದಿ ಸ್ಟಾರ್ಕ್ ಸೇವಿಯರ್ಸ್’: ೨೮ ನಿಮಿಷದ ಇಂಗ್ಲಿಷ್ ಭಾಷೆಯ ‘ದಿ ಸ್ಟಾರ್ಕ್ ಸೇವಿಯರ್ಸ್’ ಚಿತ್ರ ಪ್ರದರ್ಶನ ಕಂಡಿತು. ವನ್ಯಜೀವಿ ಛಾಯಾಗ್ರಹಣದಲ್ಲಿ ಮೂರನೇ ತಲೆಮಾರಿನವರಾದ ವಿಜೈ ಮತ್ತು ಅಜೈಬೇಡಿ ಸಹೋದರರು ಅಸ್ಸಾಮಿನ ಗೌಹಾಟಿ ಬಳಿಯ ಚೌಗು ಪ್ರದೇಶದಲ್ಲಿನ ಅಡ್ಜೆಟೆಂಟ್ ಸ್ಟಾರ್ಕ್ ಎಂಬ ಪಕ್ಷಿಯ ಉಳಿವಿಗಾಗಿ ಮಾಡುವ ಸಾಹಸ ಮತ್ತು ಅದರ ಪ್ರತಿಫಲವನ್ನು ದಾಖಲಿಸುತ್ತಾರೆ. ವಿನಾಶದಂಚಿನಲ್ಲಿರುವ ತನ್ನೂರಿನ ಪಕ್ಷಿಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತ ಪೂರ್ಣಿಮಾ ಬರ್ಮನ್‌ರ ಮಹಿಳಾ ತಂಡ ತಮಗೊದಗಿ ಬರುವ ಯಾವ ಅವಕಾಶವನ್ನೂ ಬಿಡದೆ ಪಕ್ಷಿ ಸಂರಕ್ಷಣೆಗೆ ಬೇಕಾದ ಅವಶ್ಯಕತೆಗಳನ್ನು ಪಡೆಯಲು ಬಳಸುತ್ತಾರೆ. ಎಲ್ಲೆಲ್ಲೂ ಮಾನವ-ಪ್ರಾಣಿ ಸಂಘರ್ಷವೇ ಸದ್ದು ಮಾಡುತ್ತಿರುವಾಗ ಪೂರ್ಣಿಮಾಳ ಪ್ರಯತ್ನಗಳು ಹಾಗೂ ಈ ಬಗೆಗಿನ ಸಾಕ್ಷ್ಯಚಿತ್ರಗಳು ಅತೀ ಮುಖ್ಯ ಎನಿಸುವ ಮಹತ್ವವನ್ನು ಚಿತ್ರ ಪರಿಣಾಮಕಾರಿಯಾಗಿ ತಿಳಿಸಿತು.
ನಂತರ ಮಧ್ಯಾಹ್ನ ೧೨ಕ್ಕೆ ರಾಸಾಯನಿಕ ಕೃಷಿಯನ್ನು ತಿರಸ್ಕರಿಸಿ ನಡೆಸುವ ಕ್ರಾಂತಿಯ ದರ್ಶನ ಮಾಡಿಸುವ ೨೮ ನಿಮಿಷದ ಟಿಂಬಿಕ್ಟು ಸಿನಿಮಾ ಪ್ರೇಕ್ಷಕರಿಗೆ ಸಾವಯವ ಕೃಷಿಯ ಮೌಲ್ಯವನ್ನು ಸಾರಿತು. ಮಣ್ಣು ಮತ್ತೆ ಉಸಿರಾಡಲು ಆರಂಭಿಸಿದ ಭೂಮಿ-ಟಿಂಬಕ್ಟು, ನಕ್ಷೆಯ
ಲ್ಲಿ ಇಲ್ಲದ ಗ್ರಾಮ. ಇಲ್ಲಿರುವವರು ಪ್ರೀತಿಯಿಂದ ಜೀವನವನ್ನು ಆನಂದಿಸುವ ಜನರು. ದಕ್ಷಿಣ ಭಾರತದಲ್ಲಿನ ಒಂದು ಸಣ್ಣ ರೈತ ಸಮುದಾಯವು ತಮ್ಮ ದಶಕಗಳ ಹಿಂದಿನ ರಾಸಾಯನಿಕ ಕೃಷಿಗೆ ಬದಲಾಗುವ ನಿರ್ಧಾರ ಕೈಗೊಂಡಾಗ, ಅವರು ಮೌನ ಕ್ರಾಂತಿಯ ಬೀಜಗಳನ್ನು ನೆಡುತ್ತಿದ್ದಾರೆ ಎಂದು ತಿಳಿದಿರಲಿಲ್ಲ. ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿಯ ರೈತರ ಅನುಕರಣೀಯ ಪ್ರಯತ್ನಗಳನ್ನು ಪ್ರದರ್ಶಿಸುವ ಮೂಲಕ ಸಾಕ್ಷ್ಯ ಚಿತ್ರವು ಅಹಾರ ಭದ್ರತೆ ಮತ್ತು ಸಾರ್ವಭೌಮತ್ವದ ನಿರ್ಣಾಯಕ ಸಮಸ್ಯೆಗಳನ್ನು ಪರಿಶೋಧಿಸಿತು.
ಗಮನಸೆಳೆದ ‘ಸೌಹೃದ’ ಚಿತ್ರ
೧೮ ನಿಮಿಷದಲ್ಲಿ ಕೇರಳದ ವೈನಾಡಿನ ಪ್ರಕೃತಿ ಸೊಬಗು ಮತ್ತು ಅಲ್ಲಿನ ಜೀವನ ಪ್ರೀತಿಯನ್ನು ಕಟ್ಟಿಕೊಟ್ಟಿರುವ ‘ಸೌಹೃದ’ ಮಲೆಯಾಳಂ ಸಿನಿಮಾ ಗಮನಸೆಳೆಯಿತು.
೨೫ನೇ ದಿನ ಭತ್ತದ ಸಸಿಯನ್ನು ಒಟ್ಟಲು ಪಾತಿಯಿಂದ ಗದ್ದೆಗಳಿಗೆ ನಾಟಿ ಮಾಡುವ ದಿನ. ಸೌಹೃದ ಸಮುದಾಯದ ರೈತರು ಗದ್ದೆಗಳಿಗಿಳಿಯುತ್ತಿದ್ದಂತೆ ಕೇರಳದ ವೈನಾಡಿನ ಕಾಡು ಕಣಿವೆಗಳಲ್ಲಿ ಸಂಗೀತ ಮೊಳಗುತ್ತದೆ. ಡೋಲು, ದುಡಿ, ಚಿಟ್ಟಿಮೇಳ ಮುಂತಾದ ಸಾಂಪ್ರಾದಾಯಿಕ ವಾದ್ಯಗಳನ್ನು ತೆವರಿಯ ಮೇಲೆ ನಿಂತು ನಿಡಿಸಿದರೆ ಅಬಾಲವೃದ್ಧರಾದಿಯಾಗಿ ನೃತ್ಯಗೈಯುತ್ತಾ ಭತ್ತದ ನಾಟಿಯಲ್ಲಿ ತೊಡಗಿ ಸಂಭ್ರಮಿಸುತ್ತಾರೆ. ಈ ಸಾಕ್ಷ್ಯಚಿತ್ರವು ವೈನಾಡಿನ ಮಾಯಾಲೋಕವೆನಿಸುವ ಕಣಿವೆ ಹಾಗೂ ಜೀವನ ಪ್ರೀತಿಗೆ ಹಿಡಿದ ಕನ್ನಡಿಯಂತಿತ್ತು.
ಕಾಡಿನ ಸಂರಕ್ಷಣೆ ಸಂದೇಶ ಸಾರಿದ ಗಂಧದ ಗುಡಿ
ವರನಾಟ ಡಾ.ರಾಜ್‌ಕುಮಾರ್ ಅವರ ಅಭಿನಯದ ವನ್ಯಜೀವಿ ಮತ್ತು ಕಾಡಿನ ಸಂರಕ್ಷಣೆಯ ಸಂದೇಶ ಸಾರುವ ಗಂಧದ ಗುಡಿ ಪ್ರದರ್ಶನ ಗೊಂಡು ಚಿತ್ರೋತ್ಸವಕ್ಕೆ ಮೆರಗು ನೀಡಿತು. ಹಿರಿಯ ನಿರ್ಮಾಪಕ ಎಂ.ಪಿ.ಶಂಕರ್ ನಿರ್ಮಿಸಿ ವಿಜಯ್ ನಿರ್ದೇಶನದ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹಲವು ವಿಶಿಷ್ಟತೆಗಳನ್ನು ತೋರಿತು. ಈ ಚಿತ್ರವು ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಾತನ್ನಾಡುವ ಮೊದಲ ಚಿತ್ರವೆನಿಸಿದ್ದು, ಇದರ ಯಶಸ್ಸನ್ನು ಹಿಂದಿ ಮತ್ತು ತೆಲುಗಿನಲ್ಲಿಯೂ ಅನುಕರಿಸಲಾಯಿತು. ಡಾ.ರಾಜ್ ಒಬ್ಬ ಅರಣ್ಯ ರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡಿಗರ ಪರಿಸರ ಪ್ರೇಮಕ್ಕೆ ಹೊಸ ಆಯಾಮವನ್ನು ನೀಡಿದರು.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…